Advertisement
ಇವರು ತನ್ನ ಅಜ್ಜ-ಅಜ್ಜಿಯ ನೆನಪಿಗಾಗಿ 6 ಲಕ್ಷ ರೂ. ಸ್ವಂತ ಹಣವನ್ನು ವಿನಿಯೋಗಿಸಿ ಎರಡು ಸುಸಜ್ಜಿತ ಬಸ್ ತಂಗುದಾಣಗಳನ್ನು ನಿರ್ಮಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಂದ್ರಶೇಖರ್ ಮಯ್ಯ ಅವರ ಅಜ್ಜ ನರಸಿಂಹ ತುಂಗ ಹಾಗೂ ಅಜ್ಜಿ ನಾಗವೇಣಿಯಮ್ಮ ಪರೋಪ ಕಾರಿಯಾಗಿ ಗುರುತಿಸಿಕೊಂಡಿದ್ದರು. ಸುಮಾರು ಒಂದು ದಶಕದ ಹಿಂದೆ ರಾಷ್ಟ್ರೀಯ ಹೆದ್ದಾರಿಯು ಚಿಕ್ಕ ರಸ್ತೆಯಾಗಿದ್ದ ಸಂದರ್ಭ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದವರಿಗೆ ಬಾಯಾರಿಕೆ ನೀಗಲು ತನ್ನ ಮನೆಯ ಮುಂದೆ ಬೆಲ್ಲ-ನೀರು ಹಾಗೂ ಕುಳಿತು ವಿಶ್ರಮಿಸಲು ಜಗಲಿಯ ವ್ಯವಸ್ಥೆ ಮಾಡಿದ್ದರು. ಹೀಗಾಗಿ ಅಜ್ಜನ ಆದರ್ಶವನ್ನು ಪ್ರೇರಣೆಯಾಗಿಸಿಕೊಂಡ ಮೊಮ್ಮಗ ಚಂದ್ರಶೇಖರ ಮಯ್ಯ ಅವರು ಅವರ ರೀತಿಯಲ್ಲೇ ನಾನು ಏನಾದರೂ ಸಮಾಜ ಸೇವೆ ಮಾಡಬೇಕು ಎನ್ನುವ ಸಂಕಲ್ಪ ತೊಟ್ಟು ಒಂದು ವರ್ಷದ ಹಿಂದೆ ಉಡುಪಿ-ಕುಂದಾಪುರ ಮಾರ್ಗದಲ್ಲಿ ಪಾಂಡೇಶ್ವರ ಈಶ್ವರಮಠದ ಎದುರು ಸುಮಾರು 2.5 ಲಕ್ಷ ರೂ. ವೆಚ್ಚದಲ್ಲಿ ದಿ| ನರಸಿಂಹ ತುಂಗ ಸ್ಮರಣಾರ್ಥ ಬಸ್‌ತಂಗುದಾಣ ನಿರ್ಮಿಸಿದರು.
Related Articles
Advertisement
ಮಾದರಿ ಕಾರ್ಯ ಚಂದ್ರಶೇಖರ್ ಮಯ್ಯ ಅವರು 21 ವರ್ಷದಿಂದ ಉದಯವಾಣಿಯ ಪತ್ರಿಕಾ ಏಜೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 10 ವರ್ಷದ ಹಿಂದೆ ತ್ರಿಡಿ ಆ್ಯನಿಮೇಟರ್ ಎಂಜಿನಿಯರಿಂಗ್ ವಿಭಾಗದಲ್ಲಿ ಉಪನ್ಯಾಸಕ ಹುದ್ದೆಯ ಅವಕಾಶ ಸಿಕ್ಕಿದ್ದರೂ ಅದನ್ನು ತ್ಯಜಿಸಿ ಹುಟ್ಟೂರಿಗೆ ಏನಾದರೂ ಸೇವೆ ಸಲ್ಲಿಸಬೇಕು ಎನ್ನುವುದು ಇವರ ಅದಮ್ಯ ಬಯಕೆಯಾಗಿದೆ.