Advertisement

Kasaragodu: ಗ್ರಾಮಲೋಕ ಕೊಂಕಣಿ ಸಾಹಿತ್ಯ ಕಾರ್ಯಕ್ರಮ

03:44 PM Jul 22, 2023 | Team Udayavani |

ಕಾಸರಗೋಡು: ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಗ್ರಾಮಲೋಕ ಎಂಬ ಕೊಂಕಣಿ ಸಾಹಿತ್ಯ ಕಾರ್ಯಕ್ರಮ ನಡೆಯಿತು.

Advertisement

ಕೊಂಕಣಿ ಸಾಹಿತಿ, ಭಾಷಾತಜ್ಞ ಡಾ. ಕಸ್ತೂರಿ ಮೋಹನ್ ಪೈ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ವಿಭಾಗದ ಸಂಯೋಜಕ ಮೆಲ್ವಿನ್ ರೊಡ್ರಿಗಸ್ ಗ್ರಾಮಲೋಕ ಕಾರ್ಯಕ್ರಮದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಡಿ. ಶಂಕರ ಗ್ರಾಮಲೋಕ ಕಾರ್ಯಕ್ರಮಕ್ಕಾಗಿ ಬದಿಯಡ್ಕ ಎಂಬ ಸಣ್ಣ ಗ್ರಾಮವನ್ನು ಆಯ್ಕೆ ಮಾಡಿದಕ್ಕಾಗಿ  ಅಕಾಡೆಮಿ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಯುವಸಾಹಿತಿಗಳಾದ ವೆಂಕಟೇಶ್ ನಾಯಕ್, ಶ್ವೇತಾ ಪೈ ಮಂಜೇಶ್ವರ, ರೋಶನ್ ಪೆರಿಯಡ್ಕ ಕವಿತೆಗಳನ್ನು ಓದಿದರು ಹಾಗೂ ಸ್ಟ್ಯಾನಿ ಬೇಳ ಸಣ್ಣ ಕಥೆ ಪ್ರಸ್ತುತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next