Advertisement
1940ರಲ್ಲಿ ಉದ್ಘಾಟನೆಯಾದ ಐತಿಹಾಸಿಕ ಕಟ್ಟಡವನ್ನು ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಡಿಜಿಟಲ್ ಲೈಬ್ರರಿ ಕ್ರಾಂತಿಯ ಭಾಗವಾಗಿ ಅಣಿಗೊಳಿಸಲಾಗುತ್ತಿದೆ. ಕಳೆದ ಕೆಲವು ವರ್ಷಗಳವರೆಗೆ ಈ ಕಟ್ಟಡವನ್ನು ಗ್ರಾಪಂ ಕಚೇರಿಯಾಗಿ ಬಳಕೆ ಮಾಡಲಾಗುತ್ತಿತ್ತು. ಹಳೆಯ ಕಟ್ಟಡಕ್ಕೆ ಅಗತ್ಯ ದುರಸ್ತಿ ಕಾರ‍್ಯ ಮಾಡಲಾಗುತ್ತಿದೆ. ಶೀಘ್ರವಾಗಿ ಐತಿಹಾಸಿಕ ಕಟ್ಟಡ ಡಿಜಿಟಲ್ ಲೈಬ್ರರಿಯಾಗಿ ಓದಿನ ಹವ್ಯಾಸ ಬೆಳೆಸುವ ಜ್ಞಾನ ದೇಗುಲವಾಗಿ ಬಳಕೆಯಾಗಲಿದೆ.
Related Articles
Advertisement
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಡಿಜಿಟಲ್ ಲೈಬ್ರರಿ ಕ್ರಾಂತಿಯ ಭಾಗವಾದ ಯೋಜನೆಯಲ್ಲಿ ರಾಷ್ಟ್ರೀಯ ಡಿಜಿಟಲ್ ಲೈಬ್ರರಿಯ ಜತೆಗೆ ಲಿಂಕ್ ಸೌಲಭ್ಯದಿಂದಾಗಿ 8 ಕೋಟಿ ಪುಸ್ತಕಗಳು ಗ್ರಾಮ ಮಟ್ಟದಲ್ಲಿ ಆಸಕ್ತರಿಗೆ ದೊರಕಲಿವೆ. ರಾಜ್ಯ ಪಠ್ಯ ಪುಸ್ತಕ ಸೊಸೈಟಿ ಪ್ರಕಟಿಸುವ ಎಲ್ಲಾ ತರಗತಿಯ ಪಠ್ಯಪುಸ್ತಕಗಳನ್ನು ಸಹ ಮಲೆನಾಡಿನ ಹಳ್ಳಿಯಲ್ಲಿ ಕುಳಿತು ಅವಲೋಕಿಸಬಹುದಾಗಿದೆ.
ಡಿಜಿಟಲ್ ಲೈಬ್ರರಿಯನ್ನು ಕೆಳದಿ ಗ್ರಾಪಂನ ಹಳೆಯ ಕಟ್ಟಡದಲ್ಲಿ ಸ್ಥಾಪಿಸುವ ಸಂಬಂಧ ಸಣ್ಣಪುಟ್ಟ ದುರಸ್ತಿ ಕಾರ‍್ಯ ನಡೆಸಲಾಗುತ್ತಿದೆ. ಮಥನ ಇಂಡಸ್ಟ್ರೀಸ್ ಮಾಲಿಕರಾದ ಬಿ.ಆರ್.ಉಮೇಶ್ ಬಂದಗದ್ದೆ ಪೀಟೋಪಕರಣಗಳನ್ನು ಕೊಡುತ್ತಿದ್ದಾರೆ. ಪುಸ್ತಕ ಜೋಳಿಗೆ ಅಭಿಯಾನ ಆರಂಭಿಸಲಾಗಿದ್ದು, ದಾನಿಗಳು ಪುಸ್ತಕ ನೀಡಲು ಕೋರಲಾಗಿದೆ. ಸಾಕಷ್ಟು ಉತ್ಮ ಸ್ಪಂದನೆ ದೊರಕುತ್ತಿದೆ.– ಅಷ್ಪಾಕ್ ಅಹಮ್ಮದ್, ಪಿಡಿಓ, ಕೆಳದಿ ಗ್ರಾಪಂ, ಕೆಳದಿ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ ನೀಡುವ ಮೂಲಕ ಓದಿನ ಹವ್ಯಾಸ ಪೋಷಿಸಲು ಸಹಕಾರ ನೀಡಬೇಕು. ಚೆನ್ನಮ್ಮಾಜಿ ಜಯಂತಿ ಅಥವಾ ಕೆಳದಿ ಉತ್ಸವದ ಸಂದರ್ಭ ಶಾಸಕರಿಂದ ಲೋಕಾರ್ಪಣೆ ಮಾಡಲಾಗುವುದು.
– ಎಚ್.ಎಸ್.ರಮೇಶ್ ಹಾರೇಕೊಪ್ಪ, ಕೆಳದಿ ಗ್ರಾಪಂ ಮಾಜಿ ಅಧ್ಯಕ್ಷ