Advertisement

ವಿವಿಧ ಬೇಡಿಕೆ ಈಡೇರಿಸಲು ಗ್ರಾಪಂ ನೌಕರರ ಆಗ್ರಹ

04:50 PM Feb 25, 2020 | Suhan S |

ಕೋಲಾರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಪಂ ನೌಕರರ ಸಂಘದ ಸದಸ್ಯರು ನಗರದ ಜಿಪಂ ಮುಂದೆ ಸೋಮವಾರ ಧರಣಿ ನಡೆಸಿ ಜಿಪಂ ಸಿಇಒ ದರ್ಶನ್‌ ರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ನಗರದ ಜಿಪಂ ಮುಂದೆ ಜಮಾವಣೆಗೊಂಡ ರಾಜ್ಯ ಗ್ರಾಪಂ ನೌಕರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸರ್ಕಾರ ಆದೇಶ ಹೊರಡಿಸಿ ತಿಂಗಳು ಕಳೆದರೂ ಗ್ರಾಪಂಗಳಲ್ಲಿ ಆದೇಶಗಳು ಜಾರಿಯಾಗುತ್ತಿಲ್ಲ. ಸರ್ಕಾರದ ಆದೇಶಗಳಿಗೆ ಬೆಲೆಯೇ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಗ್ರಾಪಂ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಸರ್ಕಾರಿ ನೌಕರರಂತೆ ಗ್ರಾಪಂ ನೌಕರರಿಗೆ ವೈದ್ಯ ಕೀಯ ವೆಚ್ಚ, ಕನಿಷ್ಠ ವೇತನ ನೀಡಬೇಕು.ಬಿಪಿಎಲ್‌ ಪಡಿತರ ಚೀಟಿಗೆ ಅವಕಾಶ ಕಲ್ಪಿಸಬೇಕು. ಕಾರ್ಯದರ್ಶಿಗಳ ವರದಿಯಂತೆ ನೌಕರರಿಗೆ ಏಕ ಕಾಲದಲ್ಲಿ ಅನುಮೋದನೆ ನೀಡಬೇಕು, ಕನಿಷ್ಠ 21 ಸಾವಿರ ರೂ. ವೇತನ ನಿಗದಿಪಡಿಸಬೇಕೆಂದರು. ಆದೇಶಜಾರಿಗೊಳಿಸಿ:ನಿವೃತ್ತಿ ಆದವರಿಗೆ ಉಪಧನ, ತೆರಿಗೆ ಸಂಗ್ರಹ ದಲ್ಲಿ ಶೇ.40 ವೇತನ ನೀಡಬೇಕು. ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸುವುದು 14ನೇ ಹಣಕಾಸು ಆಯೋಗದಲ್ಲಿ ಶೇ.10ರ ಆಡಳಿತ ವೆಚ್ಚದಲ್ಲಿ ಸಿಬ್ಬಂದಿ ವೇತನ ನೀಡುವುದು ಇತ್ಯಾದಿಗಳನ್ನು. ಪ್ರಧಾನ ಕಾರ್ಯದರ್ಶಿಗಳು ಆದೇಶ ಜಾರಿ ಮಾಡಬೇಕು ಎಂದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಎಷ್ಟೇ ವಿಡಿಯೋ ಕಾಲ್‌ ಮಾಡಿ ಹೇಳಿದರೂ ಕ್ಯಾರೆ ಎನ್ನುತ್ತಿಲ್ಲ. ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈ ಎಲ್ಲಾ ಆದೇಶ ಜಾರಿ ಮಾಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಪಿಡಿಒ ಅವರು ಸರ್ಕಾರಿ ಆದೇಶ ಜಾರಿ ಮಾಡದೇ ಪಂಚಾಯ್ತಿ ಕಾಯಿದೆ ಉಲ್ಲಘಂನೆ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಕ್ರಮ ಕೈಗೊಳ್ಳಿ:ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮರ ನಾರಾಯಣಪ್ಪ, ಇಒ ಪ್ರತಿವಾರ ಸಭೆ ಕರೆದರೂ ಸಿಬ್ಬಂದಿ ವಿಷಯಗಳನ್ನು ಒತ್ತಾಯ ಪೂರಕವಾಗಿ ಹೇಳು ತ್ತಿಲ್ಲ. ಹೀಗಾಗಿತಾವು ಎಲ್ಲಾ ವಿಷಯಗಳನ್ನು ಮೇಲ್ವಿಚಾರಣೆ ನಡೆಸಿ ನಮ್ಮ ಬೇಡಿಕೆ ಈಡೇರಿ ಸಬೇಕು. ಸರ್ಕಾರಿ ಆದೇಶ ಗಳನ್ನು ಚಾಚೂ ತಪ್ಪದೇ ಜಾರಿ ಮಾಡುವಂತೆ ಪಿಡಿಒ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

Advertisement

ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ವಿಜಿಕೃಷ್ಣ ಮಾತನಾಡಿ, ಗ್ರಾಪಂ ನೌಕರರಿಗೆ ಕೆಲಸದ ಒತ್ತಡ ಜಾಸ್ತಿ ಇರುವುದರಿಂದ ಪ್ರತಿ ಗ್ರಾಪಂನಲ್ಲಿ ಇಬ್ಬರು ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಅನುಮೋದನೆ ನೀಡಬೇಕು. ಎಲ್ಲ ನೌಕರರಿಗೂ ನಿವೃತ್ತಿ ಉಪದಾನ ನೀಡಬೇಕು ಹಾಗೂ ಸೇವಾ ಪುಸ್ತಕ ತೆರೆಯಬೇಕು. ಸಿಬ್ಬಂದಿಗೆ ರಕ್ಷಣೆ ನೀಡಬೇಕು. ನೌಕರರಿಗೆ ಪ್ರತಿವರ್ಷ ಸಮವಸ್ತ್ರ ಮತ್ತು ಸೈಕಲ್‌ ಹಾಗೂ ಬ್ಯಾಟರಿ ನೀಡಬೇಕು. ಸೇವೆ ಆಧಾರದ ಮೇಲೆ ಸಂಬಳ ನಿಗದಿ ಮಾಡಬೇಕೆಂಬ ಇಪ್ಪತ್ತಕ್ಕೂ ಹೆಚ್ಚು ಬೇಡಿಕೆಗಳ ಹಕ್ಕೊತ್ತಾಯವನ್ನು ಸರ್ಕಾರಕ್ಕೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

ನೇತೃತ್ವವನ್ನು ಗ್ರಾಪಂ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ, ಖಜಾಂಚಿ ಕೇಶವರಾವ್‌, ರೈತ ಸಂಘದ ಶ್ರೀರಾಮ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next