Advertisement
ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹಾಗೂ ಫಾದರ್ ಪ್ರವೀಣ್ ಅವರು ಮಕ್ಕಳಿಗೆ ಹಾಲು ಹಾಗೂ ಪ್ರಸಾದ ವಿತರಿಸಿದರು.
Related Articles
Advertisement
ಇನ್ನು ಮುಂದೆ ಪ್ರತಿ ವರ್ಷ ಲಿಂಗಾಯತ ಮಹಾಮಠದಿಂದ ಬಸವ ಪಂಚಮಿಯನ್ನು ವಿಶ್ವ ಬಂಧುತ್ವದ ದಿನವನ್ನಾಗಿ ಆಚರಿಸಲಾಗುವುದು ಎಂದು ಹೇಳಿದರು.
ಏಸು, ಬಸವಣ್ಣ ಮೊದಲಾದವರು ಸಮಾಜವನ್ನು ಸರ್ವಾಂಗ ಸುಂದರಗೊಳಿಸಲು ಬೋಧಿಸಿದ್ದಾರೆ. ಅವರ ಆದರ್ಶಗಳನ್ನು ಎಲ್ಲರೂ ಅನುಸರಿಸಬೇಕು ಎಂದು ಫಾದರ್ ಪ್ರವೀಣ್ ತಿಳಿಸಿದರು.
ವಚನಗಳಲ್ಲಿ ಬದುಕಿನ ರೀತಿ, ನೀತಿಗಳು ಹಾಸು ಹೊಕ್ಕಿದ್ದು, ಮಕ್ಕಳು ವಚನಗಳನ್ನು ಓದಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಸಾಹಿತಿ ರಮೇಶ ಮಠಪತಿ ಹೇಳಿದರು.
ಬಸವಣ್ಣನವರ ನೂರು ವಚನಗಳನ್ನು ಕಂಠಪಾಠ ಮಾಡಿ ಹೇಳಿದವರಿಗೆ ಲಿಂಗಾಯತ ಮಹಾಮಠದಿಂದ ರೂ.1 ಸಾವಿರ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಫಾದರ್ ಮ್ಯಾಥ್ಯೂ ಸಮ್ಮುಖ ವಹಿಸಿದ್ದರು. ಬಸವಣ್ಣನವರ ಲಿಂಗೈಕ್ಯ ದಿನವು ಕನ್ನಡಿಗರೆಲ್ಲರಿಗೂ ಪವಿತ್ರ ದಿನ ಎಂದು ಕೈಗಾರಿಕಾ ಇಲಾಖೆಯ ರಾಜಕುಮಾರ ಪಾಟೀಲ್ ಹೇಳಿದರು.
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ಶಿವಕುಮಾರ ಪಾಖಾಲ್ ‘ಕಳಬೇಡ, ಕೊಲಬೇಡ…’ ವಚನವನ್ನು ಸಾಮೂಹಿಕವಾಗಿ ಓದಿಸಿದರು.
ಪರುಷ ಕಟ್ಟೆಯ ಚನ್ನಬಸವಣ್ಣ ವಚನ ಪ್ರಾರ್ಥನೆಗೈದರು. ಜಯಶ್ರೀ ಗಾದಗೆ ಗುರು ಪೂಜೆ ನೆರವೇರಿಸಿದರು.
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಕಾರ್ಯದರ್ಶಿ ಪ್ರಭು ತಟಪಟ್ಟಿ, ಪ್ರಮುಖರಾದ ಕಾಶಿನಾಥ ಪಾಟೀಲ್, ಅಶೋಕ್ ಎಲಿ, ಚಂದ್ರಶೇಖರ ಗಾದಗೆ, ಲಿಂಗಾನಂದ ಹಂಗರಗಿ ಇದ್ದರು. ಪ್ರಕಾಶ ಮಲ್ಲಾಸುರೆ ಭಕ್ತಿ ದಾಸೋಹಗೈದರು.