Advertisement

ದ್ರಾಕ್ಷಿ ಉತ್ತಮ ಇಳುವರಿ: ಹರ್ಷ

02:40 PM Apr 23, 2022 | Team Udayavani |

ಗೌರಿಬಿದನೂರು: ತಾಲೂಕಿನ ಡಿ.ಪಾಳ್ಯ ಹೋಬಳಿ ಸಾರಗೊಂಡ್ಲು ಗ್ರಾಮದ ಪ್ರಗತಿಪರ ರೈತ ಗಂಗರೆಡ್ಡಿ ದಿಲ್‌ಖುಷ್‌ ದ್ರಾಕ್ಷಿಬೆಳೆಯಲ್ಲಿ ಉತ್ತಮ ಫ‌ಸಲನ್ನು ಪಡೆದಿದ್ದು ಉತ್ತಮ ಲಾಭ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ದಿಲ್‌ ಕುಶ್‌, ದ್ರಾಕ್ಷಿ ಪ್ರತಿ ಕೆ.ಜಿ.ಗೆ ದ್ರಾಕ್ಷಿ 30- 34 ರೂ.ಗೆ ಹೋಲ್‌ಸೇಲ್‌ ಬೆಲೆಯಲ್ಲಿ ಮಾರಾಟವಾಗು ತ್ತಿದೆ. ಮಣ್ಣಿನ ಗುಣ ಹಾಗೂ ವಿಶಿಷ್ಟ ಹವಾಮಾನ ದಿಂದಾಗಿ ಇಲ್ಲಿ ಬೆಳೆವ ದಿಲ್‌ಖುಷ್‌ ದ್ರಾಕ್ಷಿ ಸ್ವಾದಿಷ್ಟವಾ ಗಿದೆ. ಅಷ್ಟು ಹುಳಿಯೂ ಅಲ್ಲದ ಸಿಹಿ ಸಿಹಿಯಾಗಿರುವ ಈ ದ್ರಾಕ್ಷಿಗೆ ಬೇರೆ ರಾಜ್ಯಗಳಲ್ಲಿ ಉತ್ತಮ ಬೇಡಿಕೆ ಇದೆ ಹೆಚ್ಚಿನ ಮುತುವರ್ಜಿಯಿಂದ ಬೆಳೆ ಯನ್ನು ನಿರ್ವಹಣೆ ಮಾಡಿರುವುದರಿಂದ ಈ ಬಾರಿ ಉತ್ತಮ ಆದಾಯ ಬಂದಿದೆ ಎಂದಿದ್ದಾರೆ.

ಎರಡು ವರ್ಷದಿಂದ ಕೊರೊನಾದಿಂದ ಬೆಳೆದ ಬೆಳೆಗೆ ಬೆಲೆಯಿಲ್ಲದೆ ತೀವ್ರ ಸಂಕಷ್ಟ ಅನುಭವಿಸಿದ್ದೆವು. ಈ ವರ್ಷ ಸಹಜವಾಗಿ ಬೇಡಿಕೆ ಹೆಚ್ಚಾಗಿದೆ.  ಜತೆಗೆ ಉಷ್ಣಾಂಶದಿಂದಾಗಿ ಬೆಳೆಗಳು ಸರಿಯಾಗಿ ಆಗದೆ ಇರುವುದರ ಪರಿ ಣಾಮವಾಗಿ ದ್ರಾಕ್ಷಿಯ ಬೆಲೆ ಗಗನಕ್ಕೇರಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ತಾಲೂಕಿನ ಡಿ.ಪಾಳ್ಯ ಹೋಬಳಿ ಸಾರಗೊಂಡ್ಲು ಗ್ರಾಮದ ರೈತ ಗಂಗರೆಡ್ಡಿ ದ್ರಾಕ್ಷಿಬೆಳೆಯನ್ನು ಸವಾಲಾಗಿ ಸ್ವೀಕರಿಸಿ ಕಳೆದ 5ವರ್ಷದಿಂದ ಉತ್ತಮ ಬೆಳೆಯನ್ನು ಬೆಳೆಯುತ್ತಿದ್ದಾರೆ ಎಂದರು.

ಗುಣಮಟ್ಟ ಹಾಗೂ ಬೇಡಿಕೆ ಹೆಚ್ಚಾಗಿರು ವುದರಿಂದ ವ್ಯಾಪಾರಸ್ಥರೇ ತೋಟಕ್ಕೆ ಬಂದು ಹಣ ಪಾವತಿಸಿ ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ. ಸರಿಯಾಗಿ ನಿರ್ವಹಣೆ ಮಾಡಿದರೆ 15 ರಿಂದ 20ವರ್ಷ ದ್ರಾಕ್ಷಿಯ ಬೆಳೆಯನ್ನು ಬೆಳೆಯಬಹುದು. ಇಲ್ಲಿನ ದ್ರಾಕ್ಷಿಗೆ ವಿವಿಧ ರಾಜ್ಯಗಳಿಂದ ಬೇಡಿಕೆಯಿದೆ. ಹೆಚ್ಚಾಗಿ ಕೇರಳ, ತಮಿಳುನಾಡು, ರಾಜಾಸ್ತಾನ, ದೆಹಲಿ, ಮುಂಬೈಗೆ ರಪ್ತಾಗುತ್ತದೆ ಎಂದು ರೈತ ಗಂಗರೆಡ್ಡಿ ತಿಳಿಸಿದರು.

