ಕುಂಬಳೆ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವದಂಗವಾಗಿ ಒಡಿಯೂರು ಗ್ರಾಮ ವಿಕಾಸ ಯೋಜನೆಯ ಘಟಕ ಸಮಿತಿ,ಗ್ರಾಮ ಸಮಿತಿ ವತಿಯಿಂದ ಮತ್ತು ಸಾರ್ವಜನಿಕರಿಂದ ಭತ್ತದ ಬೇಸಾಯ ಮತ್ತು ಶುಚಿತ್ವ ಕಾರ್ಯಕ್ರಮವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಗ್ರಾಮೋತ್ಸವವನ್ನಾಗಿ ಆಚರಿಸಲಾಯಿತು.ಕಾವಿ ಶ್ರೀ ಸುಬ್ರಹ್ಮಣ್ಯ ದೇಗುಲ ಬಳಿಯ ಕಾಫ್ರಿಗದ್ದೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಗದ್ದೆಗೆ ಹಾಲು ಎರೆಯುವ ಮೂಲಕ ಉದ್ಘಾಟಿಸಿದರು.
ಬಳಿಕ ತೆಂಗಿನ ಹಿಂಗಾರ ಅರಳಿಸಿ ದೀಪ ಬೆಳಗಿಸಿದರು.ಶ್ರೀ ಮಾತಾನಂದಮಯಿ ಅವರು ಆಶೀರ್ವಚನ ನೀಡಿದರು.
ಸಾಮಾಜಿಕ ಧಾರ್ಮಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ನ್ಯಾಯಾಧೀಶ ಪ್ರಭಾಕರ ನಾೖಕ್,ಗಣ್ಯರಾದ ಮಮತಾ ದಿವಾಕರ್, ದೇವಪ್ಪ ಶೆಟ್ಟಿ ಚಾವಡಿಬೈಲು.ಮಮತಾ ದಿವಾಕರ್,ಹರ್ಷಾದ್, ನಾರಾಯಣ ನಾವಡ ,ಪ್ರೇಮಲತಾ ನಾೖಕ್,ಶ್ರೀಧರ ಶೆಟ್ಟಿ ಮುಟ್ಟ,ರವೀಂದ್ರ ಶೆಟ್ಟಿ ಉಳಿದೊಟ್ಟು,ರಾಜೇಶ್ವರಿ ವರ್ಕಾಡಿ, ಫ್ರಾನ್ಸಿಸ್ ಮೊಂತೆರೊ ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದಂಗವಾಗಿ ಮಜಿರ್ ಪಳ್ಳದಿಂದ ಸುಂಕದಕಟ್ಟೆ ತನಕ ಪರಿಸರ ಶುಚಿಗೊಳಿಸಲಾಯಿತು. ಗದ್ದೆಯಲ್ಲಿ ವಿವಿಧ ಆಟೋಟ ಸ್ಫರ್ಧೆಗಳು ಜರಗಿದವು.