Advertisement
ಜಿಲ್ಲೆಯ ಪ್ರತೀ ಗ್ರಾಮಗಳಲ್ಲೂಚುನಾವಣೆ ಹಬ್ಬದ ವಾತಾವರಣನಿರ್ಮಾಣವಾಗಿತ್ತು. ಚುನಾವಣೆ ಸ್ಪರ್ಧೆಗೆಆಕಾಂಕ್ಷಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಗ್ರಾಮದಲ್ಲಿ ಓಡಾಡಿದರು. ಸ್ಪರ್ಧೆಗೆ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದರು. ಅಲ್ಲದೆ,
Related Articles
Advertisement
ಲಕ್ಷಾಂತರ ರೂ. ಖರ್ಚು: ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಅಭ್ಯರ್ಥಿಗಳು ಗೆಲುವಿಗಾಗಿ ಲಕ್ಷಾಂತರ ರೂ. ಹಣ ಖರ್ಚು ಮಾಡಿದ್ದಾರೆ. ತೀವ್ರ ಪೈಪೋಟಿ ಇರುವ ಕೆಲವೊಂದು ಗ್ರಾಮಗಳಲ್ಲಿ 5ರಿಂದ 10 ಲಕ್ಷ ರೂ.ವರೆಗೂ ಹಣ ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಈ ರೀತಿಯಲ್ಲಿ ಅಭ್ಯರ್ಥಿಗಳು ಹಣ ಖರ್ಚುಮಾಡುತ್ತಿದ್ದಾರೆ. ಇನ್ನು ಮುಂದಿನ ತಾಪಂ, ಜಿಪಂ ಚುನಾವಣೆಗಳು ಬರಲಿದ್ದು, ಯಾವ ಮಟ್ಟಿಗೆ ಅಭ್ಯರ್ಥಿಗಳು ಹಣ ಖರ್ಚು ಮಾಡಲಿದ್ದಾರೆ ಎಂಬ ಚರ್ಚೆಗಳು ಗ್ರಾಮಗಳಲ್ಲಿ ನಡೆಯುತ್ತಿದೆ.
ನಿರಾಳದ ನಡುವೆ ಫಲಿತಾಂಶದತ್ತ ಚಿತ್ತ :
ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಅಭ್ಯರ್ಥಿಗಳು ಒಂದು ತಿಂಗಳ ಓಡಾಟಕ್ಕೆ ಬ್ರೇಕ್‌ತೆಗೆದುಕೊಂಡು ನಿರಾಳ ಮನಸ್ಥಿತಿಯಲ್ಲಿದ್ದಾರೆ. ಇದರ ನಡುವೆಫಲಿತಾಂಶ ಏನಾಗಬಹುದು ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ. ಮತದಾನ ಮುಗಿದು ಮತಪೆಟ್ಟಿಗೆಗಳುಸ್ಟ್ರಾಂಗ್ ರೂಂ ಸೇರಿವೆ. ಗ್ರಾಮದಲ್ಲಿ ಯಾರ್ಯಾರುನಮಗೆ ಮತ ಹಾಕಿದ್ದಾರೆ. ಎಷ್ಟು ಮತಗಳು ಬರಲಿವೆ ಎಂಬ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಬೆಟ್ಟಿಂಗ್ ಭರಾಟೆ ಜೋರು.. : ಜಿದ್ದಾಜಿದ್ದಿನಿಂದ ನಡೆದಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂಬ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಜೋರಾಗಿದೆ. ಗ್ರಾಮ ಮಟ್ಟದಲ್ಲಿ ಯುವಕರು, ಮುಖಂಡರು, ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಕಟ್ಟಲು ಮುಂದಾಗಿದ್ದಾರೆ. ಈಗಾಗಲೇ ಮೊದಲ ಹಂತದ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕುಗಳಲ್ಲಿ ಬೆಟ್ಟಿಂಗ್ ವಿಷಯಗಳು ಬೆಳಕಿಗೆ ಬರುತ್ತಿವೆ. ಇನ್ನೂ ಎರಡನೇ ಹಂತದ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಹಾಗೂ ನಾಗಮಂಗಲತಾಲೂಕುಗಳಲ್ಲಿ ಮತದಾನ ಮುಗಿದಿದ್ದು, ಅಭ್ಯರ್ಥಿಗಳ ಪರ ಬೆಟ್ಟಿಂಗ್ ಕಟ್ಟಲು ಸಿದ್ಧತೆಗಳು ನಡೆದಿದ್ದು, ಡಿ.30ರಂದು ಎಲ್ಲದಕ್ಕೂ ಮತದಾರರ ಅಂತಿಮ ನಿರ್ಧಾರ ಹೊರ ಬೀಳಲಿದೆ.
ಹೆಚ್ಚು ಸ್ಥಾನದ ನಿರೀಕ್ಷೆಯಲ್ಲಿ ನಾಯಕರು : ಜಿಲ್ಲೆಯ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ಹೆಚ್ಚಿನ ಸ್ಥಾನಗಳ ನಿರೀಕ್ಷೆಯ ಲೆಕ್ಕಾಚಾರದಲ್ಲಿದ್ದಾರೆ. ಈಗಾಗಲೇ ಜಿಲ್ಲೆಯಾದ್ಯಂತ ಒಟ್ಟಾರೆಯಾಗಿ 548 ಅವಿರೋಧ ಆಯ್ಕೆ ನಡೆದಿದ್ದು,ಇದರಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ಪಕ್ಷಗಳ ಬೆಂಬಲಿತರು ಇದ್ದಾರೆ. ಇನ್ನೂ ಮತದಾನ ನಡೆದಿದರುವ ಬಗ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ತಾಲೂಕು ಅಧ್ಯಕ್ಷರಿಂದ ಎಷ್ಟು ಸ್ಥಾನ ಗೆಲ್ಲಬಹುದು ಎಂಬ ಮಾಹಿತಿಯನ್ನು ಹಾಲಿ-ಮಾಜಿ ಶಾಸಕರು, ಪಕ್ಷಗಳ ಜಿಲ್ಲಾಧ್ಯಕ್ಷರು ಪಡೆಯುತ್ತಿದ್ದಾರೆ.
– ಎಚ್.ಶಿವರಾಜು