Advertisement

ಅನುದಿನವೂ ನಮಗೆ ಅನುದಾನ

11:58 PM Sep 29, 2019 | Sriram |

ಕನಸುಗಳು ಎಲ್ಲರಿಗೂ ಇರುತ್ತವೆ. ಆದರೆ ಎಲ್ಲ ಕನಸಿಗೂ ನನಸಾಗುವ ಅದೃಷ್ಟ ಇರದು. ಒಂದೇ ಕನಸನ್ನು ನೂರು ಬಾರಿ ಬೇಕಾದರೂ ಕಾಣುತ್ತೇವೆ ಅದೇ ಕನಸನ್ನು ನನಸಾಗಿಸುವ ಮಾರ್ಗದಲ್ಲಿ ಒಂದು ಬಾರಿ ಎಡವಿ ಬಿದ್ದರೂ ಎಷ್ಟು ಬೇಗ ಅದನ್ನು ಮರೆತು, ಆಗದು ಅನ್ನುವ ಕಾರಣ ಹೇಳಿ ದೂರ ಹೋಗುತ್ತೇವೆ ಅಲ್ವಾ? ಕನಸು ನೂರು ಬಾರಿ ಕಾಣು, ಕನಿಷ್ಠ ಮೂರು ಬಾರಿಯಾದರೂ ಪ್ರಯತ್ನ ಮಾಡಿ ನೋಡು ಪರಿಶ್ರಮದ ಮುಂದಿನ ಹೆಜ್ಜೆಯೇ ಪ್ರತಿಫ‌ಲ ಅನ್ನುವುದನ್ನು ಮರೆಯಬೇಡಿ..

Advertisement

ಸಾಧಿಸು ಬೋಧಿಸು
ನಾನು ಮಾತ್ರ ಮುಂದೆ ಬರಬೇಕು. ನಾನು ಮಾತ್ರ ಹೆಸರು ಗಳಿಸಬೇಕು ಅನ್ನುವ ಸ್ವಾರ್ಥತನ ಎಲ್ಲರೊಳಗೆ ಇದ್ದೇ ಇದೆ. ನಮಗೆ ತಿಳಿದಿರುವ ಒಂದಿಷ್ಟಾದರೂ ಇನ್ನೊಬ್ಬರಿಗೆ ಹೇಳಿಕೊಡುವುದು ಇದೆ ಅಲ್ವಾ ಅದು ನಿಜವಾದ ಸಾಧಕನ ಯಶಸ್ಸು. ನಾಲ್ಕು ದಿನದ ಜೀವನದಲ್ಲಿ ಖುಷಿ ಮತ್ತು ದುಃಖಗಳೆಂಬುದು ಎರಡು ದಿನಕ್ಕೊಮ್ಮೆ ಬದಲಾಗುವ ಕಾಲದಲ್ಲಿ ಬದಲಾವಣೆಗೊಳ್ಳುವ ಜಗದ ನಿಯಮಗಳೆಂಬುದು ತಿಳಿದಿರಲಿ. ಕಾಲ ಎಲ್ಲವನ್ನೂ ಬದಲಾಯಿಸುತ್ತದೆ.

