Advertisement

ಗ್ರಾಮೋತ್ಥಾನ ಸೆಂಟರ್‌ ಆಯೋಜನೆ “ನೋಟ್‌ ಬುಕ್‌ ಮೇಕಿಂಗ್‌’ತರಗತಿ

02:25 AM Jul 17, 2017 | Harsha Rao |

ಬದಿಯಡ್ಕ: ಗ್ರಾಮೋತ್ಥಾನ ಸೇವಾ ಸೆಂಟರ್‌ ಬದಿಯಡ್ಕ ಇದರ ವತಿಯಿಂದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮಕ್ಕಳಿಗಾಗಿ “ನೋಟ್‌ ಬುಕ್‌ ಮೇಕಿಂಗ್‌’ ತರಗತಿಯನ್ನು ಶುಕ್ರವಾರ ನಡೆಸಲಾಯಿತು. 

Advertisement

ಸಂಪನ್ಮೂಲ ವ್ಯಕ್ತಿಯಾಗಿ ಕಾಸರಗೋಡು ಬಿ.ಇ.ಎಂ. ಹೈಸ್ಕೂಲಿನ ಅಧ್ಯಾಪಕ, ಕ್ರಾಫ್ಟ್ ರಿಸೋರ್ಸ್‌ ಪರ್ಸನ್‌ ಬೆನ್ನಿ ಟಿ.ಟಿ. ತರಗತಿಯನ್ನು ನಡೆಸಿಕೊಟ್ಟರು. ಅವರು ಮಾತನಾಡಿ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯ ಅನಾವರಣಕ್ಕೆ ಇಂತಹ ಕಾರ್ಯಕ್ರಮಗಳು ಅತೀ ಅಗತ್ಯ. ಇದರಿಂದಾಗಿ ಮಕ್ಕಳ ಧೈರ್ಯ, ಛಲ, ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದರು. ಗ್ರಾಮೋತ್ಥಾನ ಸೇವಾ ಸೆಂಟರ್‌ನ ಸಂಚಾಲಕ ಧನಂಜಯ ಮಧೂರು ಕಾರ್ಯಕ್ರಮಕ್ಕೆ ನೇತೃತ್ವವನ್ನು ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ಅಧ್ಯಾಪಿಕೆಯರು ಸಹಕರಿಸಿದರು. ಸಿಂಧುಶ್ರೀ ಸ್ವಾಗತಿಸಿ, ಶಿವರಾಮ ಭಾರದ್ವಜ್‌ ಧನ್ಯವಾದವನ್ನಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next