Advertisement

ಸೆರೆಮನೆ ನೋಡುವುದಕ್ಕಾಗಿ ಬಂಧನಕ್ಕೊಳಗಾದ ಅಜ್ಜಿ

10:44 AM Mar 01, 2017 | Harsha Rao |

ಆ್ಯಮ್‌ಸ್ಟರ್‌ಡ್ಯಾಮ್‌: ತಪ್ಪೆಸಗಿರುವ ಯುವಕರೂ ಜೈಲು ಸೇರುವುದಕ್ಕೆ ಹಿಂಜರಿದು, ನಾಪತ್ತೆಯಾಗುವುದನ್ನು ದಿನಬೆಳಗಾದರೆ  ನೋಡುತ್ತೇವೆ. ಆದರೆ ನೆದರ್‌ಲ್ಯಾಂಡ್‌ನ‌ಲ್ಲಿ ಶತಕದ ಅಂಚಿನಲ್ಲಿರುವ 99ರ ವಯಸ್ಸಿನ ಅಜ್ಜಿಯೊಬ್ಬರು ಸ್ವಯಂಪ್ರೇರಣೆಯಿಂದ ಕೈಗೆ ಕೋಳ ತೊಡಿಸಿಕೊಂಡು ಜೈಲು ಸೇರಿದ್ದಾರೆ! ಅಷ್ಟಕ್ಕೂ “ಅನ್ನೀ’ ಹೆಸರಿನ ಈ ಅಜ್ಜಿ ಇಳಿವಯಸ್ಸಿನಲ್ಲಿ ಜೈಲು ಸೇರುವ ತಪ್ಪೇನನ್ನೂ ಮಾಡಿರಲಿಲ್ಲ. ಅದ್ಯಾಕೋ ಜೈಲಿಗೆ ಹೋಗ ಬೇಕೆನ್ನುವ ಇಂಗಿತ ಅವರಲ್ಲಿ ಮೂಡಿದೆಯಷ್ಟೆ. ವೀಲ್‌ ಚೇರ್‌ನಲ್ಲೇ ಓಡಾಡುವ ಈ ಅಜ್ಜಿಗೆ ಕೋಳ ತೊಡಿಸಿ ಬಂಧಿಸಿರುವ ಚಿತ್ರಗಳನ್ನು ಪೊಲೀಸರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದು, ಇವು ವೈರಲ್‌ ಆಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next