Advertisement

ದಾಕ್ಷಿ ಬೆಳೆಗೆ ನರೇಗಾದಿಂದ ಅನುದಾನ : ಗೌರಿಬಿದನೂರು ತಾಲೂಕಿನಲ್ಲಿ ಸುಮಾರು 65 ಹೆಕ್ಟೇರ್‌ನಲ್ಲಿ ವಿವಿಧ ತಳಿಯ ದ್ರಾಕ್ಷಿಯನ್ನು ಬೆಳೆಯುತ್ತಿದ್ದಾರೆ ಹೆಚ್ಚಾಗಿ ಮಂಚೇನಹಳ್ಳಿ ಹೋಬಳಿಯಲ್ಲಿ ದ್ರಾಕ್ಷಿಯನ್ನು ಬೆಳೆಯುತ್ತಾರೆ. ದ್ರಾಕ್ಷಿಬೆಳೆಗೆ ಬಂಡವಾಳ ಹೆಚ್ಚಿಗೆ ಹೂಡಬೇಕು ಹಾಗೂ ನಿರ್ವಹಣೆ ಕಷ್ಟ ಎಂಬ ಕಾರಣದಿಂದ ಈ ತಾಲೂಕಿನ ರೈತರು ದ್ರಾಕ್ಷಿ ಬೆಳೆಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ತೋಟಗಾರಿಕೆ ಇಲಾಖೆಯಿಂದ ದ್ರಾಕ್ಷಿಬೆಳೆ ಪ್ರಾರಂಭಿಸಲು ನರೇಗಾದಿಂದ ಅನುದಾನ ನೀಡಲಾಗುತ್ತಿದ್ದು, ರೈತರು ಇದರ ಲಾಭವನ್ನು ಪಡೆದು ಹೆಚ್ಚು ದ್ರಾಕ್ಷಿಬೆಳೆ ಬೆಳೆಯಬೇಕು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್‌ ತಿಳಿದರು.

16 ಲಕ್ಷ ಆದಾಯ:  5 ವರ್ಷಗಳಿಂದ ದ್ರಾಕ್ಷಿ ಬೆಳೆಯುತ್ತಿದ್ದೇವೆ ನಮಗೆ ನಷ್ಟವೆಂಬುದೇ ಇಲ್ಲ ಇದಕ್ಕೆ ಕಾರಣ ಇದರ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಮಾಡುತ್ತೇವೆ. 2017ರಲ್ಲಿ 4 ಎಕರೆಗೆ ದ್ರಾಕ್ಷಿ ಗಿಡಗಳನ್ನು ನಾಟಿ ಮಾಡಿದ್ದು ಕೂಲಿಗೆ 1ಲಕ್ಷ ಔಷಧಿ, ಬೇವಿನ ಹಿಂಡಿ, ಕಡಲೆಹಿಂಡಿ, ಹೊಂಗೆ ಹಿಂಡಿ ಕೊಟ್ಟಿಗೆ ಗೊಬ್ಬರ 20ಟನ್‌, ಇದಕ್ಕೆ ಬರುವ ಬೂದಿರೋಗ(ರೆಡ್‌ ಮೆಟ್ಸ್‌ ರೋಗ) ನಿರ್ವಹಣೆಗೆ ವೆಚ್ಚ, ದ್ರಾಕ್ಷಿಗೊನೆ ಯನ್ನು ಕಟ್ಟಿಸುವುದು, ಚಿಗುರು ಕೀಳು ವುದು ಸೇರಿ 4ಲಕ್ಷವನ್ನು ವೆಚ್ಚ ಮಾಡಲಾ ಗಿದೆ 16ಲಕ್ಷ ಆದಾಯ ಬಂದಿದೆ ಎಂದರು. ಈ ವರ್ಷದಷ್ಟು ಉತ್ತಮ ಇಳುವರಿ ಹಾಗೂ ಹೆಚ್ಚಿನ ಬೆಲೆ ಯಾವ ವರ್ಷವೂ ಬಂದಿರಲಿಲ್ಲ. ಈ ಋತುವಿ ನಲ್ಲಿ ಅಲ್ಪಪ್ರಮಾಣದ ರೈತರು ಮಾತ್ರವೇ ದ್ರಾಕ್ಷಿ ಇಟ್ಟುಕೊಂಡಿದ್ದಾರೆ. ಸರ್ಕಾರ ವೈಜ್ಞಾನಿಕವಾಗಿ ಮಾರುಕಟ್ಟೆಯ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಗಂಗರೆಡ್ಡಿ ಒತ್ತಾಯಿಸಿದರು.

 

-ವಿ.ಡಿ.ಗಣೇಶ್‌, ಗೌರಿಬಿದನೂರು

Advertisement

Udayavani is now on Telegram. Click here to join our channel and stay updated with the latest news.

Next