Advertisement

ಬೇಡಿಕೆ ಈಡೇರಿಕೆಗೆ ಗ್ರಾಪಂ ನೌಕರರ ಪ್ರತಿಭಟನೆ

02:43 PM Jun 01, 2019 | Team Udayavani |

ಹಾವೇರಿ: ಕಳೆದ ಒಂದು ವರ್ಷದಿಂದ ಬಾಕಿ ಉಳಿದ ವೇತನವನ್ನು ತೆರಿಗೆ ಸಂಗ್ರಹದಲ್ಲಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಗ್ರಾಪಂ ನೌಕರರು ಶುಕ್ರವಾರ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

Advertisement

ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಿದ ಗ್ರಾಪಂ ನೌಕರರು, ವಿವಿಧ ಬೇಡಿಕೆಗಳುಳ್ಳ ಮನವಿಯನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ನೀಡಿದರು.

ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಹಲವಾರು ಬಾರಿ ಪ್ರತಿಭಟನೆ, ಧರಣಿ ಸತ್ಯಾಗ್ರಹ ನಡೆಸಿದರೂ ಸರ್ಕಾರ ಗ್ರಾಪಂ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸಿಬ್ಬಂದಿಗೆ ಪ್ರತಿ ತಿಂಗಳು ಸರಿಯಾಗಿ ವೇತನವಾಗದೇ ಗ್ರಾಪಂ ನೌಕಕರು ನಿತ್ಯ ಸಂಕಷ್ಟದಲ್ಲಿಯೇ ಜೀವನ ನಡೆಸುವಂತಾಗಿದ್ದು ನೌಕರರ ಕುಟುಂಬಗಳು ಬೀದಿಗೆ ಬರುವಂತಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಗ್ರಾಪಂ ನೌಕರರ ಸಂಕಷ್ಟ ಪರಿಹರಿಸಲು ಕೂಡಲೇ ಎಂ.ಎಸ್‌. ಸ್ವಾಮಿನಾಥನ್‌ ವರದಿಯಂತೆ ಎಲ್ಲ ಗ್ರಾಪಂ ನೌಕರರನ್ನು ಸರಳೀಕರಿಸಿದ ದಾಖಲಾತಿಯೊಂದಿಗೆ ಪಂಚತಂತ್ರದಲ್ಲಿ ಸೇರಿಸಿ ಎಲ್ಲರಿಗೂ ಏಕಕಾಲದಲ್ಲಿ ಅನುಮೋದನೆ ನೀಡಬೇಕು. ಪಂಚತಂತ್ರದಲ್ಲಿ ನೌಕರರ ಮಾಹಿತಿ ಸೇರಿಸುವಲ್ಲಿ ಪಿಡಿಓಗಳು ವಿಳಂಬ ಧೋರಣೆ ತೋರುತ್ತಿದ್ದು, ಕೂಡಲೇ ಪಿಡಿಓಗಳಿಗೆ ಆದೇಶಿಸಬೇಕು. ವಾಟರ್‌ಮನ್‌, ಪಂಪ್‌ ಆಪ್‌ರೇಟರ್‌, ಸಿಪಾಯಿ ಹಾಗೂ ಸಫಾಯಿಗಳನ್ನು ಬಿಲ್ಕಲೆಕ್ಟರ್‌ ಹುದ್ದೆಗೆ ಬಡ್ತಿ ನೀಡಬೇಕು. ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಯಾವುದೇ ಬಡ್ತಿಯಾಗದೇ ಅರ್ಹ ನೌಕರರಿಗೆ ಅನ್ಯಾಯವಾಗಿದ್ದು, ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಕೆಲವು ಗ್ರಾಪಂಗಳಲ್ಲಿ ಸದಸ್ಯರಿಂದ ನೌಕರರ ಮೇಲೆ ಕಿರುಕುಳ ಹಾಗೂ ಶೋಷಣೆ ನಡೆಯುತ್ತಿದ್ದು, ಇಂಥ ಸದಸ್ಯರ ಸದಸ್ಯತ್ವ ರದ್ದುಗೊಳಿಸಬೇಕು. ನಿವೃತ್ತಿ ಹೊಂದಿದ ನೌಕರರಿಗೆ ಕೂಡಲೇ ನಿವೃತ್ತಿ ವೇತನ ನೀಡಲು ಆದೇಶಿಸಬೇಕು. ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪ್‌ರೇಟರ್‌ಗಳನ್ನು ಬಡ್ತಿಗೆ ಪರಿಗಣಿಸಬೇಕು. ಸಿಪಾಯಿ, ಸಫಾಯಿ, ವಾಟರ್‌ಮನ್‌ ಹಾಗೂ ಪಂಪ್‌ ಆಪ್‌ರೇಟರ್‌ಗಳಿಗೆ ಪ್ರತಿವರ್ಷ ಸಮವಸ್ತ್ರ, ಬ್ಯಾಟರಿ, ಛತ್ರಿ ಹಾಗೂ ಸೈಕಲ್ ನೀಡಬೇಕು. ಸರ್ಕಾರಿ ನೌಕರರಿಗೆ ನೀಡುವಂತೆ ವಾರಕ್ಕೊಂದು ವೇತನ ಸಹಿತ ರಜೆ, ವೈದ್ಯಕೀಯ ಸೌಲಭ್ಯ, ಗಳಿಕೆ ರಜೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

Advertisement

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ವಿ.ಕೆ.ಬಾಳಿಕಾಯಿ, ಪರಮೇಶ್ವರ ಪುರದ, ಜಗದೀಶ ಕೋಟಿ, ಅಜ್ಜಪ್ಪ ಬಾರ್ಕಿ, ಹನುಮಂತಪ್ಪ ತಳವಾರ, ಪ್ರಕಾಶ ದಿವಗೀಹಳ್ಳಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next