Advertisement
ತಾಲೂಕಿನ ಚಿಟ್ನೇನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಹುಮತ ವಿದ್ದರು ಜೆಡಿಎಸ್ ಪಕ್ಷ ಉಪಾಧ್ಯಕ್ಷ ಸ್ಥಾನ ಕಳೆದುಕೊಂಡ ಘಟನೆ ನಡೆದಿದ್ದು ಆಣೆ ಪ್ರಮಾಣಕ್ಕಾಗಿ ಗ್ರಾ.ಪಂ. ಸದಸ್ಯರನ್ನು ಕಪ್ಪಡಿ ಕ್ಷೇತ್ರಕ್ಕೆ ಕರೆದೊಯ್ಯಲಾಯಿತು.
Related Articles
Advertisement
ಅಧ್ಯಕ್ಷರ ಗೆಲುವು :ನಂತರ ನಡೆದ ಚುನಾವಣೆಯಲ್ಲಿ ಕುಮಾರ್ 13 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ ಇವರ ಪ್ರತಿಸ್ಪರ್ಧಿ ಕೆ.ಪಿ.ಮಹೇಶ್ 7 ಮತಪಡೆದು ಸೋಲು ಅನುಭವಿಸಿದರು. ಲಾಟರಿಯಲ್ಲಿ ಒದಗಿದ ಅದೃಷ್ಟ : ಅಧ್ಯಕ್ಷ ಸ್ಥಾನಕ್ಕೆ ಬಂದ ಮತಗಳೆ ಉಪಾಧ್ಯಕ್ಷ ಸ್ಥಾನಕ್ಕು ಬರಲಿವೆ ಎಂಬ ಜೆಡಿಎಸ್ ಲೆಕ್ಕಾಚಾರ ತಲೆಕೆಳಗಾಗಿದ್ದು ಜೆಡಿಎಸ್ ಬೆಂಬಲಿತ ಸದಸ್ಯ ಮೀನಾಕ್ಷಿ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯೆ ದೀಪಾಗೆ ತಲಾ 10 ಮತಗಳು ಚಲಾವಣೆಯಾಗಿದ್ದು ತದ ನಂತರ ಲಾಟರಿ ನಡೆಸಲಾಯಿತು. ಲಾಟರಿಯಲ್ಲಿ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಲಿತ ದೀಪಾಸ್ವಾಮಿಗೌಡಗೆ ದೊರೆಯಿತು. ಬಹುಮತ ಇಲ್ಲದ್ದಿದ್ದರು ಕಾಂಗ್ರೆಸ್‌ಗೆ ಉಪಾಧ್ಯಕ್ಷ ಸ್ಥಾನ ದೊರೆತ ಕಾರಣ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಪಟ್ಟರು. ಆಣೆ ಪ್ರಮಾಣ: ಗೆಲುವಿನ ಸಂಭ್ರಮ ಆಚರಿಸಲು ಮುಂದಾಗಿದ್ದ ಜೆಡಿಎಸ್‌ಗೆ ತೀವ್ರ ಮುಖಭಂಗವಾಗಿದ್ದು 3 ಮತಗಳು ಅಡ್ಡಮತದಾನಗಳಾಗಿದ್ದವು ಗುಪ್ತ ಮತದಾನವಾಗಿದ್ದರಿಂದ ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂಬುದು ತಿಳಿಯದಾಗಿತ್ತು. ಅಲ್ಲದೆ ಜೆಡಿಎಸ್‌ನ 13 ಮಂದಿಯೂ ಒಟ್ಟಾಗಿಯೆ ಇದ್ದರೂ. ಇದರಿಂದ ಗೊಂದಲಕ್ಕೆ ಒಳಗಾಗ ಮುಖಂಡರು ಎಲ್ಲರನ್ನು ಕಪ್ಪಡಿ ಕ್ಷೇತ್ರದಲ್ಲಿ ಆಣೆ ಪ್ರಮಾಣಮಾಡಿಸಲು ವ್ಯಾನ್‌ನಲ್ಲಿ ಕರೆದೊಯ್ಯದರು. ಚುನಾವಣಾಧಿಕಾರಿಯಾಗಿ ಪ್ರಸಾದ್ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಎಂಡಿಸಿಸಿ ಬ್ಯಾಂಕ್ ನಿರ್ದೇಶಕರ ರವಿ, ಹೆಮ್ಮಿಗೆ ಮಹೇಶ್, ಸ್ವಾಮಿಗೌಡ, ಜಗದೀಶ್, ಚಂದ್ರಶೇಖರ್, ರವಿ, ಮಹೇಂದ್ರ ಕುಮಾರ್, ಮಾಗಳಿ ಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.