ಚಿಕ್ಕಬಳ್ಳಾಪುರ: ಬಾಗೇಪಲ್ಲಿ, ಶಿಡ್ಲಘಟ್ಟ ಹಾಗೂ ಚಿಂತಾಮಣಿ ತಾಲೂಕುಗಳ 84 ಗ್ರಾಪಂಗಳ ಒಟ್ಟು 672 ಕ್ಷೇತ್ರಗಳಿಗೆ ಡಿ.22ರಂದು ಮತದಾನ ನಡೆಯಲಿದ್ದು, ತೊಂದರೆಯಾಗದಂತೆ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ, ತಹಶೀಲ್ದಾರ್ ಹಾಗೂ ಆಯಾ ತಾಲೂಕುಗಳ ಚುನಾವಣಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳಕಚೇರಿಸಭಾಂಗಣದಲ್ಲಿ ಮೊದಲ ಹಂತದ ಗ್ರಾಪಂ ಚುನಾವಣೆ ಪೂರ್ವಸಿದ್ಧತೆ ಸಂಬಂಧ ಶನಿವಾರ ನಡೆಸಿದ ವಿಡಿಯೋ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಮೂರು ತಾಲೂಕುಗಳ ಒಟ್ಟು 1,348 ಸದಸ್ಯ ಸ್ಥಾನಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಈಪೈಕಿ ಚಿಂತಾಮಣಿಯಲ್ಲಿ 35 ಗ್ರಾಪಂಗಳ 572 ಸ್ಥಾನ, ಶಿಡ್ಲಘಟ್ಟ ತಾ.24 ಗ್ರಾಪಂಗಳ 374 ಸ್ಥಾನ ಹಾಗೂ ಬಾಗೇಪಲ್ಲಿ ತಾ.25 ಗ್ರಾಪಂಗಳ 402 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 748 ಮತಗಟ್ಟೆಸ್ಥಾಪಿಸಲಾಗಿದೆ. ಮೊದಲ ಹಂತದಲ್ಲಿ ಮೂರು ತಾಲೂಕುಗಳಿಂದ ಒಟ್ಟು4,29,356 ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ ಎಂದರು.
ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗೆ ತೆರಳುವ ಮತಗಟ್ಟೆ ಅಧಿಕಾರಿಗಳಿಗೆ ವಾಹನ ವ್ಯವಸ್ಥೆ ಮಾಡಬೇಕು. ಚುನಾವಣೆ ಕಾರ್ಯಕ್ಕೆ ತೆರಳುವ ತಂಡದ ಜೊತೆಗೆ ಒರ್ವ ಪೊಲೀಸ್ ಪೇದೆ ಕಡ್ಡಾಯವಾಗಿ ಇರಬೇಕು. ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಕೊರೊನಾ ಮಾರ್ಗಸೂಚಿ ಪಾಲಿಸಬೇಕು, ಆಶಾಕಾರ್ಯಕರ್ತೆಯರನ್ನು ನೇಮಿಸಬೇಕು ಎಂದು ಆಯಾ ತಾಲೂಕು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.
ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾತ ನಾಡಿ, ಮೂರು ತಾಲೂಕುಗಳಲ್ಲಿ ಇದುವರೆಗೆ 74 ಅತಿಸೂಕ್ಷ್ಮ, 112 ಸೂಕ್ಷ್ಮ ಮತ್ತು 562 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಜಿಪಂ ಉಪ ಕಾರ್ಯದರ್ಶಿ ನೋಮೇಶ್, ಡಿವೈಎಸ್‌ಪಿ ರವಿಶಂಕರ್, ವಿವಿಧ ತಾಲೂಕುಗಳತಹಶೀಲ್ದಾರ್‌ಗಳುಮತ್ತು ಚುನಾವಣಾ ಶಾಖೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸೋಂಕಿತರು ಕೊನೆಯಲ್ಲಿ ಮತದಾನ :
ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟೀವ್ ಬಂದಿರುವ ಮತದಾರರು ಅಥವಾ ಲಕ್ಷಣಗಳು ಇರುವವರು ಮತದಾನ ಮುಗಿಯುವ ಒಂದು ಗಂಟೆ ಮುಂಚಿತವಾಗಿ ಮತಗಟ್ಟೆಗೆ ಬಂದು ಮತ ಹಾಕಬಹುದು. ಇದಕ್ಕೂ ಮುನ್ನ ಆ ವ್ಯಕ್ತಿ ಲಿಖೀತ ರೂಪದಲ್ಲಿ ಅರ್ಜಿ ಬರೆದು ನಿಮ್ಮ ನಿಮ್ಮ ಭಾಗದ ಮತಗಟ್ಟೆ ಅಧಿಕಾರಿ(ಆರ್‌ಒ)ಗಳ ಗಮನಕ್ಕೆ ತರಬೇಕು ಜಿಲ್ಲಾಧಿಕಾರಿಗಳು ತಿಳಿಸಿದರು.