Advertisement

ಗ್ರಾಮ ಪಂಚಾಯತ್‌ ಕದನ: 4111 ನಾಮಪತ್ರ ಸಲ್ಲಿಕೆ

05:02 PM Dec 13, 2020 | Suhan S |

ಶಿವಮೊಗ್ಗ: ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆ ಮೊದಲ ಹಂತದ ನಾಮಪತ್ರ ಸಲ್ಲಿಕೆ ಅವಧಿ  ಮುಕ್ತಾಯವಾಗಿದ್ದು ಮೂರು ತಾಲೂಕಿನ 112 ಗ್ರಾಪಂನ 1212 ಕ್ಷೇತ್ರಗಳಿಗೆ 4111 ನಾಮಪತ್ರ ಸಲ್ಲಿಕೆಯಾಗಿವೆ.

Advertisement

ಡಿ.12ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು 14ರಂದು ಉಮೇದುವಾರಿಕೆ ಹಿಂಪಡೆಯಲುಕಡೇ ದಿನವಾಗಿರುತ್ತದೆ. ಬಳಿಕವಷ್ಟೇ ಮೊದಲ ಹಂತದ ಚುನಾವಣಾ ಕಣದ ಸ್ಪಷ್ಟ ಚಿತ್ರಣ ಸಿಗಲಿದೆ. 14ರ ಮಧ್ಯಾಹ್ನ 3ರ ಬಳಿಕ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಲಾಗುತ್ತದೆ.

ಎರಡನೇ ಹಂತದಲ್ಲಿ ನಾಲ್ಕು ತಾಲೂಕು ವ್ಯಾಪ್ತಿಯಲ್ಲಿ ನಡೆಯುವ ಚುನಾವಣೆಗೆ ಶುಕ್ರವಾರ ನಾಮಪತ್ರಸಲ್ಲಿಕೆ ಆರಂಭವಾಗಿದೆ. ಮೊದಲ ದಿನನಾಲ್ಕು ತಾಲೂಕುಗಳಿಂದ ಒಟ್ಟು 378 ನಾಮಪತ್ರ ಸಲ್ಲಿಕೆಯಾಗಿವೆ. ಶಿಕಾರಿಪುರ,ಸೊರಬ, ಸಾಗರ ಹಾಗೂ ಹೊಸನಗರ ತಾಲೂಕಿನ ಒಟ್ಟು 131 ಗ್ರಾಪಂಗಳ 1,397 ಸ್ಥಾನಗಳಿಗೆ ಡಿ.27ರಂದು ಚುನಾವಣೆ ನಡೆಯಲಿದೆ. ಮೊದಲ ದಿನ ಶಿಕಾರಿಪುರತಾಲೂಕಿನಲ್ಲಿ 77, ಸೊರಬ 92, ಸಾಗರ 114 ಹಾಗೂ ಹೊಸನಗರದಲ್ಲಿ 95 ನಾಮಪತ್ರಗಳ ಸಲ್ಲಿಕೆಯಾಗಿದೆ. ಶಿಕಾರಿಪುರ ತಾಲೂಕಿನ ಮೊದಲ ದಿನವಾದ ಶುಕ್ರವಾರ 77 ನಾಮಪತ್ರಗಳು ಸಲ್ಲಿಕೆಯಾಗಿದ್ದು ಶನಿವಾರ ಇನ್ನೂ ಹೆಚ್ಚಿನ ನಾಮಪತ್ರಗಳು ಸಲ್ಲಿಕೆಯಾಗುವ ಸಾಧ್ಯತೆಗಳಿವೆ.

11 ಸ್ಥಾನಗಳಿಗೆ ಉಮೇದುವಾರಿಕೆಯೇ ಇಲ್ಲ :

ಶುಕ್ರವಾರ ಅಂತ್ಯಗೊಂಡ ಮೊದಲ ಹಂತದ ಗ್ರಾಪಂ ಚುನಾವಣೆಯಲ್ಲಿ 11 ಸ್ಥಾನಗಳಿಗೆ ಯಾರೂ ಉಮೇದುವಾರಿಕೆ ಸಲ್ಲಿಸಿಲ್ಲ. ಈ ಎಲ್ಲ 11 ಸ್ಥಾನಗಳು ಶಿವಮೊಗ್ಗ ತಾಲೂಕಿಗೆ ಒಳಪಟ್ಟಿವೆ. ಭದ್ರಾವತಿ ಹಾಗೂ ತೀರ್ಥಹಳ್ಳಿಯಲ್ಲಿ ಶೇ.100ರಷ್ಟು ಉಮೇದುವಾರಿಕೆಸಲ್ಲಿಕೆಯಾಗಿದೆ. ಹೊಸಹಳ್ಳಿಯ 1 ಸ್ಥಾನ, ಕಡೇಕಲ್‌ 1, ಹೊಳೆಬೆನವಳ್ಳಿ 1, ಶೆಟ್ಟಿಹಳ್ಳಿ 1, ಸೂಗೂರು 1, ಹೊಳಲೂರು 1, ತಮ್ಮಡಿಹಳ್ಳಿ 1, ಕೊಮ್ಮನಾಳು 1, ಕುಂಚೇನಹಳ್ಳಿ 1, ಮುದ್ದಿನಕೊಪ್ಪ 1, ಕೊನಗವಳ್ಳಿ 1 ಸೇರಿ ಒಟ್ಟು 11 ಸ್ಥಾನಗಳಿಗೆ ಉಮೇದುವಾರಿಕೆ ಸಲ್ಲಿಕೆಯಾಗಿಲ್ಲ. ಮೀಸಲಾತಿ ವ್ಯತ್ಯಾಸದಿಂದ ಯಾರೂ ಮುಂದೆ ಬಂದಿಲ್ಲ ಎಂದು ಹೇಳಲಾಗುತ್ತಿದೆ

Advertisement

ಗ್ರಾಪಂ ಚುನಾವಣೆ ಕಂಟ್ರೋಲ್‌ ರೂಂ :

ಗ್ರಾಪಂ ಚುನಾವಣೆ ಅಕ್ರಮಗಳಿಗೆ ಸಂಬಂಧಿ ಸಿ ತಾಲೂಕು ವ್ಯಾಪ್ತಿಯ ದೂರು ಸ್ವೀಕರಿಸಲು ಕಂಟ್ರೋಲ್‌ ರೂಂ ತೆರೆದಿದ್ದು ಯಾವುದೇ ಸಮಯದಲ್ಲಿ (08182-279311) ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದು ತಹಶೀಲ್ದಾರ್‌ ಎಸ್‌.ಜೆ. ನಾಗರಾಜ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next