ಚಿಕ್ಕಬಳ್ಳಾಪುರ: ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಸಚಿವ ಸುಧಾಕರ್ ಬೆಂಬಲಿಗರು ಮೇಲುಗೆ„ ಸಾಧಿಸಿದ್ದಾರೆ.
ಬುಧವಾರ ನಡೆದ ಚುನಾವಣೆಯಲ್ಲಿ ಮಂಚೇನಹಳ್ಳಿ ಹೋಬಳಿ ಗೌಡಗೆರೆ, ಮಿಣಕನಗುರ್ಕಿ ಪಂಚಾಯ್ತಿ, ಮಂಡಿ ಕಲ್ ಹೋಬಳಿ ಕಮ್ಮಗುಟ್ಟಹಳ್ಳಿ ಅರೂ ರು, ನಂದಿ ಹೋಬಳಿ ನಂದಿ ಕೊಂಡೇ ನಹಳ್ಳಿ ಅಗಲಗುರ್ಕಿ, ಕಸಬಾ ಹೋಬಳಿ ಎಸ್.ಗೊಲ್ಲಹಳ್ಳಿ ಪಂಚಾಯ್ತಿ ಸೇರಿದಂತೆ ಎಲ್ಲಾ 8 ಗ್ರಾಪಂಗಳಲ್ಲಿ ಅವಿರೋಧ ಆ ಯ್ಕೆ ನಡೆದಿದೆ.
ಗೌಡಗೆರೆ ಗ್ರಾಪಂ ಅಧ್ಯಕ್ಷ ರಾಗಿ ತನು ಜಾ, ಉಪಾಧ್ಯಕ್ಷರಾಗಿ ವರು ವಣಿ ಮೂ ರ್ತಿ ಆಯ್ಕೆಯಾಗಿದ್ದಾರೆ. ಮಿಣಕನ ಗುರ್ಕಿ ಗ್ರಾಪಂ ಅಧ್ಯಕ್ಷರಾಗಿ ಪೆದ್ದರೆಡ್ಡಿ ನಾಗೇನಹಳ್ಳಿ ಕೆ.ಟಿ.ಶ್ರೀನಿವಾಸ ಮೂರ್ತಿ, ಉಪಾಧ್ಯಕ್ಷರಾಗಿ ಮಿಣಕನ ಗುರ್ಕಿ ಕಾಂತರಾಜು ಆಯ್ಕೆಯಾಗಿದ್ದಾರೆ. ಕಮ್ಮಗುಟ್ಟಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಬೊಮ್ಮಗಾನಹಳ್ಳಿ ಪೃಥ್ವಿರಾಜ್, ಉಪಾ ಧ್ಯಕ್ಷರಾಗಿ ಮಾದನಾಯಕನಹಳ್ಳಿ ರತ್ನಮ್ಮ ಆಯ್ಕೆಯಾಗಿದ್ದಾರೆ. ಅರೂರು ಗ್ರಾಪಂ ಅಧ್ಯಕ್ಷರಾಗಿ ಆದೇಗಾರಹಳ್ಳಿ ಅರುಣಮ್ಮ, ಉಪಾಧ್ಯಕ್ಷರಾಗಿ ಮುತ್ತುಕದಹಳ್ಳಿ ವೆಂಕಟಪತಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ:ಬೇವಿನಹಳ್ಳಿ ಗ್ರಾಪಂ ಬಿಜೆಪಿ ಬೆಂಬಲಿತರ ವಶ
ನಂದಿ ಗ್ರಾಪಂ ಅಧ್ಯಕ್ಷರಾಗಿ ಎನ್.ಆರ್.ಮಂಜು ನಾಥ್, ಉಪಾಧ್ಯಕ್ಷರಾಗಿ ನಿರ್ಮಲಮ್ಮ, ಕೊಂಡೇನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಪವಿತ್ರಾ, ಅಗಲಗುರ್ಕಿ ಗ್ರಾಪಂ ಅಧ್ಯಕ್ಷ ರಾಗಿ ಚೊಕ್ಕಹಳ್ಳಿ ಪಂಕಜಾ, ಉಪಾಧ್ಯಕ್ಷ ರಾಗಿ ಚಿಕ್ಕಕಾಡಿಗಾನಹಳ್ಳಿ ನಾರಾಯಣ ಮೂರ್ತಿ ಆಯ್ಕೆಯಾಗಿದ್ದಾರೆ. ಎಸ್. ಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕೆ.ಎಸ್. ಕೃಷ್ಣಾರೆಡ್ಡಿ, ಉಪಾಧ್ಯಕ್ಷರಾಗಿ ಸಾದೇನಹಳ್ಳಿ ನರಸಿಂಹಪ್ಪ ಆಯ್ಕೆಯಾಗಿದ್ದಾರೆ.