Advertisement
ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯಡಿ ಸ್ಪರ್ಧಿಸಬಹುದಾದ ಅರ್ಹತೆಗಳ ಬಗ್ಗೆ ಮೂಡಿರುವ ಗೊಂದಲದ ಬಗ್ಗೆ ರಾಜ್ಯ ಚುನಾವಣ ಆಯೋಗ ಸುತ್ತೋಲೆ ಹೊರಡಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ.
Related Articles
Advertisement
ಉದಾಹರಣೆಗೆ “ಎ’ ಎನ್ನುವ ಗ್ರಾ.ಪಂ.ನಲ್ಲಿ ಎಸ್.ಟಿ. ಅಥವಾ ಹಿಂದುಳಿದ ವರ್ಗ “ಬಿ’ ಕೆಟಗರಿಗೆ ಸೇರಿದ ಅಭ್ಯರ್ಥಿ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆದ್ದಿದ್ದರೆ, “ಎ’ ಗ್ರಾ.ಪಂ.ನಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಹಾಗೂ ಉಪಾಧ್ಯಕ್ಷತೆಗೆ ಎಸ್.ಟಿ. ಎಂದು ನಿಗದಿಯಾಗಿದ್ದರೆ ಆಗ ಈ ಸ್ಥಾನಕ್ಕೆ ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದಿರುವ ಹಿಂದುಳಿದ ವರ್ಗ ಎ ಞಹಾಗೂ ಎಸ್‌ಟಿ ಅಭ್ಯರ್ಥಿಯು ಸ್ಪರ್ಧಿಸಲು ಅರ್ಹತೆ ಹೊಂದಿರುತ್ತಾರೆ ಎಂದು ಆಯೋಗ ತಿಳಿಸಿದೆ.
ಹಾಗಾಗಿ ಅಧ್ಯಕ್ಷ-ಉಪಾಧ್ಯಕ್ಷತೆಗೆ ವಾರ್ಡ್‌ವಾರು ಮೀಸಲಾತಿ ಅನ್ವಯ ಆಗುವುದಿಲ್ಲ. ಬದಲಿಗೆ ಗೆದ್ದ ಅಭ್ಯರ್ಥಿಗಳು ಯಾವ ವರ್ಗಕ್ಕೆ ಸೇರಿದ್ದಾರೆ ಅನ್ನುವುದು ಮುಖ್ಯವಾಗುತ್ತದೆ. ಈ ಹಿಂದಿನ ಅವಧಿಯಲ್ಲಿ ಇದೇ ನಿಯಮ ಜಾರಿಯಲ್ಲಿ ಇತ್ತು.
ನಿಯಮ ಹೀಗಿದೆ
*ಗ್ರಾ.ಪಂ. ಅಧ್ಯಕ್ಷ ಅಥವಾ ಉಪಾಧ್ಯಕ್ಷ ಹುದ್ದೆಯನ್ನು ನಿರ್ಧರಿಸುವಾಗ ಆಯಾಯ ವರ್ಗಕ್ಕೆ ಮೀಸಲಿಟ್ಟ ಸ್ಥಾನಗಳಿಗೆ ಚುನಾಯಿತರಾದ ಸದಸ್ಯರ ಸಂಖ್ಯೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದು.
*ಮೀಸಲು ಇಲ್ಲದೆ ಸಾಮಾನ್ಯ ಸ್ಥಾನ ನಿಗದಿಯಾಗಿದ್ದರೆ ಗ್ರಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಮೀಸಲು ಸ್ಥಾನದಿಂದ ಗೆದ್ದು ಬಂದ ಸದಸ್ಯನು ಕೂಡ ಸ್ಪರ್ಧಿಸಲು ಅರ್ಹನಾಗಿರುತ್ತಾನೆ.
*ಮೀಸಲಾತಿ ವರ್ಗಕ್ಕೆ ಸೇರಿದ ಯಾವುದೇ ಸದಸ್ಯನು ಮೀಸಲಿಡದ (ಸಾಮಾನ್ಯ)
ಸ್ಥಾನದಿಂದ ಚುನಾಯಿತನಾಗಿದ್ದಲ್ಲಿ ಅಂತಹ ಸದಸ್ಯನು ಆತನ ವರ್ಗಕ್ಕೆ ಮೀಸಲಿಟ್ಟ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹನಾಗಿರುತ್ತಾನೆ.
*ನ್ಯಾಯಾಲಯ ಅಥವಾ ತಡೆಯಾಜ್ಞೆ ಯಿಂದಾಗಿ ಯಾವುದೇ ಗ್ರಾ.ಪಂ.ಗೆ ಚುನಾವಣೆ ನಡೆಯದಿದ್ದಲ್ಲಿ ಅಂತಹ ಗ್ರಾ.ಪಂ. ಸದಸ್ಯ ಸಂಖ್ಯೆಯನ್ನು ಅನುಸರಿಸಿ ಅಧ್ಯಕ್ಷ ಅಥವಾ ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಿಡತಕ್ಕದ್ದು.
*ಯಾವುದೇ ಗ್ರಾ.ಪಂ. ಅಧ್ಯಕ್ಷ ಅಥವಾ ಉಪಾಧ್ಯಕ್ಷರ ಸ್ಥಾನವು ಸಾಮಾನ್ಯ ಮಹಿಳೆ ಗಾಗಿ ಮೀಸಲಿಟ್ಟಲ್ಲಿ ಅಂತಹ ಸ್ಥಾನಕ್ಕೆ ಯಾವುದೇ ಮಹಿಳಾ ಸದಸ್ಯೆಯು ಚುನಾಯಿತಳಾಗಲು ಅರ್ಹಳಾಗಿರುತ್ತಾಳೆ.
*ಮೀಸಲಿಟ್ಟ ಸ್ಥಾನದಿಂದ ಆಯ್ಕೆಯಾದ ಮಹಿಳೆಯು ಆಯಾಯ ವರ್ಗಕ್ಕೆ ಮೀಸಲಿಟ್ಟ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ (ಮಹಿಳೆಗಾಗಿ ಮೀಸಲಿಟ್ಟಲಿದ್ದರೂ) ಚುನಾಯಿತರಾಗಲು ಅರ್ಹರಾಗಿತ್ತಾರೆ.
*ಮೀಸಲಿಟ್ಟ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆ ಪಂಚಾಯತ್‌ನಲ್ಲಿ ಅದೇ ವರ್ಗಕ್ಕೆ ಸೇರಿದ ಯಾವುದೇ ಸದಸ್ಯನು ಚುನಾಯಿತನಾಗಿಲ್ಲದಿದ್ದರೆ ಅಥವಾ ಆ ವರ್ಗಕ್ಕೆ ಸೇರಿದ ಸದಸ್ಯ ಚುನಾಯಿತನಾಗಿದ್ದು ಅಧ್ಯಕ್ಷ ಅಥವಾ ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸದೇ ಹೋದಲ್ಲಿ ಈ ವಿಚಾರವನ್ನು ಸರಕಾರದ ಗಮನಕ್ಕೆ ತರಬೇಕು.