Advertisement
ಮೂರೂ ತಾಲೂಕುಗಳ 113 ಗ್ರಾಪಂಗಳ1,212 ಸ್ಥಾನಗಳ ಪೈಕಿ ಶಿವಮೊಗ್ಗ ತಾಲೂಕಿನಲ್ಲಿ24, ಭದ್ರಾವತಿ ತಾಲೂಕಿನಲ್ಲಿ 44 ಮತ್ತುತೀರ್ಥಹಳ್ಳಿ ತಾಲೂಕಿನಲ್ಲಿ 14 ಸ್ಥಾನಗಳಿಗೆಅವಿರೋಧ ಆಯ್ಕೆಯಾಗಿದೆ. ಶಿವಮೊಗ್ಗತಾಲೂಕಿನ ಹೊಸಹಳ್ಳಿ ಗ್ರಾಪಂನ ತಟ್ಟಿಕೆರೆ ಮತ್ತು ಕುಂಚೇನಹಳ್ಳಿ ಗ್ರಾಪಂನ ಕುಂಚೇನಹಳ್ಳಿಯಲ್ಲಿ ತಲಾ ಒಂದು ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ, 2 ಸ್ಥಾನಗಳು ಖಾಲಿ ಉಳಿದಿವೆ. ಡಿ.22ರಂದು1,128 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅಂತಿಮವಾಗಿ ಸಾಮಾನ್ಯ ಕ್ಷೇತ್ರದಿಂದ 1,804 ಮತ್ತುಮಹಿಳಾ ಮೀಸಲು ಕ್ಷೇತ್ರದಲ್ಲಿ 1,480 ಸೇರಿದಂತೆ 3,284 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
Related Articles
Advertisement
ತೋಟದ ಮನೆಗಳು ರಶ್: ಹಳ್ಳಿಗಳಲ್ಲಿ ಪಾರ್ಟಿಗಳಿಗೆ ಈಗ ಬರವಿಲ್ಲ. ಆಕಾಂಕ್ಷಿಗಳ ಮತಗಳನ್ನು ಸೆಳೆಯಲು ಊರ ಹೊರಗಿನ ಜಾಗಗಳನ್ನು ಆಯ್ಕೆಮಾಡಿಕೊಂಡಿದ್ದಾರೆ. ಕೋಳಿ ಫಾರಂಗಳು, ತೋಟದಮನೆಗಳು, ದಟ್ಟಡವಿ ನಡುವಿನ ಒಂಟಿ ಮನೆಗಳು, ಕೊಟ್ಟಿಗೆಗಳು ರಂಗೇರತೊಡಗಿವೆ. ಹೆಚ್ಚು ಜನಸೇರಿಸಿದಲ್ಲಿ ಬಯಲಾಗುತ್ತದೆ ಎಂಬ ಕಾರಣಕ್ಕೆ ಪ್ರತಿದಿನನಿಗದಿತ ಜನರನ್ನು ಸೇರಿಸಿ ಪಾರ್ಟಿ ಮಾಡಲಾಗುತ್ತಿದೆ.ಹೀಗಾಗಿ ಹಳ್ಳಿಗಳಲ್ಲಿ ಈಗ ನಿತ್ಯವೂ ಗುಂಡು ತುಂಡಿನಸಮಾರಾಧನೆ ನಡೆಯುತ್ತಿದೆ. ಕೆಲವರು ಆ ಮೂಲಕ ಗುಂಡು ಪ್ರಿಯ ಮತದಾರರನ್ನು ಸಂತೃಪ್ತಿಗೊಳಿಸುವ ಪ್ರಯತ್ನ ನಡೆಸಿದ್ದಾರೆ. ತೋಟದ ಮನೆಗಳಿಗೆ ಒಲ್ಲೆಎನ್ನುವವರನ್ನು ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಕರೆದೊಯ್ಯಲಾಗುತ್ತಿದೆ.
ಗುಂಡು-ತುಂಡಿನ ಪಾರ್ಟಿ ಸಾಮಾನ್ಯವಾಗಿರುವುದರಿಂದ ಕೋಳಿ ಮತ್ತು ಮದ್ಯಕ್ಕೆ ಭಾರಿ ಬೇಡಿಕೆ ಸೃಷ್ಟಿಸಿದೆ. ಮೊದಲ ಹಂತದ ಮತದಾನಕ್ಕೆ ಇನ್ನೂಆರು ದಿನ ಮತ್ತು ಎರಡನೇ ಹಂತದ ಮತದಾನಕ್ಕೆ 11ದಿನ ಇರುವುದರಿಂದ ಹಳ್ಳಿಗಳಿಗೆ ಮದ್ಯದ ಪೂರೈಕೆ ಹೆಚ್ಚಾಗಿದೆ. ಎಲ್ಲ ಕಡೆ ಬೇಡಿಕೆ ಹೆಚ್ಚಾಗಿರುವುದರಿಂದ ಕೋಳಿ ಮತ್ತು ಎಣ್ಣೆ ವ್ಯಾಪಾರವನ್ನುದ್ವಿಗುಣಗೊಳಿಸಿದೆ.
ಹಳ್ಳೀಲಿ ಫೈಟು- ಪ್ಯಾಟೇಲಿ ಮಂಕು : ರಾಜ್ಯದೆಲ್ಲೆಡೆ ಹಳ್ಳಿಗಳಲ್ಲಿ ಗ್ರಾಪಂ ಚುನಾವಣೆ ನಡೆಯುತ್ತಿದ್ದರೆ ಪೇಟೆ ಜನರಿಗೆ ಮಾತ್ರ ಅದರಅರಿವೇ ಇಲ್ಲ. ಹಳ್ಳಿಗಳಲ್ಲಿ ಪ್ರತಿ ಮನೆ, ಅರಳಿಕಟ್ಟೆ, ಹೋಟೆಲ್, ಅಂಗಡಿ ಸೇರಿದಂತೆ ನಾಲ್ಕು ಜನಸೇರಿದ ಕಡೆಗಳಲ್ಲೆಲ್ಲ ಚುನಾವಣೆಯದ್ದೇ ಮಾತು. ಯಾರು ಹೇಗೆ ಪ್ರಚಾರ ಮಾಡುತ್ತಿದ್ದಾರೆ, ಯಾರ ಪರವಾಗಿ ಅಲೆ ಇದೆ, ಯಾರು ಗೆಲ್ಲಬಹುದು, ಅವರೇನು ತಂತ್ರ ನಡೆಸಿದ್ದಾರೆ ಎಂಬುದೇ ಮಾತು. ಗ್ರಾಮಗಳಲ್ಲಿ ಚುನಾವಣೆ ರಂಗೇರಿದ ಬಳಿಕ ಜನರು ಪೇಟೆಯತ್ತ ಸುಳಿಯುವುದೂ ಕಡಿಮೆಯಾಗಿದೆ.