Advertisement
ತಾಲೂಕಿನಲ್ಲಿ ಎರಡನೇ ಹಂತದಲ್ಲಿ ಒಟ್ಟು 27 ಗ್ರಾ.ಪಂ ಪೈಕಿ 24 ಪಂಚಾಯಿತಿಗಳಿಗೆಚುನಾವಣೆ ನಡೆಯಲಿದೆ. ಡಿ. 27ರಂದು 24 ಪಂಚಾಯಿತಿಗಳಲ್ಲಿನ ಒಟ್ಟು 410 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆ ಆಯೋಗದ ಆದೇಶದಂತೆ ನಾಮಪತ್ರ ಸಲ್ಲಿಕೆ, ಪರಿಶೀಲನೆ ನಡೆದಿದೆ. 410 ಸ್ಥಾನಗಳಲ್ಲಿನಾಮಪತ್ರ ಸಲ್ಲಿಸಿದ 1160 ಅಭ್ಯರ್ಥಿಗಳಲ್ಲಿ 302 ಜನ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. 91ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಹೀಗಾಗಿ 319 ಸ್ಥಾನಗಳಿಗೆ 767 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ ಉಳಿದಿದ್ದು, ತಾಲೂಕು ಆಡಳಿತ ಸಿದ್ಧತೆಯಲ್ಲಿ ತೊಡಗಿದೆ.
Related Articles
Advertisement
ಚುನಾವಣೆ ಆಯೋಗದ ನಿಯಮದಂತೆ ಅಭ್ಯರ್ಥಿಗಳನ್ನು ಹರಾಜು ಹಾಕುವುದು ಕಾನೂನಿನ ಪ್ರಕಾರ ಅಪರಾಧ ಹಾಗೂ ನೀತಿ ಸಂಹಿತೆ ಉಲ್ಲಂಘನೆ .ಆದರೆ ಕೆಲ ಗ್ರಾಮಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳನಡುವೆ ರಾತ್ರಿ ವೇಳೆ ಹರಾಜು ನಡೆಸಿ, ಬೆಳಗ್ಗೆಅವಿರೋಧ ಆಯ್ಕೆ ಎಂದು ಹೇಳಲಾಗುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳುಹೆಚ್ಚಿವೆ. ಆದರೆ ಈ ಪ್ರಕರಣಗಳಿಗೆ ಸೂಕ್ತದಾಖಲೆ ಸಿಗದ ಪರಿಣಾಮ ಅಧಿಕಾರಿಗಳು ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
410 ಸ್ಥಾನಗಳಲ್ಲಿ 91 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 319 ಸ್ಥಾನಗಳಿಗೆ ಚುನಾವಣೆ ನಡೆಸಲಾಗುವುದು. ಮತದಾನಕ್ಕೆ ತಾಲೂಕು ಆಡಳಿತದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲೂಕಿನಲ್ಲಿ ಹರಾಜು ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳು ಆಯ್ಕೆಯಾದ ಮಾಹಿತಿ ಬಂದರೆ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. – ಉಮಾಕಾಂತ ಹಳ್ಳೆ, ತಹಶೀಲ್ದಾರ್