Advertisement
ಜಿಲ್ಲೆಯಲ್ಲಿ ಎರಡನೇ ಹಂತದ ಚುನಾವಣೆ ನಡೆಯುವ ನಾಲ್ಕು ತಾಲೂಕಿನಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, 105 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹಿರಂಗ ಪ್ರಚಾರ ಮುಕ್ತಾಯವಾಗಿದೆ. ಈಗ ಏನಿದ್ದರೂ ಮನೆಮನೆ ಭೇಟಿಗೆ ಅಷ್ಟೇ ಅವಕಾಶವಿದೆ. ಆದ್ದರಿಂದ ಅಭ್ಯರ್ಥಿಗಳು ಪ್ರತಿ ಮತದಾರರನ್ನು ತಲುಪಿ ಮನವೊಲಿಕೆ ನಾನಾ ಕಸರತ್ತಿನಲ್ಲಿ ತೊಡಗಿದ್ದಾರೆ. ಅಣ್ಣಾರ, ಅಕ್ಕಾರ, ತಾಯಂದಿರ ಇದೊಂದು ಸಲ ಅವಕಾಶ ಕೊಟ್ಟು ನೋಡಿ ಎಂದು ಹೇಳುತ್ತಿದ್ದಾರೆ.
Related Articles
Advertisement
ಇದನ್ನೂ ಓದಿ:ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ ಅಧಿಕಾರಿಗಳು: ಉಡುಪಿ ಜಿಲ್ಲಾಧಿಕಾರಿ ಗರಂ
ಮತದಾರರ ಕರೆಸಲು ಆಫರ್: ಈಗಾಗಲೇ ಮೊದಲ ಹಂತದ ಚುನಾವಣೆಯಲ್ಲಿ ಅಭ್ಯರ್ಥಿಗಳ ನಡುವೆ ಏರ್ಪಟ್ಟಿದ್ದ ತೀವ್ರ ಜಿದ್ದಾಜಿದ್ದಿಯಿಂದ ಎಚ್ಚೆತ್ತುಕೊಂಡಿರುವ ಎರಡನೇ ಹಂತದ ಅಭ್ಯರ್ಥಿಗಳು ದೂರದ ಊರುಗಳಲ್ಲಿರುವ ಮತದಾರರನ್ನು ಕರೆ ತರಲು ಮುಂದಾಗುತ್ತಿದ್ದಾರೆ. ಕೆಲಸ ಸಲುವಾಗಿ ಗ್ರಾಮಗಳನ್ನು ತೊರೆದು ಬೆಂಗಳೂರು, ಗೋವಾ, ಮಂಗಳೂರು ಸೇರಿದಂತೆ ವಿವಿಧ ನಗರದಲ್ಲಿ
ವಾಸವಾಗಿರುವ ಮತದಾರರ ಮೇಲೆ ಕಣ್ಣು ಇಟ್ಟಿರುವ ಅಭ್ಯರ್ಥಿಗಳು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಗ್ರಾಮಕ್ಕೆ ಆಗಮಿಸುವಂತೆ ಮನವಿ ಮಾಡುತ್ತಿದ್ದಾರೆ. ಅಲ್ಲದೇ, ಅವರಿಗೆ ಅಗತಗ್ಯ ಬಿದ್ದರೆ ವಾಹನ ವ್ಯವಸ್ಥೆ, ಬಸ್ ಚಾರ್ಚ್ ಹಾಗೂ ಕಾರ್ ತಗೊಂಡು ಬಂದರೆ ಪೆಟ್ರೋಲ್ ಬಿಲ್ ಕೊಡುವ ಆಫರ್ ನೀಡುತ್ತಿದ್ದಾರೆ.
ಮಾಸ್ಕ್-ಸಾಮಾಜಿಕ ಅಂತರ ಮಾಯ
ಗ್ರಾಪಂ ಚುನಾವಣೆ ಹಿನ್ನೆಲೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ತುರುಸುಗೊಂಡಿದ್ದು, ಈ ನಡುವೆ ಕೋವಿಡ್ ಎರಡನೇ ಅಲೆ ಬಗ್ಗೆ ಎಚ್ಚೆರಿಸುತ್ತಿದ್ದರೂ ಜನತೆ ಕನಿಷ್ಟ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದು ಆತಂಕ ಮೂಡಿಸುತ್ತಿದೆ. ಸದ್ಯ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕ್ಷೀಣಿಸಿದ್ದು, ನಿತ್ಯ ಒಂದಂಕ್ಕಿಯ ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ. ಈ ನಡುವೆ ಚುನಾವಣೆ ಪ್ರಚಾರದ ನೆಪದಲ್ಲಿ ಜನರು ಮಾಸ್ಕ್, ಸಾಮಾಜಿಕ ಅಂತರ ಮರೆತು ವರ್ತಿಸುತ್ತಿದ್ದು ಗ್ರಾಮೀಣ ಭಾಗದಲ್ಲಿ ಮತ್ತೆ ಕೊರೊನಾ ಎರಡನೇ ಅಲೆಯ ಆತಂಕ ಹೆಚ್ಚುವಂತೆ ಮಾಡಿದೆ. ಜಿಲ್ಲಾಡಳಿತ ಬೀದಿ ನಾಟಕ, ಕರಪತ್ರ ಹಂಚುವುದು ಸೇರಿದಂತೆ ವಿವಿಧ ಜಾಗ್ರತಿ, ಅರಿವು ಮೂಡಿಸಿದರು ಜನರು ಮಾತ್ರ ನಿರ್ಲಕ್ಷ್ಯ ತೋರುತ್ತಿರುವುದು ಕಂಡು ಬರುತ್ತಿದೆ.
ವೀರೇಶ ಮಡ್ಲೂರ