ಬರಗೂರು: ಉಪ ಚುನಾವಣೆಯಲ್ಲಿ ಗೆದ್ದ ನಂತರ ಸರ್ಕಾರದ ಮೇಲೆ ಒತ್ತಡ ಹಾಕಿ ಅಪ್ಪರ್ ಭದ್ರ ನೀರಾವರಿ ಯೋಜನೆಗೆ 1151 ಕೋಟಿ ರೂ. ಅನುದಾನ ತಂದಿದ್ದೇನೆ. ನನ್ನನ್ನು ಶಾಸಕ ಅಂತ ಕಾಣಬೇಡಿ, ನಿಮ್ಮ ಕುಟುಂಬದ ಸದಸ್ಯ ಎಂದು ಭಾವಿಸಿ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಹೇಳಿದರು.
ಶಿರಾ ತಾಲೂಕಿನ ದೊಡ್ಡಬಾಣಗೆರೆ ಗ್ರಾಪಂ ಸದಸ್ಯರ ಮನವಿ ಮೇರೆಗೆಸ್ವಂತ ವೆಚ್ಚದಲ್ಲಿ ಮೋಟಾರ್ ಮತ್ತು ಪಂಪ್ ಕೊಡಿಸಿ ಮಾತನಾಡಿದರು.ಅಪ್ಪರ್ ಭದ್ರ ನೀರಾವರಿ ಯೋಜನೆ ಕಾಮಗಾರಿಶೀಘ್ರಪ್ರಾರಂಭವಾಗಲಿದ್ದು, 2 ವರ್ಷ ದಲ್ಲಿ ಕಾಮಗಾರಿ ಪೂರ್ಣಗೊಂಡು ಶಿರಾ ತಾಲೂಕಿನ 70 ಕೆರೆ ಭರ್ತಿಯಾಗಲಿವೆ ಎಂದರು.
ಹೇಮೆ ಮತ್ತೆ ಹರಿಯಲಿದೆ: ಮದಲೂರು ಕೆರೆ ನೀರು ಭರ್ತಿ ಸಾಮರ್ಥ್ಯ250 ಎಂಟಿಎಫ್ ಇದೆ. ಆದರೆ, ಇದಕ್ಕಿಂತ5 ಪಟ್ಟು ಜಾಸ್ತಿ ನೀರು ಬಿಟ್ಟಿದ್ದೇವೆ. 30 ವರ್ಷಗಳಿಂದ ನೀರು ಕಾಣದ ಕೆರೆ ಯಲ್ಲಿ ಏಕಾಏಕಿ ನೀರು ಬಿಟ್ಟರೆ ಭರ್ತಿ ಆಗುವುದು ಕಷ್ಟ ಸಾಧ್ಯ. ಈ ಬಾರಿಹೇಮೆ ಜಲಾಶಯ ಭರ್ತಿಯಾದರೆಮತ್ತೆ ಮದಲೂರು ಕೆರೆಗೆ ನೀರು ಹರಿಯಲಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಹೇಳಿದರು.
ಅಲ್ಲದೇ, ತಾನು ಶಾಸಕನಾದ ನಂತರ, ವೃದ್ಧ ಮತ್ತು ಅಂಗವಿಕಲರ ಮನೆಬಾಗಿಲಿಗೆ ಹೋಗಿ ಮಾಸಾಶನಮಂಜೂರಾತಿ ಪತ್ರ ನೀಡಿದ್ದೇನೆಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜೆà ಗೌಡ, ಗ್ರಾಪಂ ಅಧ್ಯಕ್ಷ ಗೌರಮ್ಮ ನರ ಸಿಂಹಯ್ಯ, ಉಪಾಧ್ಯಕ್ಷ ರಾಜಣ್ಣ,ಸದಸ್ಯರಾದ ರಂಗನಾಥ್, ಟಿ.ಕುಮಾರ್,ಆಶಾ ನಾಗೇಂದ್ರ, ಪುಟ್ಟಮ್ಮ, ತಿಪ್ಪೇಸ್ವಾಮಿ, ನಾಗರಾಜು ಮುಖಂಡನರಸಪ್ಪಕೆ.ದೊಡ್ಡಬಾಣಗೆರೆ,ಸಣ್ಣೀರಪ್ಪ, ಶ್ರೀಧರ್, ಹನುಮಂತರಾಯಪ್ಪ,ಪಿಡಿಒ ವಿಜಯಕುಮಾರ್, ಕಾರ್ಯ ದರ್ಶಿ ಕಿರಣ್‌ಕುಮಾರ್ ಇದ್ದರು.