Advertisement

ಗ್ರಾಪಂ ಅನುದಾನಕ್ಕೆ ಕತ್ತರಿ ಹಾಕಿದ ಸರ್ಕಾರ

02:44 PM Dec 29, 2021 | Team Udayavani |

ನೆಲಮಂಗಲ: ಗ್ರಾಮೀಣ ಜನರಿಗೆ ವಸತಿ ಸೌಲಭ್ಯ ಸೇರಿದಂತೆ ಗ್ರಾಮ ಪಂಚಾಯಿತಿಗೆ ನೀಡುತ್ತಿದ್ದ ಬಹುಪಾಲು ಅನುದಾನಕ್ಕೆ ಬಿಜೆಪಿ ಸರ್ಕಾರ ಕತ್ತರಿ ಹಾಕಿದ್ದು, ಗ್ರಾಮಗಳ ಅಭಿವೃದ್ಧಿ ಕುಂಠಿತಗೊಳಿಸಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಬೆಮೆಲ್‌ ಕಾಂತರಾಜು ಆಕ್ರೋಶ ವ್ಯಕ್ತಪಡಿಸಿದರು.

Advertisement

ತಾಲೂಕಿನ ಬೂದಿಹಾಳ್‌ ಗ್ರಾಮದಲ್ಲಿ ಆಯೋಜಿಸಿದ್ದ ಬೂದಿಹಾಳ್‌ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಗ್ರಾಮ ಪಂಚಾಯಿತಿಗೆ ನೀಡುವ ವರ್ಗ-1 ಸೇರಿ ವಿವಿಧ ಅನುದಾನಗಳಿಗೆ ಕಡಿವಾಣ ಹಾಕಿದ್ದು, ಇದರಿಂದ ಗ್ರಾಮಗಳ ಅಭಿವೃದ್ಧಿಗೆ ಬಹಳಷ್ಟು ಪೆಟ್ಟು ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿಯಾದರೂಗ್ರಾಪಂಗೆ ಹೆಚ್ಚಿನ ಅನುದಾನವನ್ನು ನೀಡಲಿ. ಬೂದಿಹಾಳ್‌ ಗ್ರಾಪಂನ ಸದಸ್ಯರ ಒಗ್ಗಟ್ಟಿನಿಂದ ರಾಜ್ಯಕ್ಕೆಮಾದರಿ ಗ್ರಾಮಪಂಚಾಯಿತಿಯಾಗಿದ್ದು, ಮುಂದಿನದಿನಗಳಲ್ಲಿ ಗ್ರಾಮ ಪಂಚಾಯಿತಿ ಜನರಿಗೆ ಬಹಳಷ್ಟು ಅನುಕೂಲವಾಗಲಿ ಎಂದರು.

ಬೂದಿಹಾಳ್‌ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿರಾಜು ಮಾತನಾಡಿ, ಗ್ರಾಮ ಪಂಚಾಯಿತಿ ಸರ್ವ ಸದಸ್ಯರ ಒಮ್ಮತದಿಂದ ಗ್ರಾಮಗಳ ಅಭಿವೃದ್ಧಿಯನ್ನು ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತದೆ ಎಂದರು.

ಅಧಿಕಾರಿಗಳೇ ಶ್ರಮಿಸಿ: ಮುಖಂಡ ಮಂಜುನಾಥ್‌ಗೌಡ ಮಾತನಾಡಿ, ಗ್ರಾಮದಲ್ಲಿ ಮೂಲ ಸಮಸ್ಯೆಗಳು ಬಾರದಂತೆ ಶ್ರಮಿಸಲಾಗುತ್ತಿದ್ದು, ಸಣ್ಣಪುಟ್ಟ ಸಮಸ್ಯೆಗಳು ಎದುರಾದಾಗ ತಕ್ಷಣ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೆ ಶೀಘ್ರದಲ್ಲಿ ಪರಿಹಾರ ಮಾಡಲಾಗುತ್ತದೆ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪಂಚಾಯಿತಿಯ ವ್ಯಾಪ್ತಿಗೆ ನೀಡಿದರೆ ನಿರ್ವಹಣೆಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು ಎಂದರು.

