Advertisement
ವಿಟ್ಲ ಗ್ರಾಮದ ಸರ್ವೇಸದಸ್ಯ ರಾಮದಾಸ್ ಶೆಣೈ ಮಾತನಾಡಿ, ಪ್ರಾಧಿಕಾರದ ಮೂಲಕ ವಿಟ್ಲ ಗ್ರಾಮದ ಸರ್ವೇ ನಡೆಸಬೇಕು. ಅಭಿವೃದ್ಧಿಗೆ ಪೂರಕವಾಗುವ ಮತ್ತು ಈ ಗ್ರಾಮದ ಜನತೆಗೆ ಅಡ್ಡಿ-ಆತಂಕಗಳು ಎದುರಾಗದಂತೆ ಬಗೆಹರಿಸಬೇಕು ಎಂದು ಆಗ್ರಹಿಸಿದರು. ಅದಕ್ಕೆ ಉತ್ತರಿಸಿದ ಅಧ್ಯಕ್ಷರು, ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಮಾಡಬೇಕು. ಶಾಸಕರ ಸಮಯವನ್ನು ಹೊಂದಿಸಿ, ನಿಯೋಗ ತೆರಳಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸಬೇಕು ಎಂದರು.
ಸದಸ್ಯ ಅಬ್ದುಲ್ ರಹಮಾನ್ ನೆಲ್ಲಿಗುಡ್ಡೆ ಮಾತನಾಡಿ, ಕೇವಲ ಶಾಲಾ ರಸ್ತೆ ಮಾತ್ರವಲ್ಲ, ಎಲ್ಲ ನಾಲ್ಕು ರಸ್ತೆಯಲ್ಲಿ ದಾಖಲೆ ಇಲ್ಲದ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು. ಸದಸ್ಯ ಶ್ರೀಕೃಷ್ಣ ಮಾತನಾಡಿ, ಬಸ್ ನಿಲ್ದಾಣಕ್ಕೆ ಇಟ್ಟ ಅನುದಾನದಲ್ಲಿ ಕಚೇರಿಯ ಮುಂಭಾಗದಲ್ಲಿ ಛಾವಣಿ ನಿರ್ಮಾಣ ಮಾಡುವುದಾರೆ ಸಮಸ್ಯೆ ಇಲ್ಲ. ಅದು ಬಿಟ್ಟು ಬೇರೆ ಅನುದಾನದಲ್ಲಿ ಛಾವಣಿ ನಿರ್ಮಾಣ ಮಾಡಿ ಹಣ ಪೋಲು ಮಾಡುವುದು ಬೇಡ ಎಂದರು. ವಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ರಿಕ್ಷಾ ಪಾರ್ಕಿಂಗ್ ಸ್ಥಳದಲ್ಲಿ ಛಾವಣಿ ಮಾಡಬೇಕು. ಪಳಿಕೆ ತ್ಯಾಜ್ಯ ಘಟಕದಲ್ಲಿರುವ ಕುಟುಂಬಗಳಿಗೆ ಚಾಲಯವಿಲ್ಲ. ಅದಕ್ಕೆ ಕ್ರಮ ಕೈಗೊಳ್ಳಬೇಕು ಎಂದರು. ಮರಳು ಸಮಸ್ಯೆ
ಭೋವಿ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ಒದಗಿಸುವ ಬಗ್ಗೆ, ಪ್ರತಿ ಮನೆಗೆ ರಸ್ತೆ ಸಂಪರ್ಕ ಮಾಡುವ ಬಗ್ಗೆ, ಬಡವರು ಮನೆ ನಿರ್ಮಾಣ ಮಾಡಲು ಬೇಕಾದ ಮರಳು ಸಿಗದ ಬಗ್ಗೆ ಚರ್ಚೆ ನಡೆಯಿತು. ಈ ಸಮಸ್ಯೆಗಳನ್ನು ನಿವಾರಿಸಲು ಎಲ್ಲ ಸದಸ್ಯರು ಮತ್ತು ಶಾಸಕರು ಜಿಲ್ಲಾ ಧಿಕಾರಿಯನ್ನು ಭೇಟಿ ಮಾಡಿ, ಕ್ರಮ ಕೈಗೊಳ್ಳುವುದಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು.
Related Articles
Advertisement
ಅಕ್ರಮ ಕೋರೆ ವಿರುದ್ಧ ಕ್ರಮಆಡಳಿತ ಪಕ್ಷದ ಸದಸ್ಯ ಲೋಕನಾಥ ಶೆಟ್ಟಿ ಮಾತನಾಡಿ, ಕಲ್ಲು ಕೋರೆ ನಿಲ್ಲಿಸುವ ಬಗ್ಗೆ ಪ್ರತಿ ಸಭೆಯಲ್ಲಿ ಹೇಳಿದರೂ ಒಮ್ಮೆ ನಿಲ್ಲಿಸಿ, ಮತ್ತೆ ಆರಂಭಿಸಲಾಗುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಗಳಾಗುತ್ತಿದೆ. ಮುಂದಿನ ದಿನಗಳಲ್ಲಿ ಪಂ. ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಮುಂದಾದಾಗ ಅವರ ಜತೆಗೆ ನಾವು ಸೇರಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಬಗ್ಗೆ ವಿಟ್ಲ ಪ.ಪಂ. ವ್ಯಾಪ್ತಿಯ ಎಲ್ಲ ಲೈಸನ್ಸ್ ಪಡೆಯದ ಕೋರೆ ಮಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅನುಮತಿ ರದ್ದುಪಡಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.