Advertisement

ಕೃಷಿ ಯಂತ್ರೋಪಕರಣ ಬಳಸಲು ಅನುದಾನ

09:55 PM Dec 29, 2019 | Lakshmi GovindaRaj |

ಹುಣಸೂರು: ಕೃಷಿ ಉತ್ತೇಜನಕ್ಕಾಗಿ ಯಂತ್ರೋಪಕರಣ ಬಳಸಲು ಅನುದಾನ ನೀಡುತ್ತಿದೆ. ಹೈನುಗಾರಿಕೆಗೆ ಉತ್ತೇಜನ, ಸೋಲಾರ್‌ ವ್ಯವಸ್ಥೆ ಕಲ್ಪಿಸಲು ಸಾಕಷ್ಟು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್‌ ನಾಗನಾಳ ತಿಳಿಸಿದರು.

Advertisement

ತಾಲೂಕಿನ ಗದ್ದಿಗೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರೀಮುದ್ದನಹಳ್ಳಿ ವಲಯದ ಪ್ರಗತಿಬಂಧು ಸ್ವಸಹಾಯಸಂಘಗಳ ಒಕ್ಕೂಟದಿಂದ ನಡೆದ ಸತ್ಯನಾರಾಯಣಪೂಜೆ ಹಾಗೂ ಒಕ್ಕೂಟಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಜನರಲ್ಲಿ ಉಳಿತಾಯ ಮನೋಭಾವ, ಸ್ವಯಂ ಉದ್ಯೋಗ, ಆರ್ಥಿಕ ಪ್ರಗತಿ ಹೆಚ್ಚಿಸಲು, ಕೌಶಲ್ಯತೆ ವೃದ್ಧಿಸಲು, ಕೃಷಿ ಬಗ್ಗೆ ತಾಂತ್ರಿಕತೆ ಮೂಲಕ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ. ತಾಲೂಕಿನಲ್ಲಿ ಸ್ವಸಹಾಯ ಸಂಘಗಳು 11.09 ಕೋಟಿ ರೂ. ಉಳಿತಾಯ ಮಾಡಿದ್ದಾರೆ ಎಂದು ಶ್ಲಾ ಸಿದರು. ಮಾದಹಳ್ಳಿ ಮಠದ ಸಾಂಬಸದಾಶಿವಸ್ವಾಮೀಜಿ ಮಾತನಾಡಿ, ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ವಲಯದ ಬಸವನಹಳ್ಳಿ, ಕುಟುವಾಡಿ, ಸಿಂಗರಮಾರನಹಳ್ಳಿ, ಕರೀಮುದ್ದನಹಳ್ಳಿ, ಧರ್ಮಾಪುರ, ನಂಜಾಪುರ, ಹೊಸಪುರ, ಬೆಂಕಿಪುರ, ಒಡೇರಹೊಸಹಳ್ಳಿ, ತರಿಕಲ್ಲು ಒಕ್ಕೂಟಗಳ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ ಶಾಸಕ ಎಚ್‌.ಪಿ.ಮಂಜುನಾಥ್‌ ಭಾಗವಹಿಸಿದ್ದರು. ಈ ವೇಳೆ ತಾಲೂಕು ಯೋಜನಾಧಿಕಾರಿ ಯಶೋಧಾಶೆಟ್ಟಿ, ಗ್ರಾಪಂ ಅಧ್ಯಕ್ಷ ವೆಂಕಟೇಶ್‌, ಉಪಾಧ್ಯಕ್ಷೆ ಶಾರದಮ್ಮ, ಮಾಜಿ ಅಧ್ಯಕ್ಷ ರಾಜಶೇಖರ್‌, ಮುಖಂಡರಾದ ಕೆ.ಟಿ.ಗೋಪಾಲ್‌, ಸೂರ್ಯಕುಮಾರ್‌, ಮೇಲ್ವಿಚಾರಕರಾದ ಮೋಹಿನಿ, ಸುರೇಶ್‌, ತಾಪಂ ಮಾಜಿ ಅಧ್ಯಕ್ಷ ರಾಮಣ್ಣ, ಯ.ಪಾಪೇಗೌಡ, ಮುಖಂಡರಾದ ಕುಂಟೇಗೌಡ, ನಾಗೇಗೌಡ, ವಸಂತಕುಮಾರ್‌, ಶಿವರಾಮೇಗೌಡ, ರವೀಂದ್ರಕುಮಾರ್‌, ಸ್ವಾಮಿ, ರಘು, ಸೇವಾ ಪ್ರತಿನಿಧಿಗಳಾದ ಆಶಾ, ವಿನುತಾ, ಗೀತಾ, ರುಕ್ಮಿಣಿ, ಲೀಲಾ, ಜಯಶ್ರೀ, ಪುಟ್ಟಮ್ಮಣ್ಣಿ, ಸುನಿತಾ, ನೇತ್ರಾವತಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next