Advertisement

ಗ್ರಾ.ಪಂ ಮತಯಾಚನೆಗೆ ಇರುವ ನಿರ್ಬಂಧ ತಿಳಿಸಲು ಸರಕಾರ, ಜಿಲ್ಲಾಡಳಿಕ್ಕೆ ಗೊಂದಲ: ಶಾಸಕ ಮೆಂಡನ್

11:47 AM Dec 23, 2020 | Mithun PG |

ಕಾಪು: ಗ್ರಾ.ಪಂ ಚುನಾವಣೆ ಸಂದರ್ಭ ಮತಯಾಚನೆಗೆ ಇರುವ ನಿರ್ಬಂಧ ತಿಳಿಸುವಲ್ಲಿ ಸರಕಾರ, ಜಿಲ್ಲಾಡಳಿತವೇ ಗೊಂದಲದಲ್ಲಿದೆ. ಜನಪ್ರತಿನಿಧಿಗಳು ಮತಯಾಚನೆಗೆ ತೆರಳ ಬಾರದೆಂದೇನೂ ಇಲ್ಲ. ರಾಜ್ಯಾದ್ಯಂತ ಚುನಾವಣೆಗೆ ಇದೇ ರೀತಿಯ ಸಿದ್ದತೆಗಳು ನಡೆಯುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ, ಸರಕಾರವೇ ಪೂರ್ಣ ಗೊಂದಲದಲ್ಲಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.

Advertisement

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ‌ ಮುಖಂಡರು ಮತಯಾಚನೆ‌ ನಡೆಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳ ಆಕ್ಷೇಪದ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷದ ಚಿಹ್ನೆ ಇಲ್ಲವಾದರೂ ನಾವು ಮಾಡಿರುವ ಕೆಲಸದ ಆಧಾರದಲ್ಲಿ ನಮ್ಮವರ ಪರವಾಗಿ ಮತಯಾಚನೆ ನಡೆಸುತ್ತೇವೆ. ಇದು ಪಕ್ಷಾತೀತವಾಗಿ ನಡೆಯುವ ಚುನಾವಣೆಯಾದರೂ ಕೊನೆಗೆ ಗೆದ್ದ ನಂತರ ಪಕ್ಷದ ಬೆಂಬಲಕ್ಕೇ ಬಂದು ಅಧಿಕಾರ ನಡೆಸುವುದು ವಾಡಿಕೆಯಾಗಿದೆ. ಗ್ರಾಮದ ಜನರು, ಪಕ್ಷದ ಕಾರ್ಯಕರ್ತರು ನಮ್ಮನ್ನು ಗೆಲ್ಲಿಸಿದ್ದಾರೆ. ಕಾರ್ಯಕರ್ತರು ನಮ್ಮ ಪರವಾಗಿ ಕೆಲಸ ಮಾಡಿದ್ದರು, ನಾವು ಅವರಿಗೆ ಬೆಂಬಲ ನೀಡಿದರೆ ತಪ್ಪೇನಿಲ್ಲ ಎಂದು ಸ್ಪಷ್ಟನೆ‌ ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ‌ ಯಾರನ್ನು ಗೆಲ್ಲಿಸಬೇಕು‌ ಎನ್ನುವುದನ್ನು ಜನರೇ ತೀರ್ಮಾನಿಸುತ್ತಾರೆ. ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯ ಸಂದರ್ಭದಲ್ಲಿ ನಾವು ಇಷ್ಟರವರೆಗೆ ನಡೆಸಿರುವ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಜನರ ಬಳಿ ತೆರಳುತ್ತಿದ್ದೇವೆ ಎಂದರು.

ಇದನ್ನೂ ಓದಿ: ಕೋವಿಡ್ ರೂಪಾಂತರ; ಎಚ್ಚರಿಕೆಯಿಂದ ಇರುವಂತೆ ಸಚಿವ ರಮೇಶ್ ಜಾರಕಿಹೊಳಿ ಸೂಚನೆ

ಕಾಪು ವಿಧಾನ ಸಭಾ ಕ್ಷೇತ್ರದ 10 ಗ್ರಾಮ ಪಂಚಾಯತ್ ಗಳಿಗೆ ಪ್ರಥಮ ಹಂತದಲ್ಲಿ ಚುನಾವಣೆ ನಡೆದಿದ್ದು, ಎರಡನೇ ಹಂತದಲ್ಲಿ 16 ಗ್ರಾಮ‌ ಪಂಚಾಯತ್ ಗಳಿಗೆ ಚುನಾವಣೆ ನಡೆಯಲಿದೆ. 26 ಗ್ರಾಮ ಪಂಚಾಯತ್ ಗಳ ಪೈಕಿ ಕಾಪು ಕ್ಷೇತ್ರದ 23-24 ಗ್ರಾಮ ಪಂಚಾಯತ್ ಗಳಲ್ಲಿ ಬಿಜೆಪಿ ಬೆಂಬಲಿತ ಆಡಳಿತದ ನಿರೀಕ್ಷೆಯಲ್ಲಿದ್ದೇವೆ ಎಂದರು.

Advertisement

ಕೋವಿಡ್  ಎರಡನೇ ಹಂತದ ಅಲೆಯ ಬಗ್ಗೆ ಜನರೇ ಸ್ವತಃ ಜಾಗೃತರಾಗಬೇಕಿದೆ. ಮಹಾರಾಷ್ಟ್ರದಲ್ಲಿ ಜನರು ನಮಗಿಂತ ಹೆಚ್ಚು ಜಾಗೃತರಾಗಿದ್ದಾರೆ. ಮುಂದುವರಿದ ರಾಷ್ಟ್ರಗಳಲ್ಲೂ ಈ ಬಗ್ಗೆ ಭಾರೀ ಜಾಗೃತೆ ವಹಿಸಲಾಗಿದೆ. ನಮಗಿಂತ ಮುಂದುವರೆದ ಇಂಗ್ಲೆಂಡ್ ಈಗಾಗಲೇ ಕಟ್ಟು ನಿಟ್ಟಿನ ಕ್ರಮದ ಮೂಲಕ ಕೊರೊನಾ ಅಲೆಯಿಂದ ಜನರನ್ನು ರಕ್ಷಿಸಲು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ಕಾರಣದಿಂದ ನಾವು ಸ್ವತಃ ಜಾಗೃತರಾಗಬೇಕಿದೆ ಎಂದರು.

ಇದನ್ನೂ ಓದಿ: ಪೊಂಗಲ್ ಸಂಭ್ರಮ: ಕೋವಿಡ್ ಮಾರ್ಗಸೂಚಿಯಂತೆ ಜಲ್ಲಿಕಟ್ಟು ಆಚರಣೆಗೆ ಅನುಮತಿ: ತಮಿಳುನಾಡು

Advertisement

Udayavani is now on Telegram. Click here to join our channel and stay updated with the latest news.

Next