Advertisement

“ದೇಗುಲ ನಿರ್ಮಾಣದಿಂದ ಗ್ರಾಮಾಭ್ಯುದಯ’

11:38 PM Apr 20, 2019 | Team Udayavani |

ಬೆಳ್ತಂಗಡಿ: ಚಂದ್ಕೋರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮೇ 8ರಿಂದ 13ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಭೇಟಿ ನೀಡಿದರು.

Advertisement

ಕಾರ್ಯಕಾರಿ ಸಮಿತಿಯವರನ್ನು ಉದ್ದೇಶಿಸಿ ಮಾತನಾಡಿದ ಅವರು, ಚಂದ್ಕೋರಿನಲ್ಲಿ ಉತ್ತಮ ಪರಿಸರದ ಮಧ್ಯೆ ದೇವಿಯ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಮತ್ತು ಅದಕ್ಕೆ ಊರವರೇ ನೇತೃತ್ವ ವಹಿಸಿರುವುದು ಇಲ್ಲಿನ ಕ್ಷೇತ್ರದ ಸಾನ್ನಿಧ್ಯವಾಗಿದೆ ಎಂದರು.

ಹಲವಾರು ವರ್ಷಗಳ ಹಿಂದೆ ಕಷ್ಟ ಕಾಲದಲ್ಲೂ ದೇವಸ್ಥಾನ ಪ್ರತಿಷ್ಠಾಪಿಸುತ್ತಿದ್ದರು. ಹಿಂದೆ ಪಾರಂಪರಿಕ ಕೃಷಿ ಸಂದರ್ಭದಲ್ಲಿ ನಂಬಿಕೆಯಿಂದಲೇ ದೇವರ ಹರಕೆಹೊತ್ತು ಕೃಷಿ ಚಟುವಟಿಕೆಯನ್ನು ಮಾಡುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿ ಕೃಷಿಯನ್ನು ನಂಬಿಕೊಂಡು ದೇವರನ್ನು ನಂಬುವಂತಹ ಕಾಲವಿತ್ತು. ಸುರ್ಯ ಕ್ಷೇತ್ರದಲ್ಲಿ ಇಂದಿಗೂ ಅದೇ ಪರಂಪರೆಯಾಗಿ ಪ್ರಾಣಿ, ಮನೆ ಇನ್ನಿತರ ವಿಷಯವನ್ನು ನಂಬಿಕೆಯಾಗಿರಿಸಿ ಹರಕೆ ಹೊರುವಂತಹ ಪದ್ಧತಿ ಮತ್ತು ನಂಬಿಕೆ ಇದೆ. ಅದಕ್ಕಾಗಿ ಈ ಕ್ಷೇತ್ರದಲ್ಲಿ ಗ್ರಾಮಸ್ಥರು ಅಚಲವಾದ ನಂಬಿಕೆಯಿಂದ ದೇವಸ್ಥಾನ ನಿರ್ಮಿಸಿದ್ದಾರೆ. ಆದಷ್ಟು ಬೇಗ ಕ್ಷೇತ್ರದ ಕಾಮಗಾರಿ ಮುಗಿದು ಬ್ರಹ್ಮಕಲಶೋತ್ಸವ ಯಶಸ್ವಿಯಾಗಲಿ ಎಂದರು.

ಕ್ಷೇತ್ರದ ಜೀಣೊìàದ್ಧಾರ ಸಮಿತಿ ಅಧ್ಯಕ್ಷ ಧನಂಜಯ ಅಜ್ರಿ, ಪ್ರಧಾನ ಕಾರ್ಯದರ್ಶಿ ಧನಂಜಯ ರಾವ್‌, ಕಾರ್ಯದರ್ಶಿ ವಸಂತ ಸುವರ್ಣ, ಖಜಾಂಚಿ ಯೋಗೀಶ ಭಿಡೆ, ಸುಭಾಯ ಡೋಂಗ್ರೆ, ಗಿರೀಶ್‌ ಡೋಂಗ್ರೆ, ಗ್ರಾ. ಯೋಜನೆಯ ತಾ| ಯೋಜನಾಧಿಕಾರಿ ಜಯಕರ್‌ ಶೆಟ್ಟಿ, ವಿಟ್ಟಲ ಶೆಟ್ಟಿ, ರಾಜೇಶ್‌ ಶೆಟ್ಟಿ ಲಾೖಲ, ದಯಾನಂದ ಸಾಲ್ಯಾನ್‌, ಕೃಷ್ಣಪ್ಪ ಪೂಜಾರಿ, ಪ್ರಸಾದ್‌ ಶೆಟ್ಟಿ ಏಣಿಂಜೆ, ಹಾಗೂ ಊರವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next