Advertisement

ಅಭಿವೃದ್ಧಿ ಕಾರ್ಯಕ್ಕಿಲ್ಲ ಅನುದಾನ ಕೊರತೆ

05:14 PM May 28, 2018 | |

ಚಳ್ಳಕೆರೆ: ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಿದೆ. ಹಿಂದಿನ ಎಲ್ಲಾ
ಯೋಜನೆಗಳಿಗೆ ಅನುದಾನ ತಂದು ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಅಭಿವೃದ್ಧಿ
ಕಾರ್ಯಕ್ಕೆ ಅನುದಾನದ ಕೊರತೆ ಉಂಟಾಗದು ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು.

Advertisement

ನಗರದ ಶಾಸಕರ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಉತ್ತಮ ಮಳೆಯಾಗಿದೆ. ಹಾಗಾಗಿ ಸದ್ಯಕ್ಕೆ ಕುಡಿಯುವ ನೀರಿನ ಕೊರತೆ ಉಂಟಾಗದು. ಅಲ್ಲದೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸಲು ಸೂಚನೆ ನೀಡಲಾಗುವುದು ಎಂದರು. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಮುಂದುವರೆಯಲಿದೆ. 

ಹೊಸದುರ್ಗ ತಾಲೂಕಿನ ಗಡಿ ಭಾಗದ ತನಕ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು ಕೇವಲ ನಾಲ್ಕು ಕಿಮೀ ಚಾನಲ್‌ ಕೊರೆದರೆ ಜಿಲ್ಲೆಯ ಗಡಿವರೆಗೆ ಕಾಮಗಾರಿಯನ್ನು ಪೂರ್ಣಗೊಳಿಸಿದಂತಾಗುತ್ತದೆ. 28 ಮೀಟರ್‌ ಉದ್ದದ ಸುರಂಗ ಮಾರ್ಗ ಕಾಮಗಾರಿಯೂ ನಡೆಯುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಈ ಬಗ್ಗೆ ಯೋಚಿಸಲು ಆಗಿರಲಿಲ್ಲ. ಮುಂದಿನ ತಿಂಗಳು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು.

ತುಂಗಾ ಹಿನ್ನೀರು ಯೋಜನೆಗೆ ಹಿಂದಿನ ಸರ್ಕಾರ ಮಂಜೂರಾತಿ ನೀಡಿದೆ. ಆ ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸಹಕಾರ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದರು. ನಗರದ ಕ್ರೀಡಾಂಗಣವನ್ನು ಒಂದು ಕೋಟಿ ರೂ.ಗಿಂತ ಹೆಚ್ಚು ಅನುದಾನ ತಂದು ಆಧುನೀಕರಣಗೊಳಿಸಲಾಗುವುದು.
ಪಾವಗಡ ರಸ್ತೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಯೋಜನೆಗೆ ಇದ್ದ ಅಡ್ಡಿ ಆತಂಕಗಳು ನಿವಾರಣೆಯಾಗಿವೆ ಎಂದರು. 

ಮುಖಂಡರಾದ ಟಿ. ಪ್ರಭುದೇವ, ಸಿ. ವೀರಭದ್ರಬಾಬು, ಚನ್ನಕೇಶವ, ಬಿ.ಟಿ. ರಮೇಶ್‌ ಗೌಡ, ಲಕ್ಷ್ಮಿದೇವಿ, ಜಿ.ಟಿ.
ಗೋವಿಂದರಾಜು ಮತ್ತಿತರರು ಇದ್ದರು.  ನಿರುದ್ಯೋಗ ನಿವಾರಣೆಗೆ ಒತ್ತು ಚಳ್ಳಕೆರೆ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಿರುದ್ಯೋಗಿ ಯುವಕ-ಯುವತಿಯರು ಕೆಲಸವಿಲ್ಲದೆ ಪರದಾಡು ತ್ತಿದ್ದಾರೆ. ನನ್ನ ಹಿಂದಿನ ಅವಧಿಯಲ್ಲಿ ಎಚ್‌ಪಿಪಿಸಿ ಸರ್ಕಾರಿ ಕಾಲೇಜು ಹಾಗೂ ಪರಶುರಾಂಪುರದಲ್ಲಿ ಉದ್ಯೋಗ ಮೇಳ ಆಯೋಜಿಸಿ ಕೆಲವರಿಗೆ ಉದ್ಯೋಗಾವಕಾಶ ಮಾಡಿಕೊಟ್ಟಿದ್ದೆ. ಪ್ರಸ್ತುತ ನಗರಂಗೆರೆ ಬಳಿ ಜವಳಿ ಪಾರ್ಕ್‌ ನಿರ್ಮಿಸಲು ಈಗಾಗಲೇ ಯೋಜನೆ ರೂಪುಗೊಂಡಿದೆ. ಇದು ಅನುಷ್ಠಾನಗೊಂಡಲ್ಲಿ ಕ್ಷೇತ್ರದ ಸಾವಿರಾರು ಜನರಿಗೆ ಸುಲಭವಾಗಿ ಉದ್ಯೋಗ ಒದಗಿಸಬಹುದು. ಸೋಮಗುದ್ದು ರಸ್ತೆಯಲ್ಲೂ ಜವಳಿ ಪಾರ್ಕ್‌ ನಿರ್ಮಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಶಾಸಕರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next