Advertisement
ಜಿಲ್ಲೆಯಲ್ಲಿ ಎಂಡೋ ಸಂತ್ರಸ್ತರಿ ಗಾಗಿ ಶಾಶ್ವತ ಪುನರ್ವಸತಿ ಕೇಂದ್ರ ಬೇಕು ಎಂಬ ಬೇಡಿಕೆ ಹಲವು ವರ್ಷಗಳ ಹಿಂದಿನದು. ಅದಕ್ಕಾಗಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾ ವನೆಯೂ ಸಲ್ಲಿಕೆಯಾಗಿದೆ. ಶಾಶ್ವತ ಕೇಂದ್ರಕ್ಕೆ ಬಹಳ ಹಿಂದೆಯೇ ಆಲಂಕಾರು ಹಾಗೂ ಕೊಕ್ಕಡ ದಲ್ಲಿ ಜಾಗ ಗುರುತಿಸಲಾಗಿದೆ.
Related Articles
Advertisement
1.77 ಕೋ.ರೂ.ಗಳಲ್ಲಿ 4 ಕಟ್ಟಡವಿಟ್ಲದಲ್ಲಿ 47 ಲಕ್ಷ ರೂ., ಕಣಿಯೂರಿನಲ್ಲಿ 20.91 ಲಕ್ಷ ರೂ., ಪಾಣಾಜೆಯಲ್ಲಿ 47.20 ಲಕ್ಷ ರೂ. ಹಾಗೂ ಬೆಳ್ಳಾರೆಯಲ್ಲಿ 62 ಲಕ್ಷ ರೂ. ಸಹಿತ ಆರೋಗ್ಯ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಮೂಲಕ ಸುಮಾರು 1.77 ಕೋ.ರೂ.ಗಳಲ್ಲಿ 4 ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸಂತ್ರಸ್ತರ ವೈದ್ಯಕೀಯ ವ್ಯವಸ್ಥೆಯ ಅನುಕೂಲದ ದೃಷ್ಟಿಯಿಂದ ಸ್ಥಳೀಯ ಆರೋಗ್ಯ ಕೇಂದ್ರಗಳ ಆವರಣದಲ್ಲೇ ಕಟ್ಟಡ ನಿರ್ಮಾಣ ಮಾಡಲಾಗಿದೆ. ಜತೆಗೆ ಪ್ರತಿಯೊಂದು ಕೇಂದ್ರಕ್ಕೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಕಾರ್ಯ 2023ರ ನವೆಂಬರ್‌ಗಿಂತ ಮುನ್ನವೇ ನಡೆದಿದೆ. ನಿರ್ವಹಣೆಗೆ 2-3 ಲಕ್ಷ ರೂ. ಅಗತ್ಯ
ಎಂಡೋ ಸಂತ್ರಸ್ತರನ್ನು ವಾಹನದ ಮೂಲಕ ಹಗಲು ಹೊತ್ತಿನಲ್ಲಿ ಪಾಲನಾ ಕೇಂದ್ರಕ್ಕೆ ಕರೆತಂದು ಸಂಜೆಯ ವರೆಗೆ ಆರೈಕೆ ಮಾಡಿ ರಾತ್ರಿ ಮತ್ತೆ ಮನೆಗೆ ಕರೆದುಕೊಂಡು ಹೋಗುವುದು ಕೇಂದ್ರದ ಉದ್ದೇಶ. ಈ ರೀತಿ ಕಾರ್ಯಾಚರಿಸುವ ಕೇಂದ್ರಗಳ ನಿರ್ವಹಣೆಗೆ ತಿಂಗಳಿಗೆ 2ರಿಂದ 3 ಲಕ್ಷ ರೂ. ಬೇಕಾಗುತ್ತವೆ. ಕೇಂದ್ರಕ್ಕೆ ಸಿಬಂದಿ ನಿಯೋಜಿಸಿ ಮುನ್ನಡೆಸಿಕೊಂಡು ಹೋಗಲು ಎನ್‌ಜಿಒ ಸಂಸ್ಥೆಯನ್ನು ಆಯ್ಕೆ ಮಾಡುವ ದೃಷ್ಟಿಯಿಂದ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕಳೆದ ನವೆಂಬರ್‌ನಲ್ಲಿ ಆರೋಗ್ಯ ಇಲಾಖೆ ತಿಳಿಸಿತ್ತು. ಆದರೆ ಇನ್ನೂ ಸರಕಾರ ಅನುದಾನ ಬಿಡುಗಡೆ ಮಾಡದ ಕಾರಣ ಕೇಂದ್ರದ ಉದ್ದೇಶ ಈಡೇರಿಕೆ ಸಾಧ್ಯವಾಗಿಲ್ಲ. -ದ.ಕ.ದಲ್ಲಿ ಪ್ರಸ್ತುತ 2 ಕೇಂದ್ರಗಳಿವೆ
-ನಾಲ್ಕು ಹೆಚ್ಚುವರಿ ಕೇಂದ್ರಗಳಿಗೆ ಕಟ್ಟಡ ಸಿದ್ಧ
-ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ
-ಅನುದಾನ ಲಭಿಸಿದರೆ ಕಾರ್ಯಾಚರಣೆಗೆ ಅನುವು ಎಂಡೋ ಪಾಲನಾ ಕೇಂದ್ರಗಳ ಕಟ್ಟಡ ನಿರ್ಮಾಣ ಗೊಂಡಿದ್ದರೂ ನಿರ್ವಹಣೆಗೆ ಅನುದಾನ ಬಾರದೆ ಇರುವುದರಿಂದ ಕೇಂದ್ರಗಳ ಕಾರ್ಯಾರಂಭ ಸಾಧ್ಯವಾಗಿಲ್ಲ. ಬಜೆಟ್ ಮೂಲಕ ಅನುದಾನ ಮೀಸಲಿರಿಸಿ ಬಳಿಕ ಮಂಜೂರಾಗಬೇಕಿದ್ದು, ಈ ವರ್ಷದ ಯೋಜನೆಯಲ್ಲಿ ಅನು ದಾನ ಮೀಸಲಿಡುವ ಸಾಧ್ಯತೆ ಇದೆ.
-ಡಾ| ನವೀನ್‌ಚಂದ್ರ ಕುಲಾಲ್
ನೋಡಲ್ ಅಧಿಕಾರಿ, ಎಂಡೋಸಲ್ಫಾನ್ ಕೋಶ, ದ.ಕ. ಜಿಲ್ಲೆ -ಕಿರಣ್ ಸರಪಾಡಿ