Advertisement
1957ರಲ್ಲಿ ಪ್ರಕಟವಾದ ರಾವಬಹಾದ್ದೂರ (ರಾಮಚಂದ್ರ ಭೀಮರಾವ್ ಕುಲಕರ್ಣಿ)ರ ಚೊಚ್ಚಲ ಕೃತಿ “ಗ್ರಾಮಾಯಣ’ ನಿರೀಕ್ಷೆಗೂ ಮೀರಿ ಮನ್ನಣೆ ಪಡೆದ ಕಾದಂಬರಿಯಾಗಿದೆ. ಒಂದು ಊರಿನ ಬದುಕನ್ನು ಕೇಂದ್ರವಾಗಿರಿಸಿ ಓದುಗರ ಮನಸ್ಸಿಗೆ ನಾಟುವಂತೆ ನಿರೂಪಿಸಿ ರುವುದು ಕೃತಿಯ ವೈಶಿಷ್ಟ್ಯ. ಈ ಕಾದಂಬರಿಗೆ ನಾಯಕ ಯಾ ನಾಯಕಿ ಇಲ್ಲ. ಹಲವು ಜಾತಿ ಗಳು, ಅವುಗಳ ಆಚಾರ- ವಿಚಾರ, ಸಾಮುದಾಯಿಕ ಮನೋಭಾವ, ಸಂಘರ್ಷ ಮೊದಲಾದವುಗಳ ಅಭಿವ್ಯ ಕ್ತಿಯೇ ಇದರ ಮೂಲ.
Related Articles
Advertisement
ಜತೆಗೆ ಸ್ವಾಭಾವಿಕವಾಗಿ ಬರಗಾಲ, ಪ್ಲೇಗ್ ಹಾವಳಿಗಳು ಸಮುದಾಯದಲ್ಲಿ ಭೀತಿ ಹುಟ್ಟಿಸಿ ಕಾಡುವ ಬಗೆಯ ಚಿತ್ರಣವೂ ಈ ಕೃತಿಯಲ್ಲಿದೆ. ಆ ಕಾಲದ ಸಮಾಜದಲ್ಲಿ ಪ್ರಸ್ತುತ ವಾಗಿದ್ದ ಸಾಂಕ್ರಾಮಿ ಕಗಳ ಭೀತಿ, ಜತೆಗೆ ಅವುಗಳೊಂದಿಗೆ ಬೆಸೆದಿರುವ ಮೂಢನಂಬಿ ಕೆಗಳು, ಒಂದು ಊರಿನಲ್ಲಿ ಇರಬಹುದಾದ ಇತರ ಸಮಸ್ಯೆಗಳನ್ನು ಕಣ್ಣಿಗೆ ಕಟ್ಟು ವಂತೆ ತೆರೆದಿಟ್ಟಿದ್ದಾರೆ. ಇದು ಇಂದಿನ ಕೊರೊನಾ ಯುಗಕ್ಕೂ ಪ್ರಸ್ತುತ. ಬಡ್ಡಿ ವ್ಯವಹಾರ, ಅದರಲ್ಲಿನ ವಸೂ ಲಿಯ ದಾರ್ಷ್ಟ್ಯ, ಅಕ್ರಮ ಸಂಬಂಧಗಳ ಮೆಲು ನೋಟಗಳು ಕೃತಿಯಲ್ಲಿವೆ.
ಕೃತಿಯ ಉದ್ದಕ್ಕೂ ಢಾಳಾಗಿ ಕಾಣುವುದು ಮಾನವೀಯ ಅನುಕಂಪದ ಸೆಲೆ. ಇದು ಲೇಖಕರಿಗೆ ಸಹಜವಾದ ಮತ್ತು ಮಾನವ ಜನಾಂಗಕ್ಕೆ ಅಪೇಕ್ಷಣೀಯ ಗುಣ. ರಾವಬ ಹದ್ದೂರರು ಸ್ವಾತಂತ್ರ್ಯ ಹೋರಾಟಗಾರರು. ಗಾಂಧಿ ಅನುಯಾಯಿಯಾಗಿ ವರ್ಷಕ್ಕೂ ಹೆಚ್ಚುಕಾಲ “ಖಾದಿ ಗ್ರಾಮೋದ್ಯೋಗ ವ್ಯವ ಹಾರ’ ನೋಡಿಕೊಂಡಿದ್ದರು. ಆ ಕಾಲದ ಸಮಾಜದ ಸ್ವಾನುಭವ ‘ಗ್ರಾಮಾಯಣ’ವಾಗಿ ಪಡಿಮೂಡಿರಬಹುದು. ನಿತ್ಯ ಜೀವನದಲ್ಲಿ ದಕ್ಕುವ ಸಣ್ಣ ಸಣ್ಣ ಕೊರತೆಗಳೂ, ಅಸೂಯೆ, ದ್ವೇಷ ಇತ್ಯಾದಿ ಅನರ್ಥಕಾರಿ ವಿಚಾರಗಳೂ ಹೇಗೆ ವ್ಯವಸ್ಥಿತವಾಗಿ ಒಂದು ದುರಂತಕ್ಕೆ ಮುನ್ನುಡಿಯಾಗಬಹುದು ಎಂದು ವಿವರಿ ಸುತ್ತಾ ಈ ಕಾದಂಬರಿ ಜೀವನಸ್ಪರ್ಶಿ ಕೃತಿ ಯಾಗಿ ನೆಲೆಯಾಗಿದೆ. ಅತಿರಂಜನೀಯ ಉತ್ಪ್ರೇಕ್ಷೆಗಳ ಹಾದಿ ತುಳಿಯದೆ ಈ ಕೃತಿ ಜೀವ ಸ್ವಾಭಾವಿಕ ವಿಚಾರಗಳಿಗೆ ಮಣೆ ಹಾಕಿದೆ.
ಐಶ್ವರ್ಯಾ, ಕುಂದಾಪುರ