Advertisement

ಗ್ರ್ಯಾಂಡ್‌ ಮಾಸ್ಟರ್‌ ತೇಜ್‌ಕುಮಾರ್‌ಗೆ ಪ್ರಶಸ್ತಿ

02:14 PM Jun 25, 2018 | |

ಮೈಸೂರು: ನಗರದಲ್ಲಿ ನಡೆದ ಎರಡು ದಿನಗಳ ರಾಜ್ಯಮಟ್ಟದ ಕರ್ನಾಟಕ ರಾಜ್ಯ ಮುಕ್ತ ರ್ಯಾಪಿಡ್‌ ಚೆಸ್‌ ಟೂರ್ನಿಯಲ್ಲಿ ಗ್ರ್ಯಾಂಡ್‌ ಮಾಸ್ಟರ್‌ ಎಂ.ಎಸ್‌. ತೇಜ್‌ಕುಮಾರ್‌ ಪ್ರಶಸ್ತಿ ಮುಡಿಗೇರಿಸಿ ಕೊಂಡಿದ್ದಾರೆ. 

Advertisement

ಮೈಸೂರು ಜಿಲ್ಲಾ ಚೆಸ್‌ ಸಂಸ್ಥೆ ಆಶ್ರಯದಲ್ಲಿ ನಗರದ ಮೈಸೂರು ವಿವಿ ಜಿಮ್‌ಖಾನಾ ಹಾಲ್‌ನಲ್ಲಿ ಭಾನುವಾರ ನಡೆದ ಟೂರ್ನಿಯ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಎಂ.ಡಿ.ಚಿರಂತ್‌ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಟೂರ್ನಿಯ ಒಂಭತ್ತು ಸುತ್ತುಗಳಲ್ಲಿ ಒಟ್ಟಾರೆ 9 ಪಾಯಿಂಟ್‌ಗಳಿಂದ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದ ತೇಜ್‌ಕುಮಾರ್‌, 15 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾದರು. ಉಳಿದಂತೆ 7.5 ಅಂಕಗಳನ್ನು ಪಡೆದ ಓಜಸ್‌ ಕುಲಕರ್ಣಿ(ದ್ವಿತೀಯ), ಡಿ.ಯಶಸ್‌(ತೃತೀಯ) ಹಾಗೂ ಎಂ.ಶಿವಾಂತ್‌(ನಾಲ್ಕನೇ) ಸ್ಥಾನ ಪಡೆದುಕೊಂಡರು.

ಅಲ್ಲದೆ ಟೂರ್ನಿಯಲ್ಲಿ ಬಾಲಕ ಹಾಗೂ ಬಾಲಕಿಯ ವಿಭಾಗದಲ್ಲಿ ನಡೆದ ಯು-7, ಯು-9, ಯು-11, ಯು-13 ಹಾಗೂ ಯು-15 ವಿಭಾಗದ ಸ್ಪರ್ಧಿಗಳಿಗೆ ಪ್ರಶಸ್ತಿ ನೀಡಲಾಯಿತು. ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ, ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ 200ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next