Advertisement

ಖಾಲಿ ಸ್ಥಾನಕ್ಕೆ ಮತ ಚಲಾಯಿಸಿದರೆ ಅಸಿಂಧು

07:45 PM Dec 23, 2020 | Suhan S |

ಚಳ್ಳಕೆರೆ: ತಾಲೂಕಿನ ಬುಡ್ನಹಟ್ಟಿ ಗ್ರಾಮ ಪಂಚಾಯತ್‌ ವ್ಯಾಪ್ತಿಯವೀರದಿಮ್ಮನಹಳ್ಳಿ ಗ್ರಾಮದಲ್ಲಿ ಒಟ್ಟುನಾಲ್ಕು ಸ್ಥಾನಗಳಿಗೆ ಚುನಾವಣೆನಡೆಯಬೇಕಿದೆ. ಈ ಪೈಕಿ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದ್ದು, ಡಿ. 27 ರಂದು ಮತ ಚಲಾವಣೆ ಮಾಡುವ ಮತದಾರರು ಕೇವಲ ಮೂವರಿಗೆ ಮಾತ್ರ ಮತ ಚಲಾಯಿಸಬೇಕು. ನಾಲ್ವರಿಗೆ ಮತ ಚಲಾಯಿಸಿದರೆ ತಿರಸ್ಕರಿಸಲಾಗುತ್ತದೆ ಎಂದು ತಹಶೀಲ್ದಾರ್‌ ಎಂ. ಬಸವರಾಜ ಹೇಳಿದರು.

Advertisement

ಮಂಗಳವಾರ ಮತಗಟ್ಟೆ ಕೇಂದ್ರದಲ್ಲಿ ಮತದಾರರಿಗಾಗಿಆಯೋಜಿಸಿದ್ದ ಜಾಗೃತಿಕಾರ್ಯಕ್ರಮದಲ್ಲಿ ಅವರುಮಾತನಾಡಿದರು. ಚುನಾವಣಾನಿಯಮಗಳ ಪ್ರಕಾರನಾಮಪತ್ರ ಸಲ್ಲಿಸದೇ ಇದ್ದಸ್ಥಾನಕ್ಕೆ ಮತ ಚಲಾಯಿಸಿದರೆ ಅದನ್ನು ತಿರಸ್ಕರಿಸಲಾಗುತ್ತದೆ.ಮತದಾರರಿಗೆ ಮಾಹಿತಿ ಇಲ್ಲದೆ ಇದ್ದರೆ ಲೋಪವಾಗುವುದು ಸಹಜ. ವೀರದಿಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆಯುವಮತದಾನದಲ್ಲಿ ಪಾಲ್ಗೊಳ್ಳುವಎಲ್ಲಾ ಮತದಾರರು ಕೇವಲಮೂರು ಸ್ಥಾನಗಳಿಗೆ ಮಾತ್ರ ಮತ ಚಲಾಯಿಸಬೇಕು ಎಂದರು.

ಚುನಾವಣಾ ತರಬೇತುದಾರ, ಪ್ರಾಧ್ಯಾಪಕ ಶಿವಪ್ರಸಾದ್‌ ಮಾತನಾಡಿ, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಮತದಾನ ಮಾಡುವ ವಿಧಾನದ ಬಗ್ಗೆತಿಳಿದುಕೊಳ್ಳುವ ಅವಶ್ಯಕತೆಇದೆ. ಹಾಗಾಗಿ ಮತದಾನದಿಂದ ವಿಮುಖವಾಗಬಾರದು ಎಂದರು.ಸೆಕ್ಟರಲ್‌ ಅಧಿಕಾರಿ ಕುಸುಮಾ ಹಾಗೂ ಚುನಾವಣಾಧಿಕಾರಿ ಜೆ.ಎನ್‌. ಧನಂಜಯ ಮಾತನಾಡಿ, ವೀರದಿಮ್ಮನಹಳ್ಳಿ ಗ್ರಾಮಕ್ಕೆ ಒಟ್ಟು ನಾಲ್ಕು ಸ್ಥಾನಗಳು ಮೀಸಲಿವೆ. ಆ ಪೈಕಿ ಸಾಮಾನ್ಯ, ಸಾಮಾನ್ಯ ಮಹಿಳೆ, ಅನುಸೂಚಿತ ಜಾತಿ ಮಹಿಳೆ,ಅನುಸೂಚಿತ ಜಾತಿಗೆ ಮೀಸಲಾತಿಇದೆ. ಸಾಮಾನ್ಯ ಮಹಿಳೆ ಸ್ಥಾನಕ್ಕೆಯಾರೂ ನಾಮಪತ್ರ ಸಲ್ಲಿಸದ ಕಾರಣ ಖಾಲಿ ಉಳಿದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next