ಹೈದರಾಬಾದ್: ಹೈದರಾಬಾದ್‌ನಲ್ಲಿರುವ ನಾಲ್ಕು ಪಾರಂಪರಿಕ ಕಟ್ಟಡಗಳ ಮಾಲೀಕತ್ವ ವಿವಾದ ಈಗ ಕೋರ್ಟ್ ಮೆಟ್ಟಿಲೇರಿದೆ. ನಗರದಲ್ಲಿರುವ ಫಲಕ್‌ನುಮಾ ಹಾಗೂ ಚೌಮಹಲ್ಲಾ ಅರಮನೆಗಳು, ಊಟಿಯಲ್ಲಿರುವ ಬಂಗಲೆಯ ಮಾಲೀಕತ್ವ ನಮಗೇ ಸೇರಬೇಕು ಎಂದು ಕೋರಿ 7ನೇ ನಿಜಾಮ್ ಮಿರ್ ಒಸ್ಮಾನ್ ಅಲಿ ಖಾನ್ ಅವರ ಮೊಮ್ಮಗ ನವಾಬ್ ನಜಾಫ್ ಅಲಿ ಖಾನ್ ನಗರದ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
1950ರಲ್ಲಿ ಭಾರತ ಸರ್ಕಾರ ಮತ್ತು 7ನೇ ನಿಜಾಮನ ನಡುವೆ ನಡೆದ “ಇನ್‌ಸ್ಟ್ರೆಮೆಂಟ್ ಆಫ್ ಆಕ್ಸೆಷನ್’ ಪ್ರಕಾರ, ಈ ಎಲ್ಲ ಪಾರಂಪರಿಕ ಕಟ್ಟಡಗಳು ನಿಜಾಮನ ಖಾಸಗಿ ಸ್ವತ್ತು ಎಂದು ಸ್ವತಃ ಭಾರತ ಸರ್ಕಾರವೇ ಘೋಷಿಸಿತ್ತು. ನಿಜಾಮನ ನಿಧನದ ನಂತರ, ಅವುಗಳ ಮಾಲೀಕತ್ವವು ಅವರ 16 ಪುತ್ರರು ಮತ್ತು 18 ಪುತ್ರಿಯರಿಗೆ ಸೇರಬೇಕು ಎನ್ನುವುದು ನಜಾಫ್ ಅವರ ವಾದ.
ಇದನ್ನೂ ಓದಿ:ಬೊಂಬಾ ರೈಡ್ ಶಿಕ್ಷಣದ ಅವ್ಯವಸ್ಥೆಯನ್ನು ಹೇಳುತ್ತಾ ಶೈಕ್ಷಣಿಕ ಅಗತ್ಯ ಪ್ರತಿಪಾದಿಸುವ ಸಿನಿಮಾ
1957ರಲ್ಲಿ 7ನೇ ನಿಜಾಮನು ಗಿಫ್ಟ್ ಡೀಡ್ ಮೂಲಕ ಫಲಕ್‌ನುಮಾ ಅರಮನೆ, ಕಿಂಗ್ ಕೋಥಿ ಅರಮನೆ/ನಜ್ರಿ ಬಾಘ ಚೌಮಹಲ್ಲಾ ಅರಮನೆ, ಪುರಾನಿ ಹವೇಲಿ, ಹರೇವುದ್ ಮತ್ತು ಸೆಡಾರ್ಸ್ ಬಂಗಲೆಗಳನ್ನು ರಾಜಕುಮಾರ ಮುಕ್ಕರಮ್ ಜಾಹ್‌ಗೆ ಹಸ್ತಾಂತರಿಸಿದ್ದರು. ಆದರೆ, ಇದನ್ನು ರಾಜಕುಮಾರ ಜಾಹ್ ತಿರಸ್ಕರಿಸಿದ್ದರು.
ಆದರೆ ನಿಜಾಮನ ನಿಧಾನನಂತರ, ರಾಜಕುಮಾರ್ ಜಾಹ್ ಆ ಆಸ್ತಿಪಾಸ್ತಿಗಳು ತನ್ನದೇ ಎಂಬಂತೆ ಬಿಂಬಿಸಿಕೊಂಡಿದ್ದು, ಕುಟುಂಬದ ಇತರೆ ಸದಸ್ಯರಿಗೆ ಅದರ ಪಾಲು ನೀಡಲು ನಿರಾಕರಿಸಿದ್ದಾರೆ ಎನ್ನುವುದು ಅರ್ಜಿದಾರ ನಜಾಫ್ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಕೋರ್ಟ್ ಮೆಟ್ಟಿಲೇರಿದ್ದು, ಮಾಲೀಕತ್ವದಲ್ಲಿ ಪಾಲು ನೀಡಬೇಕೆಂದು ಕೋರಿದ್ದಾರೆ.