ಅಲೋಚಿಸಿ ನಿರ್ಧಾರಿಸು
ನಾವು ಕಲ್ಪನೆಗಳನ್ನು ಬಿತ್ತುವುದರಲ್ಲಿ ಜಿಪುಣರು. ಕೆಲವರು ಮಾತಿಗೆ ಮರಳಾಗುತ್ತಾರೆ, ಕೆಲವರು ಅಂದಕ್ಕೆ ಮರಳಾಗುತ್ತಾರೆ ಇನ್ನೂ ಕೆಲವರು ಇನ್ನೊಬ್ಬರ ಭಾವಕ್ಕೆ ಮರಳಾಗುತ್ತಾರೆ. ಇವೆಲ್ಲಕ್ಕೂ ಮೊದಲು ಹುಟ್ಟುವ ನಂಬಿಕೆ ಅನ್ನುವ ಸಣ್ಣ ಆಶಾವಾದವೇ ಕಾರಣ. ಹೆಚ್ಚಿನವರ ಜೀವನದಲ್ಲಿ ಯಾವುದೋ ಹಂತದಲ್ಲಿ ಅಪರಿಚಿತರು ಬರುತ್ತಾರೆ, ನೋಡು ನೋಡುತ್ತಿದ್ದಂತೆ ಬಹು ಬೇಗನೆ ಅಪರಿಚಿತ ಭಾವ ಆತ್ಮೀಯವಾಗುತ್ತದೆ. ಕೊನೆಗೆ ಇದೇ ಭಾವ ಭಾವನೆಗಳನ್ನು ಬೆಸೆಯುವ ಮಟ್ಟಕ್ಕೆ ಬೆಳೆಯುತ್ತದೆ. ಅಷ್ಟೇ ಬೇಗ ಅವರು ನಮ್ಮನ್ನು ಮರಳು ಮಾಡಿ ಮರೆ ಆಗುತ್ತಾರೆ. ಅಷ್ಟು ಹೊತ್ತಿಗೆ ಏನೋ ಮಹತ್ತರವಾದದ್ದನ್ನು ಕಳೆದುಕೊಂಡಿದ್ದೇವೆ ಅನ್ನುವಂಥ ಕೂಗು ನಮ್ಮನ್ನು ಕಾಡಿ ಪೀಡಿಸುತ್ತದೆ. ಜೀವನದಲ್ಲಿ ಯಾವುದೇ ವಿಷಯಗಳು ಬರಲಿ ಮೊದಲು ಅದರ ಬಗ್ಗೆ ವಿಚಾರಿಸಬೇಕು, ಅನಂತರ ಆಳವಾಗಿ ಅಲೋಚಿಸಿ ನಿರ್ಧಾರ ಮಾಡಬೇಕು. ನೆನಪಿರಲಿ ಹಳದಿಯಾಗಿ ಹೊಳಪು ತರುವುದು ಎಲ್ಲವೂ ಚಿನ್ನವಾಗಿರಲ್ಲ. ಕಲ್ಲಿಗೂ ಬಣ್ಣ ಹಚ್ಚಿ ಮರಳು ಮಾಡುವ ಕಾಲವಿದು ಜೋಕೆ.!

ಅ”ಸಾಧ್ಯ’
ನನ್ನ ಕೈಯಿಂದ ಇದು ಆಗದು. ನನ್ನಿಂದ ಇದನ್ನು ಮಾಡಲಾಗದು. ಇಲ್ಲ ಪ್ಲೀಸ್‌.. ಹೀಗೆ ಹೇಳಿಕೊಂಡೇ ಸಿಗುವ ಅವಕಾಶವನ್ನು ಅಲ್ಲಗೆಳೆದು ಕೊರಗುವ ಕೆಲವೊಂದಿಷ್ಟು ಜನರಿರುತ್ತಾರೆ. ಎಂದೂ ಕಾಣದ ಆತಂಕ, ಎಂದೂ ಹತ್ತದ ವೇದಿಕೆ ಹಾಗೂ ಎಂದೂ ಸಿಗದ ಬೆಂಬಲ ಆ ಕ್ಷಣಕ್ಕೆ ಸಿಕ್ಕಾಗ ಆಗುವ ಹಿಂಜರಿಕೆಯೇ ಇದಕ್ಕೆ ಕಾರಣ. ತಾನು ಮಾತಾಡಬಲ್ಲೆ, ತಾನು ಮಾಡಬಲ್ಲೆ, ತಾನು ಹಾಡಬಲ್ಲೆ, ಕುಣಿಯಬಲ್ಲೆ ಅನ್ನುವುದು ನಮಗೆ ಗೊತ್ತಿರುತ್ತದೆ. ಆದರೆ ಏನಾದರೂ ತಪ್ಪುಗಳು ನಡೆದ್ರೆ ಅಥವಾ ಯಾರಾದರೂ ಅವಮಾನ ಮಾಡಿದ್ರೆ ಎನ್ನುವ ಭಯ ನಮ್ಮಲ್ಲಿರುವ ಆತ್ಮಸ್ಥೆçರ್ಯವನ್ನು ಕುಗ್ಗಿಸಿ ಬಿಡುತ್ತದೆ. ಅವಕಾಶ ಗಳಿಗಾಗಿ ಕಾಯುತ್ತಾ ಕೂರುವ ಬದಲು ಅವಕಾಶಗಳನ್ನು ಸೃಷ್ಟಿಸಿಬೇಕು. ಇವತ್ತು, ನಾಳೆ ಅನ್ನುವ ಕಂದಕವನ್ನು ಬಿಟ್ಟು ಅನುದಿನವೂ ನಮಗೆ ಅನುದಾನ ಹಾಗೂ ಅವಕಾಶ ಅನ್ನೋದನ್ನು ನಂಬಿಕೊಂಡು ದಿನ ಸಾಗಿಸಿ.

 -ಸುಹಾನ್‌ ಶೇಕ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next