ಪುಟ್ಟ ಜನಸುಮುದಾಯವನ್ನು ಗಣನೆಗೆ ತೆಗೆದುಕೊಂಡು ಅನುದಾನ ನೀಡುತ್ತದೆ ಎಂದು ಶಾಸಕ ಡಾ| ಉಮೇಶ ಜಾಧವ್ ಹೇಳಿದರು.
Advertisement
ಇಲ್ಲಿನ ಮುಖ್ಯಬಜಾರ್‌ನಲ್ಲಿ ಭಾವಸಾರ ಕ್ಷತ್ರೀಯ ಸಮಾಜ ಮುಖಂಡರು ಹಮ್ಮಿಕೊಂಡ ಸನ್ಮಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ವ ಜನಾಂಗದ ವಿಕಾಸ ಬಯಸುವ ಪಕ್ಷವಾಗಿದೆ. ಸರ್ಕಾರ ನೀಡಿರುವ 40 ಲಕ್ಷ ರೂ. ಅನುದಾನವನ್ನು ಭಾವಸಾರ ಕ್ಷತ್ರೀಯ ಸಮಾಜದ ಮುಖಂಡರು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ, ಬರುವ ದಿನಗಳಲ್ಲಿ ಇನ್ನು 60 ಲಕ್ಷ ರೂ. ಅನುದಾನ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.