Advertisement
ಈ ಸಮಾರಂಭದಲ್ಲಿ ಮ್ಯೂಸಿಕ್ ಲೋಕದಲ್ಲಿ ಸಾಧನೆಗೈದ ಹತ್ತಾರು ಕಲಾವಿದರ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ನೀಡಲಾಗಿದೆ.
Related Articles
Advertisement
ಮಿಚೆಲ್ ಒಬಾಮಾ ಅವರು ಅತ್ಯುತ್ತಮ ಆಡಿಯೋಬುಕ್ ಗಾಗಿ( “The Light We Carry: Overcoming in Uncertain Times,”) ಗ್ರ್ಯಾಮಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಾರತಕ್ಕೆ ಗ್ರ್ಯಾಮಿ ತಂದ ʼಶಕ್ತಿ” ಬ್ಯಾಂಡ್: ಇನ್ನು ಈ ವರ್ಷ ಕೂಡ ಭಾರತದ ಮ್ಯೂಸಿಕ್ ಸಾಧನೆಗೆ ಗ್ರ್ಯಾಮಿ ಪ್ರಶಸ್ತಿಯ ಗೌರವ ಸಂದಿದೆ. ಶಂಕರ್ ಮಹಾದೇವನ್ ಮತ್ತು ಝಾಕಿರ್ ಹುಸೇನ್ ಅವರ ʼಬ್ಯಾಂಡ್ ಶಕ್ತಿ ʼ ಗ್ರ್ಯಾಮಿ ಗೆದ್ದಿದೆ. ಈ ಬ್ಯಾಂಡ್ ನ ‘ದಿಸ್ ಮೂಮೆಂಟ್’ಹೆಸರಿನ ಆಲ್ಬಂಗೆ ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂ ವಿಭಾಗದಲ್ಲಿ ಅವಾರ್ಡ್ ಸಿಕ್ಕಿದೆ.
‘ದಿಸ್ ಮೂಮೆಂಟ್ʼ 2023 ರ ಜೂನ್.30 ರಂದು ರಿಲೀಸ್ ಆಗಿದೆ. ಇದರಲ್ಲಿ ಒಟ್ಟು 8 ಹಾಡುಗಳಿದ್ದು, ಬ್ರಿಟಿಷ್ ಮೂಲದ ಜಾನ್ ಮೆಕ್ಲಾಲಿನ್ (ಗಿಟಾರ್ ಸಿಂಥ್), ಝಾಕಿರ್ ಹುಸೇನ್ (ತಬಲಾ), ಶಂಕರ್ ಮಹದೇವನ್ (ವೋಕಲಿಸ್ಟ್), ವಿ ಸೆಲ್ವಗಣೇಶ್ (ತಾಳವಾದಕ ಹಾಗೂ ಗಣೇಶ್ ರಾಜಗೋಪಾಲನ್ (ಪಿಟೀಲು ವಾದಕ) ಅವರು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಸುಸಾನಾ ಬಾಕಾ, ಬೊಕಾಂಟೆ, ಬರ್ನಾ ಬಾಯ್ ಮತ್ತು ಡೇವಿಡೊ ಆಲ್ಬಂನೊಂದಿಗೆ ನಾಮಿನೇಟ್ ಆಗಿದ್ದ ʼದಿಸ್ ಮೂಮೆಂಟ್ʼ ಗ್ಲೋಬಲ್ ಮ್ಯೂಸಿಕ್ ಆಲ್ಬಂ ವಿಭಾಗದಲ್ಲಿ ಅವಾರ್ಡ್ ಸಿಕ್ಕಿದೆ.
ಇನ್ನು ʼಪಾಷ್ಟೋ’ ನಲ್ಲಿನ ಕೊಡುಗೆಗಾಗಿ ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಪರ್ಫೆಮೆನ್ಸ್ ವಿಭಾಗದಲ್ಲಿ ಬೇಲಾ ಫ್ಲೆಕ್ ಮತ್ತು ಎಡ್ಗರ್ ಮೆಯೆರ್, ರಾಕೇಶ್ ಚೌರಾಸಿಯಾ ಅವರೊಂದಿಗೆ ಗ್ರ್ಯಾಮಿ ಗೆದ್ದಿದ್ದಾರೆ. ಇದಲ್ಲದೆ ಅವರು Best Contemporary Instrumental Album(As We Speak ಆಲ್ಬಂ) ವಿಭಾಗದಲ್ಲಿ ಗ್ರ್ಯಾಮಿಯನ್ನು ಪಡೆದುಕೊಂಡಿದ್ದಾರೆ. ಇದೇ ವಿಭಾಗದಲ್ಲಿ ರಾಕೇಶ್ ಚೌರಾಸಿಯಾ ಅವರು ಕೂಡ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಝಾಕಿರ್ ಹುಸೇನ್ ಅವರು ಮೂರು ಗ್ರ್ಯಾಮಿಯನ್ನು ಗೆದ್ದಿದ್ದು, ರಾಕೇಶ್ ಚೌರಾಸಿಯಾ ಅವರು ಎರಡು ಗ್ರ್ಯಾಮಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಾರತಕ್ಕೆ ಗ್ರ್ಯಾಮಿ ತಂದುಕೊಟ್ಟ ಝಾಕಿರ್ ಹುಸೇನ್ ಹಾಗೂ ಶಂಕರ್ ಮಹದೇವನ್ ಹಾಗೂ ಇತರರಿಗೆ ರಿಕ್ಕಿ ಕೇಜ್ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.