Advertisement

ಗ್ರಾಮೀಣ ವಲಯದ ಆಯ್ದ 70 ಮಂದಿಗೆ ನೌಕರಿ

11:46 PM Jun 29, 2019 | sudhir |

ಕಾಸರಗೋಡು: ದೀನ್‌ ದಯಾಳ್‌ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ ಮೂಲಕ ಈ ಬಾರಿ ತರಬೇತಿ ಪಡೆದಿರುವ 70 ಮಂದಿಗೆ ನೌಕರಿ ಲಭಿಸಿದೆ.

Advertisement

18-35ವರ್ಷ ಪ್ರಾಯದ ಆಯ್ದ ಗ್ರಾಮೀಣ ವಲಯದ ಯುವತಿ-ಯುವಕರಿಗೆ ಉಚಿತ ರೂಪದಲ್ಲಿ ಕಡಿಮೆ ಅವಧಿಯ ತರಬೇತಿ ನೀಡಿ ನೌಕರಿಯ ಖಚಿತತೆ ನೀಡುವ ಯೋಜನೆ ಇದಾಗಿದೆ.

ಪೆರಿಯ ನಾರಾಯಣ ಎಜ್ಯುಕೇಶನಲ್ ಆ್ಯಂಡ್‌ ಚಾರಿಟೇಬಲ್ ಟ್ರಸ್ಟ್‌ ವ್ಯಾಪ್ತಿಯಲ್ಲಿ ಎ.4ರಂದು ಈ ಯೋಜನೆ ಮೂಲಕ ಹತ್ತನೇ ತರಗತಿ ಶಿಕ್ಷಣಾರ್ಹತೆ ಪಡೆದಿರುವ 7 0 ಮಂದಿ ಯುವಜನತೆಗೆ ಹಾಸ್ಪಿಟಾ ಲಿಟಿ(ಹೋಟೆಲ್ ಮೆನೇಜ್‌ ಮೆಂಟ್) ತರಬೇತಿಗೆ ಆಯ್ಕೆ ಮಾಡಲಾಗಿತ್ತು. ತರಬೇತಿ ಪೂರ್ಣಗೊಳ್ಳುತ್ತಿದ್ದಂತೆ ಎಲ್ಲ ವಿದ್ಯಾರ್ಥಿಗಳಿಗೂ ಉದ್ಯೋಗ ದೊರಕಿತ್ತು.

ನೇಮಕಾತಿತ್ರಹಸ್ತಾಂತರಕಾರ್ಯಕ್ರಮದಲ್ಲಿಎಸ್‌.ಎನ್‌.ಇ.ಟಿ.ಸಿ. ಅಧ್ಯಕ್ಷ ಸಿ.ರಾಜನ್‌ ಅವರು ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕುಟುಂಬಶ್ರೀ ಮಿಷನ್‌ ಸಂಚಾಲಕ ಟಿ.ಟಿ.ಸುರೇಂದ್ರನ್‌ ಮುಖ್ಯ ಅತಿಥಿಯಾಗಿದ್ದರು. ಎಸ್‌.ಎನ್‌.ಟ್ರಸ್ಟ್‌ ನಿರ್ದೇಶಕ ಬಾಲಕೃಷ್ಣನ್‌ ಪೆರಿಯ, ಕುಟುಂಬಶ್ರೀ ಸಹಾಯಕ ಸಂಚಾಲಕ ಜೋಸೆಫ್‌ ಪೆರುಂಕಿಲ್, ಡಾ.ಕೆ.ವಿ.ಶಶಿಧರನ್‌, ಬೈಜು ಆಯಾಡತ್ತಿಲ್, ಕುಟುಂಬಶ್ರೀ ಜಿಲ್ಲಾ ಪ್ರೋಗ್ರಾಂ ಸಂಚಾಲಕಿ ರೇಶ್ಮಾ, ಮಹಮ್ಮದ್‌ ನಯೀಫ್‌, ಸಫೀರ್‌, ಐಶ್ವರ್ಯಾ ಕುಮಾರನ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಪ್ಲಸ್‌ ಟು ಕನಿಷ್ಠ ಶಿಕ್ಷಣಾರ್ಹತೆ ಹೊಂದಿರುವವರಿಗಾಗಿ 6 ತಿಂಗಳ ಅವಧಿಯ ಬ್ಯಾಂಕಿಂಗ್‌ ಆ್ಯಂಡ್‌ ಅಕೌಂಟಿಂಗ್‌ (ಟ್ಯಾಲಿ), ಫ್ಯಾಷನ್‌ ಡಿಸೈನಿಂಗ್‌ ತರಬೇತಿಗಳು ಎಸ್‌.ಎನ್‌.ಟ್ರಸ್ಟ್‌ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿದೆ.

ಕ್ಯಾಂಪಸ್‌ ಇಂಟರ್‌ವ್ಯೂ

ಜಿಲ್ಲೆಯ ಮತ್ತು ಇತರ ಜಿಲ್ಲೆಗಳ ಫೈವ್‌ ಸ್ಟಾರ್‌ ಶ್ರೇಣಿಯ 12 ಹೋಟೆಲ್ಗಳಲ್ಲಿ ಸರಕಾರಿ ತಿಳಿಸಿರುವ ವೇತನ ಸಹಿತದ ನೌಕರಿ ಕ್ಯಾಂಪಸ್‌ ಇಂಟರ್‌ವ್ಯೂ ಮೂಲಕ ಲಭಿಸಿದೆ. ಈ ಸಂಬಂಧ ಪೆರಿಯ ಡಿ.ಡಿ.ಯು.ಜಿ.ಕೆ. ತರಬೇತಿ ಕೇಂದ್ರದಲ್ಲಿ ನಡೆದ ಸಮಾರಂಭವನ್ನು ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಉದ್ಯೋಗ ನೇಮಕಾತಿ ಪತ್ರ ಹಸ್ತಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next