Advertisement

ಪಾಲಿಕೆ-ಗ್ರಾಪಂ ಉಪ ಚುನಾವಣೆ ಶಾಂತಿಯುತ

01:48 PM Mar 30, 2021 | Team Udayavani |

ದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ ತೆರವಾಗಿದ್ದ ಎರಡು ವಾರ್ಡ್‌ಗಳಿಗೆ ಹಾಗೂ ಜಿಲ್ಲೆಯ ನಾಲ್ಕು ಗ್ರಾಪಂಗಳಿಗೆ ಸೋಮವಾರ ಶಾಂತಿಯುತ ಮತದಾನ ನಡೆಯಿತು.

Advertisement

ಮಹಾನಗರ ಪಾಲಿಕೆಯ 20ನೇ ವಾರ್ಡ್‌ ಭಾರತ್‌ ಕಾಲೋನಿ ಹಾಗೂ 22ನೇ ವಾರ್ಡ್‌ಯಲ್ಲಮನಗರದ ಎರಡು ಸ್ಥಾನಗಳಿಗೆಹಾಗೂ ದಾವಣಗೆರೆ ತಾಲೂಕಿನ ಬೇತೂರು,ಕನಗೊಂಡನಹಳ್ಳಿ, ಕುಕ್ಕವಾಡ ಹಾಗೂ ಹೊನ್ನಾಳಿತಾಲೂಕಿನ ಅರಬಗಟ್ಟೆ ಗ್ರಾಮ ಪಂಚಾಯಿತಿಯಒಂದು ಸ್ಥಾನಗಳಿಗೆ ಚುನಾವಣೆ ನಡೆಯಿತು. ಮಹಾನಗರ ಪಾಲಿಕೆಯ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 15 ಬೂತ್‌ಗಳಲ್ಲಿಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಾರ್ಡ್‌20ರ ಕಣದಲ್ಲಿದ್ದ ಇಬ್ಬರು ಹಾಗೂ ವಾರ್ಡ್‌22ರ ಕಣದಲ್ಲಿದ್ದ ಏಳು ಜನರ ಭವಿಷ್ಯವನ್ನುಮತದಾರರು ಹೋಳಿಯ ದಿನ ಬರೆದಿದ್ದುಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಎರಡೂವಾರ್ಡ್‌ಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.

ಜಿಲ್ಲೆಯ ನಾಲ್ಕು ಗ್ರಾಪಂಗಳ ಉಪ ಚುನಾವಣೆ17 ಮತಗಟ್ಟೆಗಳಲ್ಲಿ ನಡೆಯಿತು. ಒಟ್ಟು ನಾಲ್ಕು ಗ್ರಾಪಂಗಳ ಒಟ್ಟು 43 ಸ್ಥಾನಗಳಿಗೆ 102ಜನರು ಸ್ಪರ್ಧಿಸಿದ್ದರು. ಮತದಾನ ಪ್ರಕ್ರಿಯೆಸುಗಮವಾಗಿ ನಡೆಯಲು ಪೊಲೀಸರು,ಮತಗಟ್ಟೆ ಸಿಬ್ಬಂದಿ ಸೇರಿ 200ಕ್ಕೂ ಹೆಚ್ಚು ನೌಕರರು ಕಾರ್ಯನಿರ್ವಹಿಸಿದರು. ಮತಗಟ್ಟೆಗೆ ಆಗಮಿಸುವ ಎಲ್ಲ ಮತದಾರರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಸ್ಯಾನಿಟೈಸರ್‌ಹಾಗೂ ಥರ್ಮಲ್‌ ಸ್ಕಾÂನಿಂಗ್‌ ವ್ಯವಸ್ಥೆಮಾಡಲಾಗಿತ್ತು. ಮಾಸ್ಕ್ ಬಿಟ್ಟು ಬಂದವರಿಗೆ ಕೆಲವು ಬೂತ್‌ಗಳಲ್ಲಿ ರಾಜಕೀಯ ಪಕ್ಷಗಳಕಾರ್ಯಕರ್ತರೇ ಮಾಸ್ಕ್ ವಿತರಿಸಿದರು.ಮತಗಟ್ಟೆಯ ಹೊರಗೆ ಸರದಿಯಲ್ಲಿ ಸಾಮಾಜಿಕಅಂತರಕ್ಕಾಗಿ ಕಾಯ್ದುಕೊಳ್ಳಲು ಗುರುತುಗಳನ್ನು ಹಾಕಲಾಗಿತ್ತು.

ಪಾಲಿಕೆ ಉಪ ಚುನಾವಣೆ: ಶೇಕಡಾವಾರು ಮತ ವಿವರ :

ದಾವಣಗೆರೆ: ಮಹಾನಗರ ಪಾಲಿಕೆಯ 20ನೇ ವಾರ್ಡ್‌ನ ಉಪ ಚುನಾವಣೆಯಲ್ಲಿ ಶೇ. 60.73ಮತ್ತು 22ನೇ ವಾರ್ಡ್‌ನಲ್ಲಿ ಶೇ.52.68 ರಷ್ಟು ಮತದಾನವಾಗಿದೆ. ಒಟ್ಟಾರೆ ಶೇ.52.68 ರಷ್ಟು ಮತ ಚಲಾವಣೆಯಾಗಿದೆ. ಭಾರತ್‌ ಕಾಲೋನಿಯ 20ನೇ ವಾರ್ಡ್‌ನಲ್ಲಿ 7 ಮತಗಟ್ಟೆಯಲ್ಲಿ 3625ಪುರುಷರು, 3773 ಮಹಿಳಾ ಮತದಾರರು ಒಳಗೊಂಡಂತೆ ಒಟ್ಟು 7398 ಮತದಾರರಿದ್ದಾರೆ. ಉಪಚುನಾವಣೆಯಲ್ಲಿ 2,265 ಪುರುಷರು, 2,228 ಮಹಿಳಾ ಮತದಾರರು ಸೇರಿದಂತೆ ಒಟ್ಟು 4,493ಮತದಾರರು ಮತ ಚಲಾಯಿಸಿದ್ದಾರೆ. ಗಂಡು ಮಕ್ಕಳು ಶೇ. 62.48 ಹಾಗೂ ಮಹಿಳೆಯರು ಶೇ.59.05 ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ. ಒಟ್ಟಾರೆ ಶೇ. 60.73 ಮತದಾನ ದಾಖಲಾಗಿದೆ.ಯಲ್ಲಮ್ಮ ನಗರದ 22ನೇ ವಾರ್ಡ್‌ನ 8 ಮತಗಟ್ಟೆಯಲ್ಲಿ 4,013 ಪುರುಷರು, 4,042ಮಹಿಳೆಯರು ಹಾಗೂ ಒಬ್ಬರು ಇತರೆ ಮತದಾರರು ಸೇರಿದಂತೆ ಒಟ್ಟು 8056 ಮತದಾರರಿದ್ದಾರೆ. 2,113 ಪುರುಷರು, 2,131 ಮಹಿಳಾ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಶೇ. 56.25 ಪ್ರಮಾಣದಲ್ಲಿ ಪುರುಷರು, ಶೇ.52.72 ಪ್ರಮಾಣದಲ್ಲಿ ಮಹಿಳಾ ಮತದಾರರು ತಮ್ಮ ವಾರ್ಡ್‌ಗಳ ಸದಸ್ಯರ ಭವಿಷ್ಯ ನಿರ್ಧರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next