Advertisement

ಪ್ರತ್ಯೇಕ ಕುಡಿಯುವ ನೀರಿನ ಯೋಜನೆಗೆ ಅನುದಾನ

06:22 PM Aug 25, 2020 | Suhan S |

ಮರಿಯಮ್ಮನಹಳ್ಳಿ: ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೆ ತರುವುದು ನನ್ನ ಜವಾಬ್ದಾರಿ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಸ್‌.ಭೀಮಾನಾಯ್ಕ ಹೇಳಿದರು.

Advertisement

ಅವರು ಸೋಮವಾರ ತುಂಗಭದ್ರಾ ಡ್ಯಾಂ ಹಿನ್ನೀರಿನಲ್ಲಿ ಸ್ಥಾಪಿಸಲಾಗುತ್ತಿರುವ ಪಾವಗಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್‌ಹೋಲ್‌ ಸ್ಥಳ ವೀಕ್ಷಿಸಿ ನಂತರ ಮರಿಯಮ್ಮನಹಳ್ಳಿ ಪಟ್ಟಣದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಪ್ರತ್ಯೇಕ ಕುಡಿಯುವ ನೀರಿನ ಯೋಜನೆ ಜಾರಿಗೆ ತರಲು ಈಗಾಗಲೇ 10.50 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ. ಇದಕ್ಕೆ ಬೇರೆ ಬೇರೆ ಅನುದಾನದ ಹಣವನ್ನು ಬದಲಾಯಿಸಿ ಬಳಸಲಾಗುವುದು. ಇನ್ನು 4-5 ಕೋಟಿ ರೂ. ಅನುದಾನದ ಅಗತ್ಯವಿದೆ ಅದನ್ನೂ ಮುಂದೆ ಬಿಡುಗಡೆ ಮಾಡಲಾಗುವುದು. ನಾಳೆಯೊಳಗೆ ಕುಡಿಯುವ ನೀರಿನ ಯೋಜನೆಯ ಗ್ರಾವಿಟಿ ಪಾಯಿಂಟ್‌ ನಿಗದಿಪಡಿಸಿ ಪಟ್ಟಣದ ಹೊರವಲಯದಲ್ಲಿ ವೆಂಕಟಾಪುರ ರಸ್ತೆ ಬದಿಯಲ್ಲಿನ ಸರಕಾರಿ ಜಾಗದಲ್ಲಿ ಸುಮಾರು 9 ಎಕರೆ ಜಮೀನಿನಲ್ಲಿ μಲ್ಟರ್‌ ಬಡ್‌ ನಿರ್ಮಾಣಕ್ಕೆಮೀಸಲಿಡಲು ಜಿಲ್ಲಾಧಿಕಾರಿಗಳಿಗೆ ಮನವಿ  ಮಾಡಲಾಗುವುದು ಎಂದರು.

ನನ್ನ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಸಂವಿಧಾನಬದ್ಧವಾಗಿ ಹಣಕಾಸು ತರುವ ಜವಾಬ್ದಾರಿ ನನಗಿರುತ್ತದೆ. ಆದರೆ ಮಾಜಿ ಶಾಸಕರು, ಕೆಲ ಯುವ ಮುಖಂಡರು ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ. ಈಗ ನಡೆಯುತ್ತಿರುವ ಯೋಜನೆಯಲ್ಲಿ ಪಟ್ಟಣಕ್ಕೆ ಕುಡಿಯುವ ನೀರನ್ನುಒದಗಿಸಲಾಗುವುದಿಲ್ಲ. ಜನರಿಗೆ ಸುಳ್ಳು ಹೇಳಿ ಪಾವಗಡ ಯೋಜನೆಯಲ್ಲಿ ಪಟ್ಟಣಕ್ಕೆ ನೀರು ಕೊಡಿಸುತ್ತೇವೆ ಅಂತ ಜನರನ್ನು ಹುರಿದುಂಬಿಸಿ ಹೋರಾಟ ಮಾಡಲು ಹೊರಟಿದ್ದಾರೆ. ಹೋರಾಟ ಎಲ್ಲರ ಹಕ್ಕು ಆದರೆ ಜನರಿಗೆ ಸುಳ್ಳು ಮಾಹಿತಿ ನೀಡಬಾರದು ಎಂದರು. ಈ ಸಂದರ್ಭದಲ್ಲಿ ನಗರನೀರು ಸರಬರಾಜು ಇಲಾಖೆಯ ಎ.ಇ.ಇ. ಮಲ್ಲಿಕಾರ್ಜುನ ಪಾಟೀಲ್‌, ಪಪಂ ಮುಖ್ಯಾಧಿಕಾರಿ ಉದಯಸಿಂಗ್‌, ಕೆಪಿಸಿಸಿ ಕಂದಾಯ ನಿರೀಕ್ಷಕ ಅಂದಾನಗೌಡ, ಸದಸ್ಯರಾದ ಕುರಿ ಶಿವಮೂರ್ತಿ, ತಾಪಂ ಮಾಜಿ ಸದಸ್ಯ ಸೋಮಣ್ಣ ಉಪ್ಪಾರ, ಮಾಜಿ ಕೆಪಿಸಿಸಿ ಸದಸ್ಯ ಬೋಸಪ್ಪ, ಎನ್‌. ಸತ್ಯನಾರಾಯಣ, ಡಿ. ರಾಘವೇಂದ್ರಶೆಟ್ಟಿ, ಎಂ. ವಿಶ್ವನಾಥ ಶೆಟ್ಟಿ, ಸತ್ಯನಾರಾಯಣ ಶೆಟ್ಟಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಆದಿಮನಿಹುಸೇನ್‌ ಭಾಷಾ, ಎಸ್‌.ನವೀನ್‌, ಆನಂದ ವಸ್ತ್ರದ, ಡಿ.ಎಸ್‌. ಎಸ್‌. ಮಂಜುನಾಥ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next