ಕುಷ್ಟಗಿ: ಮಳೆಗಾಲದ ಅನಿಶ್ಚಿತತೆಯಲ್ಲಿ ಸತತ ಬರಗಾಲ ಎದುರಿಸುತ್ತಿರುವ ಕುಷ್ಟಗಿ ತಾಲೂಕಿನ 15 ಕೆರೆಗಳನ್ನು ಕೃಷ್ಣಾ ನದಿಯಿಂದ ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಗೊಂಡಿದೆ. ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆಗೆ ಸರ್ಕಾರ ಸಚಿವ ಸಂಪುಟದ ಅನುಮೋದನೆಯೊಂದಿಗೆ 498.80 ಕೋಟಿ ರೂ. ಮಂಜೂರಾತಿ ಸಿಕ್ಕಿದೆ. ಮೊದಲ ಹಂತದಲ್ಲಿ 8 ಕೆರೆಗಳನ್ನು ತುಂಬಿಸಲು ಕ್ರಮಕೈಗೊಳ್ಳಲಾಗಿದ್ದು ಶೀಘ್ರವೇ ಟೆಂಡರ್ ಪ್ರಕ್ರಿಯೆ ಆರಂಭಿಸುವ ಮುನ್ಸೂಚನೆ ಸಿಕ್ಕಿದೆ.
ಸರ್ಕಾರದ ಆದೇಶ ಸಂಖ್ಯೆ ಸನೀಇ: 62 ಏತ ನೀರಾವರಿ ಯೋಜನೆ 2018 (ತಾಂತ್ರಿಕ) ಬೆಂಗಳೂರು ಜುಲೈ ಆದೇಶದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಬಿ. ಬಾಲಸುಬ್ರಹ್ಮಣ್ಯಂ ಇವರ ಆದೇಶದಲ್ಲಿ ವಿವರಿಸಲಾಗಿದೆ. 2019-20ನೇ ಸಾಲಿನಲ್ಲಿ ಕುಷ್ಟಗಿ ತಾಲೂಕಿನಲ್ಲಿ ಕುಡಿಯುವ ನೀರು ಹಾಗೂ ಅಂತರ್ಜಲ ಅಭಿವೃದ್ಧಿ ಸಲುವಾಗಿ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಯೋಜನೆಗೆ 0.526 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಆಲಮಟ್ಟಿ ಜಲಾಶಯದ ಕೆಳ ಭಾಗದಲ್ಲಿ 2.3 ಕ್ಯೂಸೆಕ್ಸ್ ನೀರನ್ನು ಏತ ನೀರಾವರಿ ಯೋಜನೆಯ ಮೂಲಕ ಉದ್ದೇಶಿತ ಕೆರೆಗಳಿಗೆ ಹರಿಸಲಾಗುವುದು. ಕೃಷ್ಣಾ ನದಿಯ ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಕುಷ್ಟಗಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ 5 ವರ್ಷದ ಕಾಲಮಿತಿಯ ಯೋಜನೆ ಇದಾಗಿದೆ.
ಮೊದಲ ಹಂತ: ಈ ಹಂತಕ್ಕೆ 281 ಕೋಟಿ ರೂ. ನಿಗದಿಗೊಳಿಸಲಾಗಿದ್ದು, ತಾಲೂಕಿನ ಮೆಣಸಗೇರ ಕೆರೆ, ಮಿಯಾಪುರ ಕೆರೆ. ಹೊಸಳ್ಳಿ ಕೆರೆ, ಹನುಮಸಾಗರ ಕೆರೆ, ಮಾವಿನ ಇಟಗಿ ಕೆರೆ, ಬಾದಿಮಿನಾಳ ಕೆರೆ, ಜಾಗೀರಗುಡದೂರು ಕೆರೆ, ನಿಡಶೇಸಿ ಕೆರೆಗೆ 1580 ಅಶ್ವಶಕ್ತಿಯ ಸಾಮಾರ್ಥ್ಯದ 5 ಕಾರ್ಯ ನಿರತ ಮತ್ತ 1 ಹೆಚ್ಚುವರಿ ಪಂಪ್‌ಗ್ಳನ್ನು ಬಳಸಿ, 1250 ಮಿ.ಮೀ ವ್ಯಾಸದ ಎಂ.ಎಸ್. ಪೈಪ್‌ಗ್ಳನ್ನು ಅಳವಡಿಸಿ 59.5 ಕಿ.ಮೀ. ಉದ್ದದ ಏರು ಕೊಳವರ ಮಾರ್ಗ ಮೂಲಕ ಕಡೆಕೊಪ್ಪ ಹತ್ತಿರ ಮಧ್ಯಂತರ ವಿತರಣಾ ತೊಟ್ಟಿಗೆ ಹರಿಸುವ ಯೋಜನೆಯ ವಿನ್ಯಾಸ ಸಿದ್ಧಪಡಿಸಲಾಗಿದೆ.
ಎರಡನೇ ಹಂತ: ಈ ಹಂತಕ್ಕೆ 217.16 ಕೋಟಿ ರೂ. ನಿಗದಿಯಾಗಿದ್ದು, ಜಿಮ್ಲಾಪೂರ ಕೆರೆ, ವಿಠಲಾಪೂರ ಕೆರೆ, ನಾರೀನಾಳ ಕೆರೆ, ರಾಯನ ಕೆರೆ, ಮೆಣೇದಾಳ ಕೆರೆ, ಹುಲಿಯಾಪೂರ ಕೆರೆ, ಪುರ ಕೆರೆಗೆ 217.16 ಕೋಟಿ ರೂ. ನಿಗದಿಯಾಗಿದೆ. ಹಂತದಲ್ಲಿ ಕಡೆಕೊಪ್ಪ ನೀರಿನ ತೊಟ್ಟಿಯಿಂದ ಎರಡು ವಿಭಾಗಗಳಲ್ಲಿ ಏರು ಕೊಳವೆ ಮಾರ್ಗದ ಮೂಲಕ ಕೆರೆಗಳನ್ನು ತುಂಬಿಸಲಾಗುತ್ತಿದೆ. 2100 ಅಶ್ವಶಕ್ತಿ ಸಾಮಾರ್ಥ್ಯದ 2 ಕಾರ್ಯ ನಿರತ ಹಾಗೂ ಒಂದು ಹೆಚ್ಚುವರಿ ಪಂಪ್ ಹಾಗೂ 3180 ಅಶ್ವಶಕ್ತಿ ಸಾಮಾರ್ಥ್ಯ 3 ಕಾರ್ಯ ನಿರತ ಹಾಗೂ ಒಂದು ಹೆಚ್ಚುವರಿ ಪಂಪ್‌ಗ್ಳನ್ನು ಬಳಸಿ 610 ಮಿ.ಮೀ.ದಿಂದ 1,100 ಮಿ.ಮೀ. ವ್ಯಾಸ ಎಂಎಸ್ ಪೈಪ್, ಬಿಡಬ್ಲೂ ್ಯ ಎಸ್‌ಸಿ ಹಾಗೂ ಎಚ್‌ಡಿಪಿಇ ಪೈಪ್ ಅಳವಡಿಸಿ 63,408 ಕಿ.ಮೀ. ಕೊಳವೆ ಗುರುತ್ವ ಮಾರ್ಗದ ಮೂಲಕ ಒಟ್ಟು 15 ಕೆರೆಗಳನ್ನು ತುಂಬಿಸಲಾಗುತ್ತಿದೆ ಎಂದರು.
•ಮಂಜುನಾಥ ಮಹಾಲಿಂಗಪುರ