Advertisement

ಇಂದು ಗ್ರಾ.ಪಂ. ಉಪಚುನಾವಣೆ: ಉಜಿರೆ – 2, ಕೊಯ್ಯೂರು -1 ಸ್ಥಾನ

09:20 PM May 28, 2019 | Team Udayavani |

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾ.ಪಂ.ನ 2 ಸ್ಥಾನಗಳು ಹಾಗೂ ಕೊಯ್ಯೂರು ಗ್ರಾ.ಪಂ.ನ 1 ಸ್ಥಾನಕ್ಕೆ ಮೇ 29ರಂದು ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ.

Advertisement

ಅಧಿಕಾರಿಗಳ ನಿಯೋಜನೆ
ಪ್ರಥಮ ಮತಗಟ್ಟೆ ಅಧಿಕಾರಿ, ದ್ವಿತೀಯ ಮತಗಟ್ಟೆ ಅಧಿಕಾರಿಗಳಿಂದ ಮಸ್ಟರಿಂಗ್‌ ಕಾರ್ಯ ಮಂಗಳವಾರ ನಡೆಯಿತು. ಮೂರು ಮತಗಟ್ಟೆ ಕೇಂದ್ರಕ್ಕೆ 4 ಸಿಬಂದಿ ಹಾಗೂ 1 ಡಿ ಗ್ರೂಪ್‌ ಸಹಿತ ಒಟ್ಟು 5 ಜನ ಸಿಬಂದಿ ನಿಯೋಜಿಸಲಾಗಿದೆ. ಮೂರು ವಾರ್ಡ್‌ಗಳಿಗೆ 15 ಜನ
ಅಧಿಕಾರಿಗಳನ್ನು ನಿಯೋಜನೆಗೊಳಿಸಲಾಗಿದೆ.

ಪೊಲೀಸ್‌ ನಿಯೋಜನೆ
ಈಗಾಗಲೇ ಗ್ರಾ.ಪಂ. ವ್ಯಾಪ್ತಿಗೆ ನೀತಿ ಸಂಹಿತೆ ಘೋಷಿಸಿದ್ದು, ಶಾಂತಿಯುತ ಮತದಾನಕ್ಕೆ ಪೊಲೀಸ್‌ ಭದ್ರತೆ ಒದಗಿಸ ಲಾಗಿದೆ. ಉಜಿರೆಯ 2 ವಾರ್ಡ್‌ಗಳಿಗೆ 3 ಜನ, ಕೊಯ್ಯೂರು ವಾರ್ಡ್‌ಗೆ ಒಬ್ಬರನ್ನು ನಿಯೋಜಿಸಲಾಗಿದೆ. ಮೇ 31ರಂದು ನಗರ ಪಂ.ನಲ್ಲಿ ಮತ ಎಣಿಕೆ ಪ್ರಕ್ರಿಯೆ ಜರಗಲಿದ್ದು, ರಾತ್ರಿ ವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ.

ಉಜಿರೆ ಕ್ಷೇತ್ರ
ವಾರ್ಡ್‌ ನಂ. 11ರಲ್ಲಿ ಒಟ್ಟು ಮತದಾರರು 783. ಪುರುಷರು 385, ಮಹಿಳೆಯರು 398. ಎಸ್‌.ಡಿ.ಎಂ. ಅನುದಾನಿತ ಹಿ.ಪ್ರಾ. ಶಾಲೆ ಉಜಿರೆಯಲ್ಲಿ ಮತದಾನ ನಡೆಯಲಿದೆ.
ವಾರ್ಡ್‌ ನಂ. 4ರಲ್ಲಿ ಒಟ್ಟು ಮತದಾರರು 1,069. ಪುರುಷರು 524, ಮಹಿಳೆಯರು 545. ಎಸ್‌.ಡಿ.ಎಂ. ಡಿಎಡ್‌ ಕಾಲೇಜು ಉಜಿರೆಯಲ್ಲಿ ಮತದಾನ ನಡೆಯಲಿದೆ.

ಕೊಯ್ಯೂರು
ವಾರ್ಡ್‌-2ರಲ್ಲಿ ಒಟ್ಟು ಮತದಾರರು 938. ಪುರುಷರು 469, ಮಹಿಳೆಯರು 469. ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಕೊಯ್ಯೂರು ದೇವಸ್ಥಾನ ಇಲ್ಲಿ ಮತದಾನ ನಡೆಯಲಿದೆ.

Advertisement

ಎಡ ಕೈ ಉಂಗುರ ಬೆರಳಿಗೆ ಶಾಯಿ
ಬ್ಯಾಲೆಟ್‌ ಪೇಪರ್‌ ಮೂಲಕ ಮತದಾನ ನಡೆಯಲಿದ್ದು, ಎಡ ಕೈ ಉಂಗುರ ಬೆರಳಿಗೆ ಶಾಯಿ ಹಾಕಲಾಗುತ್ತದೆ. ಈ ಕುರಿತು ಪಿಆರ್‌ಒ ಮತ್ತು ಎಪಿಆರ್‌ಒಗಳಿಗೆ ಮತದಾನದ ವೇಳೆ ಮತದಾರರ ಗುರುತಿನ ಚೀಟಿ ಪರಿಶೀಲನೆ, ಮತದಾನದ ಅಂಕಿ ಅಂಶದ ಪರಿಶೀಲನೆ ಬಗ್ಗೆ ಸೋಮವಾರ ಹಾಗೂ ಮಂಗಳವಾರ ಚುನಾವಣಾಧಿಕಾರಿ ಸುಭಾಶ್‌ ಜಾಧವ್‌ ಅವರು ಸಭೆ ನಡೆಸಿ ಮಾಹಿತಿ ನೀಡಿದ್ದಾರೆ.

ಕಣದಲ್ಲಿರುವವರು
ಕೊಯ್ಯೂರು ವಾರ್ಡ್‌ -2ರಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದ್ದು, ಬಾಬು ಹೇಮಲ್ಕೆ ಹಾಗೂ ಕೊರಗಪ್ಪ ಕಣದಲ್ಲಿದ್ದಾರೆ. ಉಜಿರೆ ವಾರ್ಡ್‌ ನಂ. 4ರಲ್ಲಿ ಸುಮಂಗಲಾ ಹಾಗೂ ಹೇಮಾವತಿ, ವಾಡ್‌ ನಂ. 11ರಲ್ಲಿ ಜಿನ್ನಪ್ಪ ನಾಯ್ಕ ಹಾಗೂ ಸತೀಶ್‌ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

 ಸಿದ್ಧತೆ ಪೂರ್ಣ
ಶಾಂತಿಯುತ ಮತದಾನಕ್ಕೆ ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ. 15 ಮಂದಿ ಮತಗಟ್ಟೆ ಅಧಿಕಾರಿಗಳು ಹಾಗೂ 4 ಮಂದಿ ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿದೆ. ಮತದಾರರ ಸಹಕಾರದಿಂದ ಮತದಾನ ಮತ್ತಷ್ಟು ಅರ್ಥಪೂರ್ಣವಾಗಿ ನಡೆಯಲಿದೆ.
 - ಸುಭಾಶ್‌ ಜಾಧವ್‌, ಚುನಾವಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next