Advertisement

ಸ್ಥಳೀಯ ಸಂಸತ್ ಗೆ ಚುನಾವಣೆ: ಸಿದ್ಧಲಿಂಗ ಶ್ರೀ, ಸಚಿವ ಕೋಟ ಮತದಾನ

09:10 AM Dec 22, 2020 | keerthan |

ಮಣಿಪಾಲ: ಸ್ಥಳೀಯ ಸಂಸತ್ ಎಂದೇ ಹೆಸರಾದ ಗ್ರಾಮ ಪಂಚಾಯತ್ ಗಳ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದೆ. ರಾಜ್ಯದ 117 ತಾಲೂಕುಗಳ 3019 ಗ್ರಾಮ ಪಂಚಾಯತ್ ಗಳ 43,238 ಸದಸ್ಯ ಸ್ಥಾನಗಳಿಗೆ ಇಂದು ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ.

Advertisement

ಬೆಳಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗಿದ್ದು, ಮತದಾರರು ಬಳಗ್ಗೆಯಿಂದಲೇ ಮತಗಟ್ಟೆಯತ್ತ ಧಾವಿಸುತ್ತಿದ್ದಾರೆ. ಸಂಜೆ ಐದು ಗಂಟೆಯವರೆಗೆ ಮತದಾನ ನಡೆಯಲಿದ್ದು, 77.38 ಲಕ್ಷ ಪುರುಷ ಮತದಾರರು, 76.45 ಮಹಿಳಾ ಮತದಾರರು ಸಹಿತ 1.53 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ.

ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀಗಳು ಮೈದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಗಂಗಾ ಮತಗಟ್ಟೆ ಸಂಖ್ಯೆ 139 ರಲ್ಲಿ ಮತದಾನ ಮಾಡಿದರು.

ಇದನ್ನೂ ಓದಿ:ಗ್ರಾಮ ಪಂಚಾಯತ್ ಚುನಾವಣೆ: ಮೊದಲ ಹಂತದ ಮತದಾನ ಆರಂಭ

ತುಮಕೂರು ಜಿಲ್ಲೆಯ 5 ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಚುನಾವಣೆ ಬಿಗಿ ಭದ್ರತೆಯ ನಡುವೆ ಆರಂಭವಾಗಿದೆ. ಚುನಾವಣೆ ಪ್ರಾರಂಭವಾದ ಅರಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮತಗಟ್ಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಕೆ.ವಂಸಿಕೃಷ್ಣ ವೀಕ್ಷಣೆ ಮಾಡಿದರು.

Advertisement

ಮುಜರಾಯಿ, ಮೀನುಗಾರಿಕೆ, ಬಂದರು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಹುಟ್ಟೂರು ಕೋಟತಟ್ಟು ಮತಕೇಂದ್ರದಲ್ಲಿ ಪತ್ನಿ ಶಾಂತ ಹಾಗೂ ಪುತ್ರಿಯರಾದ ಸ್ವಾತಿ, ಶ್ರುತಿಯ ಜತೆ ಆಗಮಿಸಿ ಮತದಾನ ಮಾಡಿದರು.‌

ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮ ಪಂಚಾಯತ್ ಒಟ್ಟು 30 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು 13 ಬೂತ್ ಗಳಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಮತದಾರರು ಇಂದು ಮತ ಚಲಾಯಿಸುತ್ತಿದ್ದಾರೆ. ಮತಗಟ್ಟೆಯಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದ್ದು, ಕೋವಿಡ್ ಜಾಗೃತಿಗಾಗಿ ಮತದಾರರಿಗೆ ಥರ್ಮಾಮೀಟರ್ ಮೂಲಕ ತಪಾಸಣೆ ನಡೆಸಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತಿರುವುದು ಕಂಡುಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next