Advertisement

“ಕನ್ನಡಕ’ವ್ಯಾಕರಣ

06:00 AM Aug 08, 2018 | |

ಕನ್ನಡಕ ಧರಿಸಿದವರಿಗೆ ಸೋಡಾಬುಡ್ಡಿ ಅಂತ ಕರೆಯುವ ಕಾಲವೇನೂ ಈಗಿಲ್ಲ. ಕನ್ನಡಕವೇ ಈಗಿನ ಗ್ಲ್ಯಾಮರ್‌ ಗುಟ್ಟು. ಕನ್ನಡಕವು ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌ನ ಕೃಪೆಯೇ ಆಗಿದ್ದರೂ, ಅದನ್ನು ಪಾಸಿಟಿವ್‌ ಆಗಿ ಸ್ವೀಕರಿಸುವ ಕಲೆ ಕೆಲವರಿಗೆ ಸಿದ್ಧಿಸಿರುತ್ತೆ. ಡಿಜಿಟಲ್‌ ತಂದಿತ್ತ ಸೌಂದರ್ಯಗಳಲ್ಲಿ ಇದೂ ಒಂದು. ಹಾಗೆ ಕನ್ನಡಕ ಧರಿಸಿಯೂ ಗ್ಲ್ಯಾಮರಸ್‌ ಆಗಿ ಕಾಣೊದು ಹೇಗೆ?

Advertisement

1. ತುಟಿಗೆ ಕಮ್ಮಿ ಲಿಪ್‌ಸ್ಟಿಕ್‌
ಚೆಂದದ ಮುಖದಲ್ಲಿ ಕನ್ನಡಕ ಫ್ರೆಮ್‌ ಹೈಲೈಟ್‌ ಆಗಿ ಕಂಡರೆ, ಬ್ಯೂಟಿ ಇನ್ನೂ ಹೆಚ್ಚುತ್ತೆ. ಹಾಗಾಗಿ, ಇಡೀ ಮುಖ ಬಿಳಿಯ ಕಾಗದದ ರೀತಿ ಇದ್ದರೆ, ಫ್ರೆಮ್‌ ಎದ್ದು ಕಾಣುತ್ತೆ.  ಈ ಕಾರಣ ಗಾಢ ಲಿಪ್‌ಸ್ಟಿಕ್‌ ಬೇಡ.

2.  ಕಣ್ಣು ಮಾತಾಡ್ಲಿ…
ರೌಂಡ್‌ ಕನ್ನಡಕದ ಒಳಗೆ ಕಣ್ಣೋಟವನ್ನು ನೋಡೋದೇ ಒಂದು ಚೆಂದ. ಕಣ್ಣಿಗೆ ಗಾಢ ಕಾಜಲ್‌ ಹಚ್ಚಿಕೊಂಡರೆ, ಪಾರದರ್ಶಕ ಗ್ಲಾಸ್‌ನ ಒಳಗಿಂದ ನೇರವಾಗಿ ಕಣ್ಣೇ ಮಾತಾಡುತ್ತೆ. ನೋಟದ ಆಕರ್ಷಣೆಯೂ ಹೆಚ್ಚುತ್ತೆ.

3.  ಚೆಂದದ ಪ್ರೇಮ್‌ 
ಮುಖವೆಂಬ ಕಲಾಕೃತಿಗೆ ಕನ್ನಡಕ ಫ್ರೆàಮೇ ಅದ್ಭುತ ಫ್ರೆàಮ್‌. ಆ ಫ್ರೆàಮ್‌ನಿಂದಲೇ ನಿಮ್ಮ ಮುಖಕ್ಕೆ ಕಳೆಬಂದಿದೆ ಎಂದು ಯಾರಾದರೂ ಹೊಗಳಿದರೂ ಪರ್ವಾಗಿಲ್ಲ. ತುಂಬಾ ಕ್ಲಾಸಿಕ್‌ ಎನ್ನುವಂಥ ಫ್ರೆàಮ್‌ ಅನ್ನೇ ಆರಿಸಿಕೊಳ್ಳಿ. 

4. ಮ್ಯಾಟ್‌ ಫೌಂಡೇಶನ್‌
ನಿಮ್ಮದು ಒಣಚರ್ಮವಾಗಿದ್ದರೆ, ಬೇರೆ ಬ್ಯೂಟಿ ಕ್ರೀಮ್‌ಗಳನ್ನಾಗಲೀ, ಮಾಯಿಶ್ಯುರೈಸರನ್ನಾಗಲೀ ಮುಖಕ್ಕೆ ಲೇಪಿಸಿಕೊಳ್ಳದಿರಿ. 1 ತಾಸಿನ ನಂತರ ಇವು ಎಣ್ಣೆಚರ್ಮದಂತೆ ರೂಪ ಬದಲಿಸುತ್ತವೆ. ಅಪ್ಪಿತಪ್ಪಿ ಕನ್ನಡಕ ಮುಟ್ಟಿಕೊಳ್ಳುವಾಗ, ಗ್ಲಾಸ್‌ ಕೂಡ ಮಸುಕು ಮಸುಕಾಗುತ್ತದೆ. ಹಾಗಾಗಿ, ಮ್ಯಾಟ್‌ ಫೌಂಡೇಶನ್ನುಗಳನ್ನೇ ಆದಷ್ಟು ಬಳಸಿ.

Advertisement

5. ಆರೋಗ್ಯಯುತ ಆಹಾರ
ನಿದ್ದೆಗೆಟ್ಟು ಇಲ್ಲವೇ ದಣಿದಾಗ ಕಣ್ಣು ಕಾಂತಿಹೀನ ಆಗುತ್ತೆ. ಇದೇ ಆಯಾಸ ನಿರಂತರವಾಗಿದ್ದರೆ ಕಣ್ಣಿನ ಸುತ್ತ ಕಪ್ಪು ವರ್ತುಲಗಳೂ ನಿರ್ಮಾಣಗೊಳ್ಳುತ್ತವೆ. ಇದನ್ನು ಆದಷ್ಟು ನಿಯಂತ್ರಿಸಲು, ಚೆನ್ನಾಗಿ ನಿದ್ರೆ, ಕ್ಯಾರೆಟ್‌- ಸೊಪ್ಪಿನಂಥ ತರಕಾರಿಗಳ ಸೇವನೆ, ಹೆಚ್ಚೆಚ್ಚು ನೀರು ಕುಡಿಯುವುದನ್ನು ರೂಢಿಸಿಕೊಳ್ಳಬೇಕು. ಆಗಲೇ ಸುಂದರ ಕನ್ನಡಕದೊಳಗಿನ ಕಣ್ಣು, ಬಾಯಿಗಿಂತಲೂ ಮೊದಲು ಮಾತಾಡೋದು! 

Advertisement

Udayavani is now on Telegram. Click here to join our channel and stay updated with the latest news.

Next