Advertisement

ಸ್ಥಳೀಯ ಸಂಸ್ಥೆಗೆ ಶಾಂತಿಯುತ ಮತದಾನ

12:31 PM Mar 30, 2021 | Team Udayavani |

ಗೋಕಾಕ: ತಾಲೂಕಿನ ತಳಕಟ್ನಾಳ ಗ್ರಾಮ ಪಂಚಾಯತಿಯ 8 ಸ್ಥಾನಗಳಿಗೆ ಚುನಾವಣೆಯು ಸೋಮವಾರ ನಡೆದು ಒಟ್ಟು ಶೇ. 83.89 ಮತದಾನವಾಗಿದೆ. ಗ್ರಾಮದಲ್ಲಿಕೆಲವೊಂದು ಸಣ್ಣ-ಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಚುನಾವಣೆಯು ಬಹುತೇಕ ಶಾಂತಿಯುತವಾಗಿ ಜರುಗಿತು.

Advertisement

ಉಪ ಚುನಾವಣೆ: ಗೋಕಾಕ ನಗರಸಭೆ ಸದಸ್ಯರಿಬ್ಬರ ಅಕಾಲಿಕ ನಿಧನದಿಂದ ತೆರವಾಗಿದ್ದ 13 ಮತ್ತು 26 ನೇ ವಾರ್ಡುಗಳಿಗೆ ಸೋಮವಾರ ಉಪ ಚುನಾವಣೆ ನಡೆದುಶೇ.59.62 ರಷ್ಟು ಮತದಾನವಾಗಿದೆ. ಇಲ್ಲಿಯ ಬಸವ ನಗರದ ಸರ್ಕಾರಿ ಶಾಲೆಯಲ್ಲಿ ವಾರ್ಡ್‌ 13ರ ಮೂರು ಮತಗಟ್ಟೆಗಳು, ಕುರುಬರ ಫೂಲ ಬಳಿಯಿರುವ ಸರ್ಕಾರಿ ಶಾಲೆಯಲ್ಲಿ ವಾರ್ಡ್‌-26ರ ಎರಡು ಮತಗಟ್ಟೆಗಳಲ್ಲಿಮತದಾರರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮಹಿಳೆಯರು ಉತ್ಸಾಹದಿಂದ ತಮ್ಮ ಮತಗಳನ್ನು ಚಲಾಯಿಸಿದ್ದು ವಿಶೇಷವಾಗಿತ್ತು.

ವಾರ್ಡ್‌ ನಂ 13 ರಲ್ಲಿ ಒಟ್ಟು 2580 ಮತದಾರರ ಪೈಕಿ 1414 ಮತಗಳು ಚಲಾವಣೆಯಾಗಿವೆ. ವಾರ್ಡ ನಂ 26ರಲ್ಲಿ 2342 ಮತದಾರರ ಪೈಕಿ 1536 ಮತಗಳು ಚಲಾವಣೆಯಾಗಿದ್ದು ಶೇಕಡಾ 59.62 ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.

ಸಾಮಾನ್ಯ ಕ್ಷೇತ್ರವಾಗಿರುವ ವಾರ್ಡ ನಂ. 13ರಲ್ಲಿ ರಮೇಶ ರಾಮಚಂದ್ರ ಮುರಗುಂಡಿ,ಪ್ರವೀಣ ಪ್ರಭಾಕರ ಚುನಮರಿ, ವಿಷ್ಣುಗೌಡ ಹಣಮಂತ ಪಾಟೀಲ, ಅಭಿಷೇಕ ಸಿದ್ದಲಿಂಗ ದಳವಾಯಿ, ಜ್ಯೋತಿ ಮಹಾಲಿಂಗಪ್ಪ ಕೊಲ್ಹಾರ, ಅರುಣಕುಮಾರ ಚಂದ್ರಪ್ಪ ಕರಣಿ ಕಣದಲ್ಲಿದ್ದಾರೆ. ಹಿಂದುಳಿದ ವರ್ಗ ಅ ಮೀಸಲಾಗಿರುವ ವಾರ್ಡ ನಂ 26 ರಲ್ಲಿ ಬಾಬು ಕೃಷ್ಣಪ್ಪ ಮುಳಗುಂದ, ಇಮಾಮಸಾಬಹುಸೇನಸಾಬ ಪಾಜನಿಗರ ಕಣದಲ್ಲಿದ್ದು ಎಲ್ಲರೂ ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದ್ದು 31 ರಂದು ಮತ ಎಣಿಕೆ ಜರುಗಲಿದೆ.

ಮತದಾನ ಬಹಿಷ್ಕಾರ: ಗೋಕಾಕ ತಾಲೂಕಿನ ಖನಗಾಂವ ಗ್ರಾಮ ಪಂಚಾಯತ್‌ವ್ಯಾಪ್ತಿಯ ಗುಡನಟ್ಟಿ ಗ್ರಾಮದ ವಾರ್ಡ್‌ ನಂ 5ರಲ್ಲಿ ಎರಡು ಸ್ಥಾನಗಳಿಗೆ ಎಸ್‌. ಟಿ. ಸಾಮಾನ್ಯ ಹಾಗೂ ಎಸ್‌.ಟಿ.ಮಹಿಳೆ ಮೀಸಲು ಹೊರಡಿಸಿ ಚುನಾವಣೆಯನ್ನು ಸೋಮವಾರ ನಿಗದಿಪಡಿಸಲಾಗಿತ್ತು. ಎಸ್‌. ಟಿ. ಸಾಮಾನ್ಯ ಕ್ಷೇತ್ರಕ್ಕೆ 6 ನಾಮಪತ್ರಗಳು, ಎಸ್‌.ಟಿ.ಮಹಿಳಾ ಕ್ಷೇತ್ರಕ್ಕೆ ಎರಡು ನಾಮಪತ್ರಗಳು ಸಲ್ಲಿಕೆಯಾಗಿದ್ದು. ಗುಡನಟ್ಟಿ ಗ್ರಾಮದಲ್ಲಿ ಅ ವರ್ಗದ ಮತದಾರರೇ ಹೆಚ್ಚಿಗೆ ಇರುವಾಗ ಮೀಸಲಾತಿಯ ಕುರಿತು ಅಪಸ್ವರವೆದ್ದು ಮತದಾನ ಬಹಿಷ್ಕಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಗ್ರಾಮದ ಅಭಿವೃದ್ಧಿಗಾಗಿ ಇನ್ನೊಂದು ಗ್ರಾಮದವರು ನಮ್ಮ ಗ್ರಾಮದಿಂದ ಸ್ಪರ್ಧಿಸಿ ಆಯ್ಕೆಯಾದರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎನ್ನುವ ದೃಷ್ಟಿಯಿಂದ ಮತದಾನದ ಪ್ರಕ್ರಿಯೆಯಿಂದ ಹಿಂದೆ ಸರಿಯಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Advertisement

ಈ ಹಿಂದೆಯೂ ಚುನಾವಣೆಯ ದಿನಾಂಕ ನಿಗದಿಯಾದಾಗ ಯಾವುದೇ ನಾಮಪತ್ರ ಸಲ್ಲಿಕೆಯಾಗದೇ ಚುನಾವಣೆ ಮುಂದೂಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next