Advertisement
ನಗರದ ಗುರುಭವನದಲ್ಲಿ ಅಭಿವೃದ್ಧಿ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ 5ನೇ ವಿಶ್ವಅಂಗವಿಕಲರ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಅಂಗವಿಕಲರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಕೌಶಲ್ಯ ತರಬೇತಿ ಪಡೆದ ಅಂಗವಿಕಲರಿಗೆ ಪ್ರಮಾಣ ಪತ್ರ ವಿತರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಸಾಮಾಜಿಕ ಭದ್ರತೆಯ ಅಡಿಯಲ್ಲಿ ಪಿಂಚಣಿಯನ್ನು 9 ಲಕ್ಷ ಜನರಿಗೆ ನೀಡಲಾಗುತ್ತಿದೆ. 12ವರ್ಷ ಒಳಗಿನವರು ಪಿಂಚಣಿಗೆ ನಾಡ ಕಚೇರಿಗಳಲ್ಲಿ ಎಲ್ಲಾ ಮಾಹಿತಿ ದಾಖಲಾತಿಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ಅಂಗವಿಕಲರಿಗೆ ಸರ್ಕಾರ ಹಲವಾರು ಸೌಲಭ್ಯ ನೀಡುತ್ತಿದ್ದು ಇದರ ಸದ್ಭಳಕೆಯಾಗಬೇಕು ಎಂದು ಕಿವಿಮಾತು ಹೇಳಿದರು.
ಆತ್ಮಸ್ಥೈರ್ಯ ತುಂಬಿ: ಜಿಪಂ ಸದಸ್ಯ ಕೆ.ಸಿ.ಮಂಜುನಾಥ್ ಮಾತನಾಡಿ, ಅಂಗವಿಕಲರು ಸಮಾಜದ ಎಲ್ಲ ರಂಗದಲ್ಲಿಯೂ ಮುಂದಿದ್ದಾರೆ. ಅವರಿಗೆ ಯಾವುದೇ ರೀತಿಯ ಅನುಕಂಪದ ಅವಶ್ಯಕತೆ ಇಲ್ಲ. ಆತ್ಮಸ್ಥೈರ್ಯ ತುಂಬಿ ಮಾನವೀಯತೆ ಮೆರೆಯಬೇಕಾಗಿದೆ. ಅಂಗವಿಕಲತೆ ಪೋಲಿಯೋ ಇತರೆ ನ್ಯೂನ್ಯತೆಯಿಂದ ಬರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಅಭಿವೃದ್ಧಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಜಿ.ಭಾಗ್ಯ, ಬಿಇಒ ಗಾಯತ್ರಿದೇವಿ, ಜಿಲ್ಲಾ ಕಾಂಗ್ರೆಸ್
ಹಿಂದುಳಿದ ವರ್ಗದ ಅಧ್ಯಕ್ಷ ಅಪ್ಪಣ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ. ನಾರಾಯಣಸ್ವಾಮಿ, ಪುರಸಭೆ ಸದಸ್ಯರಾದ ಎನ್. ಶಶಿಕುಮಾರ್, ಎಂ.ಕುಮಾರ್, ಜಿಲ್ಲಾ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ನಲ್ಲೂರು ವೆಂಕಟೇಗೌಡ, ಜೆಡಿಎಸ್ ತಾಲೂಕು ಮಾಹಿತಿ ಮತ್ತು ತಂತ್ರಜ್ಞಾನ ಘಟಕದ ಅಧ್ಯಕ್ಷ ಅನಿಲ್ ಯಾದವ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಂಗವಿಕಲರ ಸಮಾಜ ಕ್ಷೇತ್ರದ ಡಾರ್ವಿನ್ ಮೊಸಿಸ್, ಜಿ. ರಾಮಚಂದ್ರ, ವಿಜಯಕಾಂತ್ ತಿವಾರಿ, ಮೋಹನ್ ಮತ್ತಿತತರಿದ್ದರು.