ಹಾವೇರಿ: ಎರಡನೇ ಹಂತದಲ್ಲಿ ಮತದಾನ ನಡೆಯುವ ಜಿಲ್ಲೆಯ ನಾಲ್ಕು ತಾಲೂಕುಗಳ 105 ಗ್ರಾಪಂಗಳ 1,464 ಸ್ಥಾನಗಳಿಗೆ ಡಿ.16ರವರೆಗೆ ಒಟ್ಟು 4958 ಅಭ್ಯರ್ಥಿಗಳು ನಾಮಪತ್ರಸಲ್ಲಿಸಿದ್ದಾರೆ.
ಎರಡನೇ ಹಂತದಲ್ಲಿ ಡಿ. 27ರಂದು ಮತದಾನ ನಡೆಯುವ ಜಿಲ್ಲೆಯ ಬ್ಯಾಡಗಿ, ಸವಣೂರು, ಶಿಗ್ಗಾವಿ ಹಾಗೂ ಹಾನಗಲ್ಲ ತಾಲೂಕುಗಳ 105 ಗ್ರಾಪಂಗಳ 1,464 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ ನಾಮಪತ್ರ ಸಲ್ಲಿಕೆ ಕೊನೆಯದಿನದವರೆಗೆ ಬ್ಯಾಡಗಿ ತಾಲೂಕು-753,ಸವಣೂರು- 1040, ಶಿಗ್ಗಾವಿ- 1340,ಹಾನಗಲ್ಲ ತಾಲೂಕಿನಲ್ಲಿ 1825 ನಾಮಪತ್ರ ಸಲ್ಲಿಕೆಯಾಗಿದೆ. ಸಲ್ಲಿಕೆಯಾಗಿರುವ 4958 ನಾಮಪತ್ರಗಳಲ್ಲಿ ಮಹಿಳಾ ಮೀಸಲು ಸ್ಥಾನಕ್ಕೆ 858, ಸಾಮಾನ್ಯಕ್ಕೆ 1921, ಎಸ್‌ಸಿ ಮೀಸಲಿಗೆ 771, ಎಸ್‌ಟಿ ಮೀಸಲಿಗೆ 484, ಹಿಂದುಳಿದ ಅ ವರ್ಗಕ್ಕೆ 717, ಹಿಂದುಳಿದ ಬ ವರ್ಗಕ್ಕೆ 207 ಸೇರಿವೆ. ಡಿ.17ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ ಡಿ.27ರಂದು ಬೆ. 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ.
ಸ್ಪರ್ಧಾ ಕಣದಲ್ಲಿ 1149 ಅಭ್ಯರ್ಥಿಗಳು :
ರಾಣಿಬೆನ್ನೂರ: ತಾಲೂಕಿನ 40 ಗ್ರಾಪಂಗಳ ಪೈಕಿ ಇದೀಗ 33 ಗ್ರಾಪಂಗಳಿಗೆ ಡಿ.22ರಂದು ಚುನಾವಣೆ ನಡೆಯುತ್ತಿದ್ದು, ಒಟ್ಟು 491 ಸದಸ್ಯ ಸ್ಥಾನದಲ್ಲಿ ಈಗಾಗಲೇ 33 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇನ್ನುಳಿದ ಒಟ್ಟು 458 ಸ್ಥಾನಗಳಿಗೆ 1149 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
633 ಪುರುಷರು ಹಾಗೂ 516 ಮಹಿಳೆಯರು ಸ್ಪರ್ಧೆಯಲ್ಲಿದ್ದು, ಇದರಲ್ಲಿ 198 ಪರಿಶಿಷ್ಟ ಜಾತಿ, 113 ಪರಿಶಿಷ್ಟ ಪಂಗಡ, 169 ಅ ವರ್ಗ, 50 ಬ ವರ್ಗ ಹಾಗೂ 619 ಸಾಮಾನ್ಯ ಮೀಸಲಾತಿಯಿಂದ ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಉಳಿದ 7 ಗ್ರಾಪಂಗಳಿಗೆ ಅವ ಧಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿಲ್ಲ. ಬಹುತೇಕ ಕಡೆ ತುರುಸಿನ ಸ್ಪರ್ಧೆಗಳು ಏರ್ಪಟ್ಟಿವೆ.