Advertisement

ಗ್ರಾಪಂ ಜನಪ್ರತಿನಿಧಿಗಳಿಂದ ಬೆಂಗಳೂರು ಚಲೋ

02:53 PM Dec 12, 2022 | Team Udayavani |

ದೇವನಹಳ್ಳಿ: ಅಧಿಕಾರ ವಿಕೇಂದ್ರೀಕರಣ ಕಾಯ್ದೆ ಯನ್ನು ಸರಿಯಾಗಿ ಅನುಷ್ಠಾನ ತಂದು ಅವರವರ ಜವಾಬ್ದಾರಿಯನ್ನು ಸರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕೆಂಬುದು ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟುಕೊಂಡು ಡಿ.12ರ ಸೋಮವಾರ ಕರ್ನಾಟಕ ರಾಜ್ಯ ಗ್ರಾಪಂ ಮಹಾ ಒಕ್ಕೂಟದಿಂದ ಬೆಂಗಳೂರು ಚಲೋ ಹಮ್ಮಿಕೊಂಡಿದೆ ಎಂದು ಆವತಿ ಗ್ರಾಪಂ ಅಧ್ಯಕ್ಷ ಎ.ಎಸ್‌. ಮಂಜುನಾಥ್‌ ತಿಳಿಸಿದರು.

Advertisement

ತಾಲೂಕಿನ ಆವತಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರ ವಿಕೇಂದ್ರೀಕರಣ ನೀತಿಯ ಅನ್ವಯ ಸ್ಥಾಪಿಸಲಾಗಿದ್ದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ವ್ಯವಸ್ಥೆಯ ಮೂಲ ಆಶಯಕ್ಕೆ ಧಕ್ಕೆಯಾಗುವಂತೆ ತಿದ್ದುಪಡಿಗೆ ಹೊರಟಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜ್ಯದ ಎಲ್ಲ ಪಂಚಾಯಿತಿ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಡಿ.12ರಂದು ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದೇವೆ. ಸ್ಥಳೀಯ ಸರ್ಕಾರ ಸರ್ಕಾರ ರಚನೆ ಮಾಡಿ, ಚುನಾಯಿತ ಪ್ರತಿನಿಧಿಗಳ ಅಧಿಕಾರ ಮೊಟಕುಗೊಳ್ಳಿಸಿತ್ತಿರುವ ವಿರುದ್ಧ ಸಂಘಟಿತ ಹೋರಾಟ ಇದಾಗಿದೆ ಎಂದರು.

ಗೌರವಧನ ನೀಡಬೇಕು: ಗ್ರಾಪಂಗಳು ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿ ಸುವಂತಾಗ ಬೇಕು. ಗ್ರಾಮಸ್ವರಾಜ್ಯ ಗಾಂಧೀಜಿ ಕನಸಾಗಿತ್ತು. ಗ್ರಾಪಂ ಸ್ವಯಂ ಆಡಳಿತಾತ್ಮಕ ಮೂಲಕ ಅಭಿವೃದ್ಧಿ ಹೊಂದಲು ಸರ್ಕಾರ ಹೆಚ್ಚು ಒತ್ತು ನೀಡಬೇಕು. ಕೇಂದ್ರ ಗಳಿಂದ ಸಾರ್ವಜನಿಕ ಸೇವೆ ಒದಗಿಸಲು ಸರ್ಕಾರ ಹೆಚ್ಚಿನ ಮಹತ್ವ ನೀಡಬೇಕು. ಕೇರಳ ಮಾದರಿ ಯಲ್ಲಿ ರಾಜ್ಯ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಗೌರವಧನ ನೀಡಬೇಕು ಎಂದು ಒತ್ತಾಯಿಸಿದರು.

ಸಂವಿಧಾನ ಬಾಹಿರ ಪ್ರಕ್ರಿಯೆ: ಜನಪ್ರತಿನಿಧಿಗಳ ಕೆಲ ಅಧಿಕಾರವನ್ನು ಅಧಿಕಾರಿಗಳಿಗೆ ಹಸ್ತಾಂತರ ಮಾಡುವ ಪ್ರಸ್ತಾವನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಇದೊಂದು ಸಂವಿಧಾನ ಬಾಹಿರ ಪ್ರಕ್ರಿಯೆಯಾಗಿರುತ್ತದೆ. ಜನಪ್ರತಿನಿಧಿಗಳಿಂದ ಆಗುವ ಕೆಲಸಕ್ಕೆ ಅಧಿಕಾರಿಗಳ ಹಿಂಬಾಲು ಬೀಳುವುದು ಸರ್ವಾಧಿಕಾರಿ ಆಡಳಿತದ ಲಕ್ಷಣವಾಗಿದೆ. ಭಾರತ ಪ್ರಜಾಪ್ರಭುತ್ವ ದೇಶ ಎಂಬುದನ್ನು ಮರೆಯಬಾರದು ಎಂದರು. ಆವತಿ ಗ್ರಾಪಂ ಸದಸ್ಯ ರಾಮಣ್ಣ, ಉಮೇಶ್‌, ಪ್ರೇಮಾ ನಾಗರಾಜು, ಸೌಭಾಗ್ಯ, ತಿಮ್ಮರಾಯಪ್ಪ, ಕನ್ನಮಂಗಲ ಗ್ರಾಪಂ ಸದಸ್ಯ ಸೋಮಶೇಖರ್‌, ಮಾಜಿ ಸದಸ್ಯ ಪಾಪಣ್ಣ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next