Advertisement

ಮದುವೆ ಮಂಟಪದಿಂದ ಬಂದು ನಾಮಪತ್ರ ಸಲ್ಲಿಸಿದ ವರ

08:27 PM Dec 10, 2020 | mahesh |

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಪಂಚಾಯಿತ್ ಚುನಾವಣೆಗೆ ಸ್ಪರ್ಧಿಸಲು ನವವಿವಾಹಿತ ವರನೊಬ್ಬ ಗ್ರಾ.ಪಂ. ಕಛೇರಿಗೆ ಆಗಮಿಸಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.

Advertisement

ಮಕಬುಲ್‍ ಬನ್ನೆಟ್ಟಿ ಎನ್ನುವವರು ಮದುಮಗನ ವೇಷಭೂಷಣ ಸಮೇತ ಬಿದರಕುಂದಿ ಗ್ರಾಪಂ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಪತ್ರಕರ್ತರೂ ಆಗಿರುವ ಬನ್ನೆಟ್ಟಿ ಅವರ ಮದುವೆ ತಾಳಿಕೋಟೆ ತಾಲೂಕು ಬಿಂಜಲಭಾವಿ ಗ್ರಾಮದಲ್ಲಿ ಬುಧವಾರ ನಡೆದಿತ್ತು. ಗುರುವಾರ ಬಿದರಕುಂದಿ ಗ್ರಾಮದಲ್ಲಿ ಅವರ ಸಹೋದರನ ಮದುವೆ ಹಾಗೂ ಇವರ ವಲೀಮಾ ಇತ್ತು. ವಲಿಮಾ ಇದ್ದದ್ದರಿಂದ ಅವರಿನ್ನೂ ಮದುಮಗನ ವೇಷದಲ್ಲೇ ಇದ್ದರು. ಶುಕ್ರವಾರವೂ ಬಿಡುವಿಲ್ಲದ ಕಾರ್ಯಕ್ರಮ ಇದ್ದುದರಿಂದ ಮತ್ತು ಶುಕ್ರವಾರ ನಾಮಪತ್ರ ಸಲ್ಲಿಸಲು ಕೊನೇ ದಿನ. ಹೀಗಾಗಿ ಕೊನೇ ದಿನ ಒತ್ತಡ ಹೆಚ್ಚು ಎಂಬ ಕಾರಣಕ್ಕೆ ಗುರವಾರವೇ ನಾಮಪತ್ರ‌ ಸಲ್ಲಿಸಿದ್ದಾರೆ.

ನನಗೆ ಗ್ರಾಮದ ಸಮಸ್ಯೆಗಳ ಅರಿವಿದೆ. ಪತ್ರಿಕೆಗಳಲ್ಲಿ ಹಲವು ಬಾರಿ ಸಮಸ್ಯೆಗಳನ್ನು ಬರೆದು ಅಧಿಕಾರಿಗಳ ಗಮನಕ್ಕೆ ತಂದು ಸುಧಾರಣೆಗೆ ಯತ್ನಿಸಿದ್ದೆ. ಜನಪ್ರತಿನಿಧಿ ಆದಲ್ಲಿ ಸುಧಾರಣೆಗೆ ಹೆಚ್ಚು ಅವಕಾಶ ಇರುವುದನ್ನು ಅರಿತು ಚುನಾವಣೆಗೆ ಸ್ಪರ್ಧಿಸುವ ತೀರ್ಮಾನ ಮಾಡಿ, ನಾಮಪತ್ರ ಸಲ್ಲಿಸಿದ್ದೇನೆ.ಗ್ರಾಮದ ಮತದಾರರು ನನಗೆ ಆಶಿರ್ವದಿಸುವ ವಿಶ್ವಾಸವಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next