Advertisement

ಶಿರ್ವ: ಹಸಿ ಕಸ ನಿರ್ವಹಣೆಯ ಪ್ರಾಯೋಗಿಕ ತರಬೇತಿಗೆ ಚಾಲನೆ

07:53 PM Feb 06, 2023 | Team Udayavani |

ಶಿರ್ವ: ಜಿ.ಪಂ.ಉಡುಪಿ ಹಾಗೂ ಶಿರ್ವ ಗ್ರಾ.ಪಂ. ನ ಸಹಯೋಗದೊಂದಿಗೆ ಸ್ವಚ್ಛ ಭಾರತ್‌ ಮಿಷನ್‌(ಗ್ರಾ) ಯೋಜನೆಯಡಿ ಹಸಿ ತ್ಯಾಜ್ಯ ನಿರ್ವಹಣೆಗಾಗಿ ಪರಿಸರ ಸ್ನೇಹಿ,ಸಾವಯವ,ಸಮುದಾಯ ಕೈ ತೋಟ ನಿರ್ಮಾಣದ ಕುರಿತು ಶಿರ್ವ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ನಡೆಯುವ 2 ದಿನಗಳ ಪ್ರಾಯೋಗಿಕ ತರಬೇತಿ ಕಾರ್ಯಕ್ರಮಕ್ಕೆ ಶಿರ್ವ ಗ್ರಾ.ಪಂ. ಅಧ್ಯಕ್ಷ ರತನ್‌ ಕುಮಾರ್‌ ಶೆೆಟ್ಟಿ ಫೆ. 6 ರಂದು ಚಾಲನೆ ನೀಡಿದರು.

Advertisement

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ .ಹೆಚ್‌ ಅವರ ಮಾರ್ಗದರ್ಶನದಲ್ಲಿ ನೋಡಲ್‌ ಅಧಿಕಾರಿ/ ಜಿ.ಪಂ. ಮುಖ್ಯ ಯೋಜನಾಧಿಕಾರಿ ಎ. ಶ್ರೀನಿವಾಸ ರಾವ್‌ ನೇತೃತ್ವದಲ್ಲಿ ಸಂಪನ್ಮೂಲ ವ್ಯಕ್ತಿ ವೆಲ್ಲೂರು ಶ್ರೀನಿವಾಸನ್‌ ಜಿಲ್ಲೆಯ ಹಸಿ ತ್ಯಾಜ್ಯ ಸಂಗ್ರಹಿಸುತ್ತಿರುವ ಗ್ರಾ.ಪಂ.ಗಳಲ್ಲಿ ವ್ಯವಸ್ಥಿತವಾಗಿ ಹಸಿ ತ್ಯಾಜ್ಯ ನಿರ್ವಹಣೆ ಮಾಡುವ ಬಗ್ಗೆ ಪ್ರಾಯೋಗಿಕ ತರಬೇತಿ ನೀಡುತ್ತಿದ್ದಾರೆ.

ಜಿಲ್ಲೆಯ ಹಸಿ ತ್ಯಾಜ್ಯ ಸಂಗ್ರಹಿಸುತ್ತಿರುವ ಆಯ್ದ 18 ಗ್ರಾ.ಪಂ.ಗಳ ಪಂ. ಅಭಿವೃದ್ಧಿ ಅಧಿಕಾರಿಗಳು, ಎಸ್‌ಎಲ್‌ಆರ್‌ಎಂ ಘಟಕಗಳ ಮೇಲ್ವಿಚಾರಕರು, ಸುಮಾರು 80ಕ್ಕೂ ಹೆಚ್ಚು ಎಸ್‌ಎಲ್‌ಆರ್‌ಎಂ ಕಾರ್ಯಕರ್ತರು ಮತ್ತು ಅಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.

ಜಿ.ಪಂ. ಸ್ವತ್ಛ ಭಾರತ್‌ ಮಿಷನ್‌ನ ಜಿಲ್ಲಾ ಸಂಯೋಜಕ ರಘುನಾಥ್‌, ಜಿ.ಪಂ. ಎಂಜಿನಿಯರಿಂಗ್‌ ಇಲಾಖೆಯ ಎಂಜಿನಿಯರ್‌ ಸುಭಾಷ್‌ ರೆಡ್ಡಿ, ಕಾಪು ರೈತ ಸಂಪರ್ಕ ಕೇಂದ್ರದ ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಅರುಣ್‌ ಕುಮಾರ್‌, ಶಿರ್ವ ಗ್ರಾ.ಪಂ. ಉಪಾಧ್ಯಕ್ಷೆ ಗ್ರೇಸಿ ಕಾರ್ಡೋಜಾ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಕೆ.ಆರ್‌. ಪಾಟ್ಕರ್‌ ಮತ್ತು ಹಸನಬ್ಬ ಶೇಖ್‌, ಗ್ರಾ.ಪಂ. ಸದಸ್ಯರಾದ ಪ್ರವೀಣ್‌ ಪೂಜಾರಿ, ಆಶಾ ಆಚಾರ್ಯ, ವೈಲೆಟ್‌ ಕ್ಯಾಸ್ತಲಿನೋ,ಗ್ರಾ.ಪಂ. ಪಿಡಿಒ ಅನಂತ ಪದ್ಮನಾಭ ನಾಯಕ್‌, ಕಾರ್ಯದರ್ಶಿ ಚಂದ್ರಮಣಿ, ಗುತ್ತಿಗೆದಾರ ಅನಿಲ್‌ ಕುಮಾರ್‌ ಶೆಟ್ಟಿ, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಗೀತಾ ಶೆಟ್ಟಿ, ಶಿರ್ವ ಎಸ್‌ಎಲ್‌ಆರ್‌ಎಂ ಘಟಕದ ಸಿಬಂದಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಗ್ರಾ.ಪಂ. ಗಳಲ್ಲಿ ಒಣ ಕಸವನ್ನು ನಿರ್ವಹಣೆ ಮಾಡಲಾಗುತ್ತಿದೆ ಆದರೆ ಹೆಚ್ಚಿನ ಗ್ರಾ.ಪಂ. ಗಳಲ್ಲಿ ಹಸಿ ತ್ಯಾಜ್ಯ ನಿರ್ವಹಣೆ ಮಾಡುವ ವ್ಯವಸ್ಥೆ ಇಲ್ಲ. ಅದಕ್ಕಾಗಿ ಹಸಿ ತ್ಯಾಜ್ಯದಿಂದ ಕಾಂಪೋಸ್ಟ್‌ ಗೊಬ್ಬರ ಮಾಡಿ ತರಕಾರಿ ಬೆಳೆದು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ಶಿರ್ವ ಎಸ್‌ಎಲ್‌ಆರ್‌ಎಂ ಘಟಕದ ಆವರಣದಲ್ಲಿ ವೆಲ್ಲೂರು ಶ್ರೀನಿವಾಸನ್‌ ಅವರ ಮೂಲಕ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಜನರಿಗೆ, ಗ್ರಾ.ಪಂ. ಸದಸ್ಯರಿಗೆ ಗಾ.ಪಂ. ಮಟ್ಟದಲ್ಲಿ ಬರುವ ಹಸಿ ತ್ಯಾಜ್ಯವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
– ಪ್ರಸನ್ನ .ಹೆಚ್‌., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next