Advertisement
ನಗರದ ಟೌನ್‌ಹಾಲ್ ವೃತ್ತದಲ್ಲಿ ಸಮಾವೇಶ ಗೊಂಡ ಪ್ರತಿಭಟನಾಕಾರರು ಗ್ರಾಮಪಂಚಾಯಿತಿ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಘೋಷಣೆ ಕೂಗುತ್ತಾ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ ನಂತರ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಿದರು.
Related Articles
Advertisement
ಅನುಮೋದನೆ ನೀಡಿ: ಸಂಘದ ಜಿಲ್ಲಾಧ್ಯಕ್ಷ ಎನ್.ಕೆ. ಸುಬ್ರಮಣ್ಯ ಮಾತನಾಡಿ, ನೌಕರರ ಅನುಮೋದನೆಗೆ ಸಂಬಂಧಿಸಿದಂತೆ ಸಂಘವು ನಿರಂತರವಾದ ಹೋರಾಟವನ್ನು ನಡೆಸಿಕೊಂಡು ಬರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಕಡತಗಳು ತಾಲೂಕು ಮತ್ತು ಜಿಲ್ಲಾಪಂಚಾಯ್ತಿಗಳಲ್ಲಿ ಬಾಕಿ ಇದ್ದು ನೌಕರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಪಂಚಾಯತ್ ಅನುಮೋದನೆ ನೀಡಲು ಮುಂದಾಗಬೇಕು ಎಂದು ಹೇಳಿದರು.
ಮನವಿ ಸ್ವೀಕರಿಸಿದ ಜಿಲ್ಲಾಪಂಚಾಯ್ತಿಯ ಅಭಿವೃದ್ಧಿ ಉಪಕಾರ್ಯದರ್ಶಿ ಕೃಷ್ಣಪ್ಪ ಮಾತನಾಡಿ, ನೌಕರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯ್ತಿ ಹಂತದಲ್ಲಿ ಇತ್ಯರ್ಥಪಡಿಸಬಹುದಾದ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದರು ಇದಕ್ಕೆ ಸಂಬಂಧಿಸಿದಂತೆ ಒಂದುವಾರದಲ್ಲಿ ಎಲ್ಲಾ ಅಧಿಕಾರಿಗಳ ಸಭೆಯನ್ನು ಕರೆದು ಸಮಸ್ಯೆಗಳ ಇತ್ಯಾರ್ಥಕ್ಕೆ ಕ್ರಮವವಹಿಸುವಂತೆ ತಿಳಿಸುವುದಾಗಿ ತಿಳಿಸಿದರು. ಈ ವೇಳೆ ತುಮಕೂರು ತಾಲೂಕು ಅಧ್ಯಕ್ಷ ಪಂಚಾಕ್ಷರಿ ಮಾತನಾಡಿದರು.
ಜಿಲ್ಲಾಪಂಚಾಯ್ತಿ ಉಪಕಾರ್ಯದರ್ಶಿ ಎನ್.ಡಿ. ಪ್ರಕಾಶ್, ಯೋಜಾನಾದಿಕಾರಿ ಬಾಲ್‌ರಾಜ್, ತಿಪಟೂರು ರಾಜು, ಚಿಕ್ಕನಾಯಕನಹಳ್ಳಿ ಲೋಕೇಶ್, ಪಾವಗಡ ಸುಬ್ಬರಾಯಪ್ಪ, ಕುಣಿಗಲ್ ಶ್ರೀನಿವಾಸ್, ಗುಬ್ಬಿಯ ಬಷೀರ್‌ಅಹಮದ್, ತುರುವೇಕೆರೆ ನಟರಾಜು, ರಮೇಶ್, ಶಿರಾ ರಾಮಲಿಂಗಪ್ಪ, ಬಸವರಾಜು, ದಯಾನಂದ್, ರೇಖಾ, ಸೇರಿದಂತೆ ಮುಂತಾವರು ಭಾಗವಹಿಸಿದ್ದರು.