ಲ್ಯಾಪ್‌ಟಾಪ್‌ ವಿತರಣೆ: ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ 6 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ ಮಾಡಲಾಗಿದ್ದು, 14ಕ್ಕೂ ಹೆಚ್ಚು ದಿವ್ಯಾಂಗರಿಗೆ 5 ಸಾವಿರ ರೂ. ಸಹಾ ಯಧನವನ್ನು ಹಾಗೂ ಶಾಲಾ ಮಕ್ಕಳಿಗೆ ಆಟದ ಸಾಮಗ್ರಿ ನೀಡಲಾಯಿತು. ಶಾಲೆಗಳ ಜಮೀನುಗಳಿಗೆ ಇ-ಖಾತೆಯನ್ನು ಮಾಡಲಾಗಿದ್ದು, ದಾಖಲಾತಿ ವರ್ಗಾಹಿಸಲಾಯಿತು.

Advertisement

ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು, ನೋಡಲ್‌ಅಧಿಕಾರಿ ಶಿವಕುಮಾರ್‌, ಪಿಡಿಒ ದಿನೇಶ್‌, ಉಪಾಧ್ಯಕ್ಷೆ ಶಾಂತಮ್ಮ, ಸದಸ್ಯ ಆನಂದ್‌ಕುಮಾರ್‌, ಶೈಲಜಾ, ಆಂಜಿನಪ್ಪ, ಚನ್ನಕೇಶವ, ಗಿರಿಜಮ್ಮ, ಎಂ. ಗೀತಾ, ಜಯರಾಮಯ್ಯ, ಕುಮಾರ್‌,ಕರಿವರದಯ್ಯ, ಮಂಜುನಾಥ್‌, ಮುನಿರತ್ನ,ನಾಗರಾಜು, ರಾಮಯ್ಯ, ರಾಮಚಂದ್ರೇಗೌಡ,ರಾಧಾ, ರತ್ನಮ್ಮ, ಸುಮಾ, ವಿಜಯಲಕ್ಷ್ಮೀ, ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮರಾಜು, ರೇಷ್ಮೆ ಇಲಾಖೆ ಶ್ರೀನಿವಾಸ್‌, ಕೃಷಿಇಲಾಖೆ ಯಲ್ಲಪ್ಪ, ಮೀನುಗಾರಿಕೆ ಇಲಾಖೆ ಅಮೃತಾ, ಹನುಮಂತಪ್ಪ ಮತ್ತಿತರರಿದ್ದರು.

ಸಮಸ್ಯೆಗಳ ಬಗ್ಗೆ ಚರ್ಚೆ :

ಗ್ರಾಪಂ ವ್ಯಾಪ್ತಿಯ ಬೂದಿಹಾಳ್‌ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ರಿಪೇರಿ ಮಾಡುವಂತೆ ಮುನಿರಾಜುಪ್ರಶ್ನೆ ಮಾಡಿದ್ದು, ಇದಕ್ಕೆ ಧ್ವನಿಯಾದ ಪಿಡಿಒ 9 ಘಟಕಗಳ ರಿಪೇರಿ ಕೆಲಸವಾಗಬೇಕಾಗಿದೆ. ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಶೀಘ್ರದಲ್ಲಿ ಬಗೆಹರಿಸುವ ಭರವಸೆ ನೀಡಿದರು. ವಿನ್‌ ಟ್ಯಾಕ್‌ ಕಂಪನಿಯಲ್ಲಿ ಕೊಳವೆಬಾವಿಗೆ ಕಲುಷಿತ ನೀರುಬಿಡುತ್ತಿದ್ದಾರೆ ಎಂಬ ದೂರು ನೀಡಿದ್ದು, ಕ್ರಮಕೈಗೊಳ್ಳವಂತೆ ಇಲಾಖೆ ಅಧಿಕಾರಿಗೆ ಒತ್ತಾಯ ಮಾಡಿದರು. ಕೆಲವು ಜಾಗಗಳಿಗೆ ಇ-ಖಾತೆ ಮಾಡುತ್ತಿಲ್ಲ ಎಂಬ ದೂರು ಸಹ ಕೇಳಿಬಂತು.

Advertisement

Udayavani is now on Telegram. Click here to join our channel and stay updated with the latest news.

Next