Advertisement

Grant Goodwill : ಬಣಕಲ್ ಗ್ರಾಮ ಪಂಚಾಯತ್ ಗೆ 2ನೇ ಸ್ಥಾನ

06:44 PM Aug 19, 2023 | Team Udayavani |

ಕೊಟ್ಟಿಗೆಹಾರ: ಜನರಿಗೆ ಅತೀ ಹತ್ತಿರವಿರುವ ಇಲಾಖೆಯೆಂದರೆ ಗ್ರಾಮ ಪಂಚಾಯಿತಿ, ವಿವಿಧ ಮಾನದಂಡಗಳ ಆಧಾರದಲ್ಲಿ ಜಿಲ್ಲೆಯ ಉತ್ತಮ ಸಾಧನೆ ಮಾಡಿರುವ ಗ್ರಾಮ ಪಂಚಾಯತ್‍ಗಳಲ್ಲಿ ಬಣಕಲ್ ಗ್ರಾಮಪಂಚಾಯತ್ 2ನೇ ಸ್ಥಾನಗಳಿಸಿ ಮಾದರಿಯಾಗಿದೆ.

Advertisement

ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆ, ಅನುದಾನಗಳ ಸದ್ಬಳಕೆ, ಸಮರ್ಪಕ ತೆರಿಗೆ ಸಂಗ್ರಹ ಇತ್ಯಾದಿಗಳನ್ನು ಆಧರಿಸಿ 2ನೇ ಸ್ಥಾನ ಲಭಿಸಿದೆ .ಜನರ ಬೇಡಿಕೆಗಳ ಈಡೇರಿಕೆ, ಸರಕಾರದ ಯೋಜನೆಗಳು ಬಣಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಸದ್ಬಳಕೆಯಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳು ಜಾರಿಗೊಂಡಿದ್ದು, ಗ್ರಾಮಸ್ಥರಿಗೆ ತಲುಪಿಸುವಲ್ಲಿ ಪಂಚಾಯಿತಿ ಯಶಸ್ವಿಯಾಗಿದೆ. ತೆರಿಗೆ ಸಂಗ್ರಹ, ತೆರಿಗೆ ಪರಿಷ್ಕರಣೆ, ಸ್ವಚ್ಛತೆ ಬಗ್ಗೆ ವಿಶೇಷ ಗಮನಹರಿಸಲಾಗಿದೆ. 2ನೇ ಸ್ಥಾನ ಬರುವಲ್ಲಿ ಗ್ರಾ.ಪಂ.ಅಧ್ಯಕ್ಷೆಅತಿಕಾ ಬಾನು, ಉಪಾಧ್ಯಕ್ಷ ಇರ್ಫಾನ್, ಪಿಡಿಒ ಬಿ.ಎನ್.ಕೃಷ್ಣಪ್ಪ,ಗ್ರಾ,ಪಂ. ಸದಸ್ಯರು ಹಾಗೂ ಸಿಬಂದಿ ವರ್ಗದವರ, ಪರಿಶ್ರಮಕ್ಕೆ ಪ್ರತಿಫಲ ದೊರಕಿದೆ.

Advertisement

Udayavani is now on Telegram. Click here to join our channel and stay updated with the latest news.

Next