Advertisement
ಜಿಲ್ಲೆಯಲ್ಲಿ ಮೂರು ಪಕ್ಷಗಳು ಗ್ರಾಪಂ ಗದ್ದುಗೆ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.ಚುನಾವಣೆ ಆಯೋಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷಸ್ಥಾನಗಳಿಗೆ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ(ಅ), ಹಿಂದುಳಿದ ವರ್ಗ(ಬಿ) ಹಾಗೂಸಾಮಾನ್ಯ ವರ್ಗಗಳಿಗೆ ಹಂಚಿಕೆ ಮಾಡಿದೆ.
Related Articles
Advertisement
ಈಗಾಗಲೇ ಜಿಲ್ಲೆಯ 7 ತಾಲೂಕುಗಳಹಾಲಿ ಹಾಗೂ ಮಾಜಿ ಶಾಸಕರುತಮ್ಮ ಪಕ್ಷಗಳ ಬೆಂಬಲಿತಸದಸ್ಯರು ಹೆಚ್ಚು ಗೆಲುವು ಸಾಧಿಸಿದ್ದು, ಹೆಚ್ಚುಗ್ರಾಪಂಗಳ ಅಧಿಕಾರ ಹಿಡಿಯಲಿದ್ದೇವೆ ಎಂದು ಪೈಪೋಟಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಸದಸ್ಯರ ಸೆಳೆಯಲು ಕಮಲ ಕಸರತ್ತು: ಕೆ.ಆರ್ .ಪೇಟೆ ತಾಲೂಕಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವಕೆ.ಸಿ.ನಾರಾಯಣಗೌಡರಿಗೆ ಪ್ರತಿಷ್ಠೆಯಾಗಿದ್ದು, ಅತಿಹೆಚ್ಚು ಗ್ರಾಮ ಪಂಚಾಯಿತಿಗಳನ್ನು ತಮ್ಮ ಬೆಂಬಲಿತಸದಸ್ಯರ ಮೂಲಕ ಅಧಿಕಾರ ಹಿಡಿಯುವುದು ಅನಿವಾರ್ಯವಾಗಿದೆ. ಆ ನಿಟ್ಟಿನಲ್ಲಿ ಸದಸ್ಯರಸೆಳೆಯುವ ಕಸರತ್ತು ಜೋರಾಗಿದೆ. ಈಗಾಗಲೇ ಹಲವು ಸದಸ್ಯರು ಬೆಂಬಲ ಸೂಚಿಸಿದ್ದಾರೆನ್ನಲಾಗಿದೆ. ಅದರಂತೆಮದ್ದೂರಿನಲ್ಲೂ ಕೆಲವು ಗ್ರಾಮಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದರಿಂದ ಸದಸ್ಯರ ಆಪರೇಷನ್‌ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಾಗಮಂಗಲ, ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಬಲ ಸಾಧಿಸಿದ್ದು,ಆಡಳಿತ ಮಂಡಳಿ ರಚನೆಗೆ ಕಸರತ್ತು ನಡೆಸಿವೆ. ಇನ್ನುಳಿದಂತೆ ಪಾಂಡವಪುರದಲ್ಲಿ ಜೆಡಿಎಸ್ ಹಾಗೂ ಮಳವಳ್ಳಿಯಲ್ಲಿ ಕಾಂಗ್ರೆಸ್ ಮುನ್ನಡೆ ಸಾ ಸಿದ್ದು, ಗದ್ದುಗೆ ಹಿಡಿಯುವ ನಿರೀಕ್ಷೆಯಲ್ಲಿವೆ.
ಮಹಿಳೆಯರಿಗೆ ಸೀಮಿತ : ಜಿಲ್ಲೆಯ 7 ತಾಲೂಕುಗಳ 230 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಲ್ಲಿ ಅರ್ಧದಷ್ಟು ಮಹಿಳೆಯರಿಗೆಮೀಸಲಿಡಲಾಗಿದೆ. ಅದರಲ್ಲಿ ಈ ಹಿಂದೆಮಹಿಳೆಯರಿಗೆ ಮೀಸಲಾಗಿದ್ದರೆ, ಅಂಥ ಗ್ರಾಮಪಂಚಾಯಿತಿಗಳನ್ನು ಗುರುತಿಸಿ ಆದ್ಯತೆ ಮೇರೆಗೆ ಮೀಸಲಾತಿ ಅನುಗುಣವಾಗಿ ಆಯ್ಕೆ ಮಾಡಬೇಕುಎಂದು ಸೂಚಿಸಿದೆ. ಈ ಬಾರಿಗೆ ಐದು ವರ್ಷಗಳಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಅವಧಿಯನ್ನ ಮೊಟಕುಗೊಳಿಸಿ, ಮೊದಲ ಅವಧಿ 30 ತಿಂಗಳಿಗೆ ಸೀಮಿತಗೊಳಿಸಲಾಗಿದೆ. ಜಿಲ್ಲೆಯಲ್ಲಿಯೂ ಅತಿಹೆಚ್ಚುಮಹಿಳಾ ಸದಸ್ಯರು ಆಯ್ಕೆಯಾಗಿದ್ದಾರೆ. ಈಹಿನ್ನೆಲೆಯಲ್ಲಿ ಮೂರು ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಕಸರಸ್ತು ಆರಂಭಿಸಿವೆ.
ಜಿಲ್ಲಾಧಿಕಾರಿಯತ್ತ ಪಕ್ಷಗಳ ಚಿತ್ತ : ಚುನಾವಣೆ ಆಯೋಗದಂತೆಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ಜಿಲ್ಲಾ ಚುನಾವಣಾ ಧಿಕಾರಿಯಾಗಿರುವ ಜಿಲ್ಲಾಧಿಕಾರಿಗೆ ನೀಡಿರುವುದರಿಂದ ರಾಜಕೀಯ ಪಕ್ಷಗಳ ನಾಯಕರು,ಮುಖಂಡರು ಜಿಲ್ಲಾಧಿಕಾರಿ ನಿಗದಿಪಡಿಸುವ ಮೀಸಲಾತಿಯತ್ತಚಿತ್ತ ಹರಿಸಿದ್ದಾರೆ. ಚುನಾವಣೆಆಯೋಗದಂತೆ ಮೀಸಲಾತಿನಡೆಯಬೇಕು ಎಂಬ ನಿಟ್ಟಿನಲ್ಲಿ ನಿಗಾವಹಿಸುತ್ತಿದ್ದಾರೆ.
–ಎಚ್.ಶಿವರಾಜು